Bigg Boss: ಬಿಗ್‌ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಫಿನಾಲೆಗೆ ದಿನಾಂಕ ಫಿಕ್ಸ್..

ಕನ್ನಡದ ಬಿಗ್ ರಿಯಾಲಿಟಿ ಶೋಗಳಲ್ಲಿ ಬಿಗ್‌ಬಾಸ್ ಕೂಡ ಒಂದು. ಬಿಗ್‌ಬಾಸ್ ಕನ್ನಡ ಸೀಸನ್ 11 ಮುಗಿಯಲು ಇನ್ನೇನು ಕೆಲವೇ ಕೆಲವು ವಾರಗಳು ಬಾಕಿ ಇವೆ. ಈ ಬಾರಿಯ ಬಿಗ್‌ಬಾಸ್ ಆರಂಭವಾಗಿದ್ದು ಸೆಪ್ಟೆಂಬರ್ 29ರಂದು. ಹಲವು ಡ್ರಾಮಗಳಿಗೆ ಈ ಬಾರಿಯ ಬಿಗ್‌ಬಾಸ್ ಸಾಕ್ಷಿಯಾಗಿದೆ.
ಪ್ರಸ್ತುತ 90 ದಿನಗಳನ್ನು ಪೂರ್ಣಗೊಳಿಸಿ ಬಿಗ್‌ಬಾಸ್ ಮುನ್ನಡೆಯುತ್ತಿದೆ. ಈ ನಡುವೆ ಬಿಗ್‌ಬಾಸ್ ಫಿನಾಲೆ ಯಾವಾಗ ನಡೆಯುತ್ತದೆ ಎನ್ನುವುದಕ್ಕೆ ದಿನಾಂಕ ಫಿಕ್ಸ್ ಆಗಿದೆ.
ಹೌದು… ಈ ಬಾರಿ ಒಂದು ವಾರ ಹೆಚ್ಚುವರಿಯಾಗಿ ಬಿಗ್‌ಬಾಸ್ ನಡೆಯುತ್ತದೆ ಎಂದು ಹೇಳಲಾಗುತ್ತಿದೆ. ಬಿಗ್‌ಬಾಸ್ ಈಗಾಗಲೇ ಮೂರು ತಿಂಗಳು ಪೂರ್ಣಗೊಳಿಸಿದೆ. ಸದ್ಯ ದೊಡ್ಮನೆಯಲ್ಲಿ ಒಂಬತ್ತು ಜನ ಇದ್ದಾರೆ. ಈ ವಾರ ಮನೆಯಿಂದ ಒಬ್ಬರು ಹೊರಬಂದರೆ ಸ್ಪರ್ಧಿಗಳ ಸಂಖ್ಯೆ ಎಂಟಕ್ಕೆ ಇಳಿಕೆಯಾಗಲಿದೆ. ಜೊತೆಗೆ ಬಿಗ್‌ಬಾಸ್ ಫಿನಾಲೆ ವಾರಕ್ಕೆ ತುಂಬಾ ಹತ್ತಿರವಾಗುತ್ತಿದ್ದು ವಿಜೇತರನ್ನು ಘೋಷಣೆ ಮಾಡಲು ವೇದಿಕೆ ಸಜ್ಜಾಗುತ್ತಿದೆ. ಹಾಗಾದರೆ ಬಿಗ್‌ಬಾಸ್ ಫಿನಾಲೆ ಎಪಿಸೋಡ್ ಯಾವಾಗ?
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ತೊಂಬತ್ತು ದಿನಗಳನ್ನು ದಾಟಿ ಮುನ್ನುಗ್ಗುತ್ತಿದೆ. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಿಗ್‌ಬಾಸ್ ಪೂರ್ಣಗೊಳ್ಳಲಿದೆ. ಗ್ರ್ಯಾಂಡ್ ಫಿನಾಲೆ ಹತ್ತಿರ ಬರುತ್ತಿದ್ದಂತೆ ಮನೆಯ ಸ್ಪರ್ಧಿಗಳು ಹೈ ಅಲರ್ಟ್ ಆಗಿದ್ದಾರೆ. ಈ ಬಾರಿಯ ಗ್ರ್ಯಾಂಡ್ ಫಿನಾಲೆಗೆ ದಿನಾಂಕ ಫಿಕ್ಸ್ ಆಗಿದೆ.
ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ:-
ಕಳೆದ ಸೀಸನ್ 112 ದಿನಗಳ ಕಾಲ ನಡೆದಿತ್ತು. ಅಕ್ಟೋಬರ್ 8ರಂದು ಶುರುವಾಗಿ ಜನವರಿ 28ವರೆಗೂ ಇತ್ತು. ಒಟ್ಟು 21 ಜನ ಸ್ಪರ್ಧಿಗಳು ಮನೆ ಒಳಗೆ ಪ್ರವೇಶ ಮಾಡಿದ್ದರು. ಇದರಲ್ಲಿ ಕಾರ್ತಿಕ್ ವಿನ್ನರ್ ಆದರೆ ಡ್ರೋನ್ ಪ್ರತಾಪ್ ರನ್ನರ್ ಅಪ್ ಆದರು. ಈ ಬಾರಿ ಬಿಗ್‌ಬಾಸ್ ಆರಂಭವಾಗಿದ್ದು ಸೆಪ್ಟೆಂಬರ್ 29ಕ್ಕೆ ಅಂದರೆ ಕಳೆದ ಸೀಸನ್‌ಗಿಂತ ಒಂದು ವಾರ ಮೊದಲು ಬಿಗ್‌ಬಾಸ್ ಆರಂಭವಾಗಿದೆ. ಸೀಸನ್ ಆರಂಭವಾದಾಗ 17 ಜನ ಸ್ಪರ್ಧಿಗಳು ಇದ್ದರು. ಈಗ ಉಳಿದುಕೊಂಡಿರುವವರು ಕೇವಲ 9 ಜನ ಮಾತ್ರ.
ರಂಜಿತ್ ಹಾಗೂ ಜಗದೀಶ್ ಹೊಡೆದಾಡಿಕೊಂಡು ಮನೆಯಿಂದ ಔಟ್ ಆದರೆ, ಗೋಲ್ಡ್ ಸುರೇಶ್ ಅವರು ಅನಿವಾರ್ಯ ಕಾರಣಗಳಿಂದ ಬಿಗ್‌ಬಾಸ್ ಮನೆಯಿಂದ ಹೊರ ಬಂದರು. ಶೋಭಾ ಶೆಟ್ಟಿ ಕೂಡ ಅರ್ಧಕ್ಕೆ ಬಿಗ್‌ಬಾಸ್ ಮನೆಯಿಂದ ಹೊರಬಂದರು. ಹೀಗಾಗಿ ಹಲವು ಡ್ರಾಮಗಳಿಗೆ ಈ ಬಾರಿಯ ಬಿಗ್‌ಬಾಸ್ ಸಾಕ್ಷಿಯಾಗಿತ್ತು.
ಈ ಬಾರಿ ಬಿಗ್‌ಬಾಸ್ ಫಿನಾಲೆ ಎರಡು ವಾರ ಮುಂದೂಡುವ ಪ್ಲ್ಯಾನ್ ನಡೆಯುತ್ತಿದೆ ಎಂದು ಗೊತ್ತಾಗಿದೆ. ಯಾಕೆಂದರೆ ಈ ಬಾರಿ ಬಿಗ್‌ಬಾಸ್ ಸೀಸನ್ 11 ಹೊಸ ಟೈಟಲ್ ನೊಂದಿಗೆ ಶುರುವಾಗಿತ್ತು. ಹೀಗಾಗಿ ಈ ಬಾರಿಯ ಬಿಗ್‌ಬಾಸ್ ಅನ್ನು 120 ದಿನಗಳ ಕಾಲ ನಡೆಸಬೇಕು ಎಂದು ಬಿಗ್‌ಬಾಸ್ ತಂಡ ಪ್ಲ್ಯಾನ್ ಮಾಡಿದೆ ಎನ್ನಲಾಗುತ್ತಿದೆ.
ಇನ್ನೂ ಟಿಆರ್‌ಪಿ ವಿಚಾರದಲ್ಲಿ ಕೂಡ ಬಿಗ್‌ಬಾಸ್ ಶೋ ತುಂಬಾ ಟಾಪ್ ಅಲ್ಲಿ ಇದೆ. ಹೀಗಾಗಿ ಇದರ ಅವಧಿ ವಿಸ್ತರಿಸುವ ಎಲ್ಲಾ ಸಾಧ್ಯತೆಗಳು ಇವೆ. ಈ ಬಾರಿ ಒಂದು ವಾರ ಹೆಚ್ಚಾಗಿಯೇ ಬಿಗ್‌ಬಾಸ್ ನಡೆಯುವುದು ನಿಜನೇ ಆದರೆ ಜನವರಿ 26ನೇ ತಾರೀಖು ಫಿನಾಲೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ದಿನ ಭಾನುವಾರ ಗಣರಾಜ್ಯೋತ್ಸವ ಕೂಡ ಇದೆ.
ಈ ವಿಶೇಷ ದಿನದಲ್ಲಿ ಫಿನಾಲೆ ನಡೆಯುವ ಸಾಧ್ಯತೆ ಇದೆ. ಸದ್ಯ ಒಂಬತ್ತು ಜನ ಇದ್ದು ಈ ಪೈಕಿ ಐವರು ಬಿಗ್‌ಬಾಸ್ ಫಿನಾಲೆಗೆ ತಲುಪುತ್ತಾರೆ. ಉಳಿದ ನಾಲ್ವರ ಪೈಕಿ ಒಂದು ಡಬಲ್ ಎಲಿಮಿನೇಷನ್ ನಡೆಯುತ್ತದೆ. ಮತ್ತಿಬ್ಬರು ಒಂದೊಂದು ವಾರ ಎಲಿಮಿನೇಟ್ ಆಗುವ ಸಾಧ್ಯತೆ ಇದೆ.
ಒಂದು ವೇಳೆ ಬಿಗ್‌ಬಾಸ್ 125 ದಿನ ನಡೆಯದೆ 112 ದಿನಕ್ಕೆ ಕೊನೆಗೊಂಡರೆ ಜನವರಿ 19ಕ್ಕೆ ಬಿಗ್‌ಬಾಸ್ ಫಿನಾಲೆ ನಡೆಯುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಜನವರಿ ಮೂರನೇವಾರ ಅಥವಾ ನಾಲ್ಕನೆ ವಾರ ಫಿನಾಲೆ ನಡೆಯುವುದು ಮಾತ್ರ ಫಿಕ್ಸ್ ಎನ್ನಲಾಗುತ್ತಿದೆ.