Sonu Nigam: ‘ಕ್ಷಮಿಸಿ ಕರ್ನಾಟಕ’: ಸೋನು ನಿಗಮ್ ವಿರುದ್ದ ಏನಿದು ಆರೋಪ..? ನಿಮ್ಮ ‘ಪ್ರೀತಿ’ಗಿಂತ ನನ್ನ ‘ಅಹಂಕಾರ’ ದೊಡ್ಡದಲ್ಲ.. ಕೊನೆಗೂ ಕ್ಷಮೆಯಾಚಿಸಿದ ಸೋನು ನಿಗಮ

ಕನ್ನಡಕ್ಕೆ ನೋವುಂಟು ಮಾಡುವ ಹೇಳಿಕೆಯನ್ನು ನೀಡಿದ ಗಾಯಕ ಸೋನು ನಿಗಮ್(Sonu Nigam) ಕೊನೆಗೂ ಕ್ಷಮೆಯಾಚಿಸಿದ್ದಾರೆ. ಹೌದು, ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸೋನು ನಿಗಮ್ ಅವರಿಗೆ ಕನ್ನಡ ಹಾಡು ಹೇಳುವಂತೆ ವಿದ್ಯಾರ್ಥಿ ಕೇಳಿದ್ದಕ್ಕೆ, ಇದಕ್ಕೆ ಪಹಲ್ಗಾಮ್‌ನಲ್ಲಿ ಅಟ್ಯಾಕ್ ಆಗಿದ್ದು ಎಂದು ಸೋನು ನಿಗಮ್ ಹೇಳಿದ್ದ ವೀಡಿಯೋ ಎಲ್ಲೆಡೆ ವೈರಾಲ್ ಆಗಿದ್ದು, ಇವರ ಮೇಲೆ ಎಫ್‌ಐಆರ್ ದಾಖಲಾಗಿತ್ತು.
ಇದರಿಂದ ಅವರನ್ನು ಕರ್ನಾಟಕದಿಂದ ಬ್ಯಾನ್ ಕೂಡ ನಿರ್ಧಾರಿಸಲಾಗಿತ್ತು.
ಸೋನು ನಿಗಮ್ ವಿರುದ್ದ ಏನಿದು ಆರೋಪ..?
ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಹಾಡು ಹೇಳುವಂತೆ ವಿದ್ಯಾರ್ಥಿ ಕೇಳಿದ್ದಕ್ಕೆ, ಇದಕ್ಕೆ ಪಹಲ್ಗಾಮ್‌ನಲ್ಲಿ ಅಟ್ಯಾಕ್ ಆಗಿದ್ದು ಎಂದು ಸೋನು ನಿಗಮ್ ಹೇಳಿದ್ದ ವೀಡಿಯೋ ವೈರಲ್ ಆಗಿತ್ತು. ಇದರ ವಿರುದ್ಧವಾಗಿಕನ್ನಡ ಪರ ಸಂಘಟನೆಗಳು ಆಕ್ರೋಶ ಹೊರಹಾಕಿ ಎಫ್‌ಐಆರ್ ಕೂಡ ದಾಖಲಿಸಲಾಗಿದೆ. ಸ್ಯಾಡಲ್‌ವುಡ್ ದಿಂದ ಬ್ಯಾನ್ ಮಾಡಬೇಕು ಎಂಬ ಕೂಗು ಸಹ ಕೇಳಿ ಬಂದಿತ್ತು. ಈ ಬೆನ್ನಲ್ಲೇ ಸೋನು ನಿಗಮ್ ಕನ್ನಡಿಗರಿಗೆ ಕ್ಷಮೆಯಾಚಿಸಿದ್ದಾರೆ.
ಸೋನು ನಿಗಮ್ ವಿರುದ್ಧಎಫ್‌ಐಆರ್
ಕನ್ನಡ ಪರ ಸಂಘಟನೆಯಾದ ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮರಾಜ್ ಎ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಮೇ 3 ರಂದು ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಸೋನು ನಿಗಮ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಪೊಲೀಸರು ಗಾಯಕನಿಗೆ ನೋಟಿಸ್ ಜಾರಿ ಮಾಡಿ, ಒಂದು ವಾರದೊಳಗೆ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ಸೂಚಿಸಿದ ಸ್ವಲ್ಪ ಸಮಯದ ನಂತರ ಕ್ಷಮೆಯನ್ನು ಕೇಳಿದ್ದಾರೆ.
ದೂರಿನಲ್ಲಿ ಏನಿದೆ..?
ಸೋನು ನಿಗಮ್ ಅವರು ಕನ್ನಡಿಗ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡುವ ಮತ್ತು ರಾಜ್ಯದ ಭಾಷಾ ಗುಂಪುಗಳಲ್ಲಿ ದ್ವೇಷವನ್ನು ಪ್ರಚೋದಿಸುವ “ಆಕ್ಷೇಪಾರ್ಹ ಮತ್ತು ಭಾವನಾತ್ಮಕವಾಗಿ ಪ್ರಚೋದನಕಾರಿ” ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 351(2), 352(1), ಮತ್ತು 353 ರ ಅಡಿಯಲ್ಲಿ ಆರೋಪಗಳನ್ನು ಎಫ್‌ಐಆರ್ ನಲ್ಲಿ ದಾಖಲೆಯಾಗಿತ್ತು.
ಸೋನು ನಿಗಮ್ ಈ ಕುರಿತು ಕೊಟ್ಟ ಸ್ಪಷ್ಟನೆ ಏನು..?
ಸೋನು ನಿಗಮ್ ಅವರು ಬೆಂಗಳೂರಿನ ಕಾರ್ಯಕ್ರಮದಲ್ಲಿ ನಡೆದ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದಾಗ ಕೆಲವರು ವೇದಿಕೆ ಮುಂಭಾಕ್ಕೆ ಬಂದು ಗಾಯಕರಿಗೆ ತೊಂದರೆ ಕೊಡುತ್ತಾರೆ. ಅವರಿಗೆ ಇಷ್ಟವಾದ ಹಾಡನ್ನು ಹಾಡಿ ಎಂದು ಹೇಳಿ ದುಮ್ಕಿ ಹಾಕುತ್ತಾರೆ. ಸೋನು ನಿಗಮ್ ಅವರಿಗೆ ಅಂದು ಆಗಿದ್ದು ಕೂಡ ಅದೇ. ‘ಕನ್ನಡದಲ್ಲಿ ಹಾಡಿ’ ಎಂದು ಅವರು ಪ್ರಿತಿಯಿಂದ ಕೋರಿಲ್ಲ, ಬದಲಿಗೆ ದುಮ್ಮಾಕಿನಿಂದ ಹೇಳಿದ್ದರು ಅದು ಕೂಡ ಇಧೇ ಆಗಿತ್ತು ಎಂದು ಸ್ಪಷ್ಟನೆ ಕೂಡ ಕೊಟ್ಟಿದ್ದರು.ಇದು ಆದ ಬಳಿಕ ಸ್ವಾರಿ ಕೇಳಿದ್ದಾರೆ.
ನಿಮ್ಮ ‘ಪ್ರೀತಿ’ಗಿಂತ ನನ್ನ ‘ಅಹಂಕಾರ’ ದೊಡ್ಡದಲ್ಲ
ಸೋನು ನಿಗಮ್ ಕರ್ನಾಟಕದ ಜನರಲ್ಲಿ ಕ್ಷಮೆಯಾಚಿಸುವ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು,ನಿಮ್ಮ ‘ಪ್ರೀತಿ’ಗಿಂತ ನನ್ನ ‘ಅಹಂಕಾರ’ ದೊಡ್ಡದಲ್ಲ ಎಂದು ಸೋನು ನಿಗಮ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅದರ ಜೊತೆ ಅವರು ಸ್ವಾರಿ ಕರ್ನಾಟಕ ನಾನು ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಸೋನು ನಿಗಮ್ ಕ್ಷಮೆ ಕೇಳಿದ್ದನ್ನು ಅನೇಕರು ಸ್ವಾಗತಿಸಿ ಕಾಮೆಂಟ್ ಮಾಡಿದ್ದಾರೆ.
ಗಾಯಕ ಸೋನು ನಿಗಮ್ ಸಾಕಷ್ಟು ಅಭಿಮಾನಿಗಳನ್ನು ಕರ್ನಾಟಕದಲ್ಲಿ ಹೊಂದಿದ್ದಾರೆ. ಇವರು ಅಭಿ ಮುಜ್ಮೆ ಕಹಿನ್ ಮತ್ತು ಸಪ್ನಾ ಜಹಾನ್‌ನಂತಹ ಬಾಲಿವುಡ್ ಹಿಟ್‌ಗಳಿಗೆ ಹೆಸರುವಾಸಿಯಾಗಿದ್ದಾರೆ.
ಕನ್ನಡ ನೆಲದಲ್ಲಿ ಕನ್ನಡ ಹಾಡು ಹಾಡಿ ಅಂದಿದ್ದಕ್ಕೆ ಇದಕ್ಕೆ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಾಗಿದ್ದು ಎಂದು ಹೇಳಿದ್ದ ಸೋನು ನಿಗಮ್ ಕೊನೆಗೂ ಕನ್ನಡಿಗರ ಆಕ್ರೋಶಕ್ಕೆ ಮಣಿದಿದ್ದಾರೆ.