ಜನರ ಜೇಬಿಗೆ ಇಂದಿನಿಂದ ಕತ್ತರಿ.. ಸಾಲು ಸಾಲು ಬೆಲೆ ಏರಿಕೆ.. ಇಂದಿನಿಂದ ಬಡವರ ಜೇಬು ಸುಡಲಿದೆ.. ಯಾವೆಲ್ಲ ವಸ್ತುಗಳ ಬೆಲೆ ಏರಿಕೆ?

ಜನರ ಜೇಬಿಗೆ ಇಂದಿನಿಂದ ಕತ್ತರಿ.. ಹೌದು, ಇಂದಿನಿಂದ ದುನಿಯಾ ದುಬಾರಿಯಾಗತ್ತಿದೆ ಏಕೆಂದರೆ ಇಂದು ಹಣಕಾಸು ವರ್ಷದ ಮೊದಲ ದಿನ… ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಗಳು ಇಂದಿನಿಂದ ಜಾರಿಗೆ ಬರುತ್ತಿವೆ. ಸರ್ಕಾರ ಜನರ ಮೇಲೆ ಬೆಲೆ ಏರಿಕೆಯ ಹೊರೆಯನ್ನು ಹೇರುತ್ತಿದೆ.
ಹೌದು, ಸಾಲು ಸಾಲು ಬೆಲೆ ಏರಿಕೆಯು ಸಾಮಾನ್ಯ ಜನರ ಜೇಬು ಸುಡಿತ್ತಿದೆ. ಇಂದಿನಿಂದ ವಿದ್ಯುತ್ ದರ ,ಟೋಲ್ ಸುಂಕ, ಮುದ್ರಾಂಕ ಶುಲ್ಕ,ಹಾಲು, ಮೊಸರು,ಕಸ ಸಂಗ್ರಹ ದರ, ಅನೇಕ ವಸ್ತುಗಳ ಬೆಲೆ ಹೆಚ್ಚಳವಾಗುತ್ತಿದೆ. ಹಾಗಿದ್ರೆ ಯಾವೆಲ್ಲಾ ವಸ್ತುಗಳ ದರ ಏರಿಕೆಯಾಗಿದೆ ಎಂಬ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಮುಂದೆ ಓದಿ.
ವಿದ್ಯುತ್ ದರ ಏರಿಕೆ
ಇಂದು ವಿದ್ಯುತ್ ದರ ಪ್ರತಿ ಯೂನಿಟ್ಗೆ 36 ಪೈಸೆ ಏರಿಕೆಯಾಗಿದೆ. ಇದರಿಂದ ವಿದ್ಯುತ್ ಬಳಕೆದಾರರಿಗೆ ಹೆಚ್ಚುವರಿ ವೆಚ್ಚವನ್ನು ಹೊರಬೇಕಾಗುತ್ತದೆ. ಇದರ ಜೊತೆಗೆ ಮಾಸಿಕ ಶುಲ್ಕ ಕೂಡ 20 ರೂಪಾಯಿ ಹೆಚ್ಚಳವಾಗಿದೆ. ಇದರ ಪರಿಣಾಮವಾಗಿ, 120 ರೂಪಾಯಿಗೆ ಇದ್ದ ನಿಗದಿತ ಶುಲ್ಕವು 140 ರೂಪಾಯಿಗೆ ಏರಿಕೆಯಾಗಲಿದೆ. ಹೆಚ್ಚಾಗಿ, ಗೃಹಜ್ಯೋತಿ ಬಳಕೆದಾರರು 200 ಯೂನಿಟ್ ದಾಟಿದರೆ, ಬೆಲೆ ಏರಿಕೆ ಹೆಚ್ಚಾಗುತ್ತದೆ. ವಿದ್ಯುತ್ ಬಳಕೆ ಹೆಚ್ಚಿದ ಪ್ರದೇಶಗಳಲ್ಲಿ, ಹಾಗೂ ಜನಸಾಮಾನ್ಯರು ಹೆಚ್ಚಾಗಿ ಬಳಕೆ ಮಾಡುವ ಮನೆಯಲ್ಲಿಯೇ ಬೆಲೆ ಏರಿಕೆಯ ಕಾವು ಹೆಚ್ಚಾಗಲಿದೆ. ಬೆಲೆ ಏರಿಕೆಯನ್ನು ಗಮನದಲ್ಲಿ ಇಟ್ಟಕೊಡು ವಿದ್ಯುತ್ ಬಳಕೆ ಕಡಿಮೆ ಮಾಡಲು ಪ್ರಯತ್ನಿಸಬೇಕು.
ಹಾಲು, ಮೊಸರಿನ ದರ ಏರಿಕೆ
ಇಂದಿನಿಂದ ನಂದಿನಿ ಹಾಲಿನ ಎಲ್ಲಾ ಮಾದರಿಯ ಪ್ಯಾಕೆಟ್ ದರ ಪ್ರತಿ ಲೀಟರ್ಗೆ 4 ರೂಪಾಯಿ ಏರಿಕೆಯಾಗಿದೆ. ಇದು ಹಾಲು ಖರೀದಿಸಲು ಗ್ರಾಹಕರ ಜೇಬು ಸುಡಲಿದೆ. ಇದರ ಜೊತೆಗೆ, ಮೊಸರಿನ ದರವೂ ಪ್ರತಿ ಲೀಟರ್ಗೆ 4 ರೂಪಾಯಿ ಏರಿಕೆಯಾಗಿದೆ. ಹಾಲು ಮತ್ತು ಮೊಸರು ಬಳಕೆ ಮಾಡುವ ಕುಟುಂಬಗಳಿಗೆ ಈ ದರ ಏರಿಕೆಯ ಬಿಸಿ ತಟ್ಟಲಿದೆ.
ಬಿಬಿಎಂಪಿ ಕಸ ಸಂಗ್ರಹದ ಹೆಚ್ಚಳ
ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ ಕಸದ ಸಂಗ್ರಹದ ಸೆಸ್ ಹೆಚ್ಚಳವನ್ನು ಮಾಡಲಾಗಿದು ಇಂದು ಕೂಡ ಇಂದಿನಿಂದ ಜಾರಿಗೆ ಬರುತ್ತದೆ. ವಸತಿ ಕಟ್ಟಡಗಳು ಮತ್ತು ವಾಣಿಜ್ಯ ಕಟ್ಟಡಗಳ ಕಸದ ಸಂಗ್ರಹ ಸೆಸ್ ಕುರಿತು ಹೊಸ ನಿಯಮಗಳು ಹೀಗಿವೆ:
ವಸತಿ ಕಟ್ಟಡಗಳಿಗಾಗಿ ಕಸ ಸಂಗ್ರಹ ಸೆಸ್
600 ಚದರಡಿ ವರೆಗೂ: 10 ರೂಪಾಯಿ
601 ರಿಂದ 1000 ಚದರಡಿ ವರೆಗೆ: 50 ರೂಪಾಯಿ
1001 ರಿಂದ 2000 ಚದರಡಿ ವರೆಗೆ: 100 ರೂಪಾಯಿ
2001 ರಿಂದ 3000 ಚದರಡಿ ವರೆಗೆ: 150 ರೂಪಾಯಿ ಸೆಸ್
3001 ರಿಂದ 4000 ಚದರಡಿ ವರೆಗೆ: 200 ರೂಪಾಯಿ ಸೆಸ್
4000 ಚದರಡಿ ಮೇಲ್ಪಟ್ಟರೆ: 400 ರೂಪಾಯಿ ಕಸದ ಸೆಸ್
ವಾಣಿಜ್ಯ ಕಟ್ಟಡಗಳಿಗೆ ಕಸ ಸಂಗ್ರಹ ಸೆಸ್
ವಾಣಿಜ್ಯ ಕಟ್ಟಡಗಳಲ್ಲಿ ಕಸದ ಸಂಗ್ರಹವು ಕೆಜಿಯ ಮೇಲೆ ಆಧಾರಿತವಾಗಿರುತ್ತದೆ. ಈ ಕೆಳಗಿನಂತೆ ದರಗಳು ವಿಧಿಸಲಾಗಿದೆ
5 ಕೆಜಿ ಕಸದ ಸಂಗ್ರಹ: 500 ರೂಪಾಯಿ
10 ಕೆಜಿ ಕಸದ ಸಂಗ್ರಹ: 1,400 ರೂಪಾಯಿ
25 ಕೆಜಿ ಕಸದ ಸಂಗ್ರಹ: 3,500 ರೂಪಾಯಿ
50 ಕೆಜಿ ಕಸದ ಸಂಗ್ರಹ: 7,000 ರೂಪಾಯಿ
100 ಕೆಜಿ ಕಸದ ಸಂಗ್ರಹ: 14,000 ರೂಪಾಯಿ
ಈ ಹೊಸ ಸೆಸ್ ವ್ಯವಸ್ಥೆಯು ಕಸದ ಸಂಗ್ರಹ ಮತ್ತು ವಿಲೇವಾರಿ ಪ್ರಕ್ರಿಯೆಗಳಿಗಾಗಿ ಕಟ್ಟಡ ಮಾಲೀಕರಿಗೆ ಹೆಚ್ಚಿನ ಹೊರಯನ್ನು ತರುತ್ತಿದೆ. ಪರಿಸರದ ಸಂರಕ್ಷಣೆಗೆ ಸಹಕಾರ ನೀಡುತ್ತದೆ. ವಸತಿ ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ಹೆಚ್ಚಿದ ಕಸದ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು, ಹೊಸ ಸೆಸ್ ವ್ಯವಸ್ಥೆ ಆಧರಿತವಾಗಿರುತ್ತದೆ.
ಹೊಸ ವಾಹನ ಖರೀದಿಗೂ ಕೂಡ ಬೆಲೆ ಏರಿಕೆ
ಇದಿನಿಂದ ಉಕ್ಕು ಮತ್ತು ವಾಹನಗಳ ಬಿಡಿಭಾಗಗಳ ಆಮದು, ಜೊತೆಗೆ ಉಕ್ಕುಗಳ ಆಮದು ದರ ಹೆಚ್ಚಾಗಲಿದೆ. ಇದರ ಪರಿಣಾಮವಾಗಿ, ಹೊಸ ವಾಹನಗಳು ಖರೀದಿಸುವುದಾದರೆ, ವೆಚ್ಚ ಮತ್ತು ಬೆಲೆ ಹೆಚ್ಚಾಗಬಹುದು. ಈ ದರ ಏರಿಕೆಗೆ ವಾಹನ ಉತ್ಪಾದನೆ ಮತ್ತು ಆಮದು ಮೌಲ್ಯಗಳು ಪ್ರಭಾವಿತವಾಗುತ್ತವೆ. ವಾಹನಗಳ ಬಿಡಿಭಾಗಗಳು (ಜೊತೆಗಾರ ಭಾಗಗಳು) ಮತ್ತು ಉಕ್ಕುಗಳು ಮುಖ್ಯವಾದ ಘಟಕಗಳು ಆಗಿರುವುದರಿಂದ, ಅವುಗಳ ಬೆಲೆಯ ಏರಿಕೆಯಿಂದ ಗೋಲ್ಡನ್ ಮೊಟಾರ್ ಕಂಪನಿಗಳು ಮತ್ತು ವಾಹನ ಉತ್ಪಾದಕರಿಗೆ ಹೆಚ್ಚು ವೆಚ್ಚ ಬರಲಿದೆ,ಇದು ಖರೀದಿದಾರರಿಗೆ ಬೆಲೆಯ ಬೆಂಕಿ ಗ್ರಾಹಕರಿಗೆ ತಗುಲುತ್ತದೆ.
ಮುದ್ರಾಂಕ ಶುಲ್ಕ, ಅಪಿಡವಿಟ್ ಶುಲ್ಕ ಏರಿಕೆ
ಮುದ್ರಾಂಕ ಶುಲ್ಕ: ಇದು 50 ರೂಪಾಯಿಯಿಂದ 500 ರೂಪಾಯಿಗೆ ಏರಿಕೆಯಾಗುತ್ತಿದೆ. ಇದರಿಂದ, ವಿವಿಧ ರೀತಿಯ ಕಾನೂನಿನ ದಾಖಲೆಗಳನ್ನು ಚಲಾಯಿಸಲು ಅಥವಾ ಮಾನ್ಯತೆ ನೀಡಲು ಮೊತ್ತ ಹೆಚ್ಚುತ್ತದೆ.
ಅಫಿಡವಿಟ್ ಶುಲ್ಕ: ಇದು 20 ರೂಪಾಯಿಯಿಂದ 100 ರೂಪಾಯಿಗೆ ಏರಿಕೆಯಾಗುತ್ತಿದೆ. ಅಫಿಡವಿಟ್ ಅಥವಾ ಹಸ್ತಪರಿಶೀಲೆ ಸಂಬಂಧಿತ ದಾಖಲೆಗಳನ್ನು ಪ್ರಕ್ರಿಯೆಗೆ ತರುವ ಸಂದರ್ಭದಲ್ಲಿ, ಈ ಶುಲ್ಕ ಹೆಚ್ಚಿದ ನಂತರ ಹೆಚ್ಚು ವೆಚ್ಚವಾಗಲಿದೆ.
ಟೋಲ್ ದರ ಹೆಚ್ಚಳ
ಹೆದ್ದಾರಿ ಪ್ರಾಧಿಕಾರ ಇಂದಿನಿಂದ ಟೋಲ್ ದರ ಅನ್ನು ಶೇಕಡಾ 3 ರಿಂದ 5 ರಷ್ಟು ಹೆಚ್ಚಿಸುವುದಾಗಿ ಘೋಷಿಸಿದೆ. ಈ ಹೆಚ್ಚಳವು ರಾಜ್ಯದ ಒಟ್ಟು 66 ಟೋಲ್ ಪ್ಲಾಜಾಗಳ ಮೇಲೆ ಪರಿಣಾಮ ಬೀರುವುದರಿಂದ,ವಾಹನ ಸವಾರರು ಹೆಚ್ಚು ಟೋಲ್ ಶುಲ್ಕವನ್ನು ಚಲಾಯಿಸಬೇಕಾಗುತ್ತದೆ. ಈ ದರ ಏರಿಕೆಗೆ ಕಾರಣವಾಗಿ, ವಾಹನ ಸವಾರರು ತಮ್ಮ ಪ್ರಯಾಣದ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಲು ಹಲವು ರೀತಿಯ ಯೋಚನೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಅಂದಹಾಗೆ, ಈ ಪ್ರಮಾಣದಲ್ಲಿ ಟೋಲ್ ದರ ಹೆಚ್ಚಳವು ದಿನನಿತ್ಯದ ಪ್ರಯಾಣ ಮತ್ತು ವ್ಯಾಪಾರಕ್ಕೆ ಸೇರಿದ ವಾಹನ ಸವಾರರ ಮೇಲೆ ಪ್ರಭಾವ ಬೀರಬಹುದು. ದರ ಏರಿಕೆ ವಾಹನ ಸವಾರರಿಗೆ ಬಿಸಿ ತಟ್ಟಲಿದೆ.
ಲಿಫ್ಟ್, ಟ್ರಾನ್ಸ್ಫಾರ್ಮರ್ ರಿನಿವಲ್ ಶುಲ್ಕ ಏರಿಕೆ
ಇಂಧನ ಇಲಾಖೆಯ ಡಿಪಾರ್ಟ್ಮೆಂಟ್ ಆಫ್ ಎಲೆಕ್ಟ್ರಿಲ್ ಇನ್ಸ್ಪೆಕ್ಟೋರೇಟ್ ಈಗ ಮನೆಯ ಲಿಫ್ಟ್ ಪರಿಶೀಲನೆ ಮತ್ತು ರಿನಿವಲ್ ಹಾಗೂ ಟ್ರಾನ್ಸ್ಫಾರ್ಮರ್ ಪರಿಶೀಲನೆ ಮತ್ತು ರಿನಿವಲ್ ಮಾಡಿದುದಕ್ಕೆ ಸಂಬಂಧಿಸಿದ ಶುಲ್ಕವನ್ನು ದುಪಟ್ಟು ಹೆಚ್ಚಿಸಿದೆ.
3 ಫ್ಲೋರ್ ಇರುವ ಮನೆಯಲ್ಲಿ ಲಿಫ್ಟ್ ಅನ್ನು ಬಳಸಿದರೆ, ಇದಕ್ಕಾಗಿ ಮೊದಲಿನಂತೆ 800 ರೂ.ದಿಂದ 1,000 ರೂ. ಇದೆ.
ಈಗ, ಈ ಶುಲ್ಕವು 5,000 ರೂ.ರಿಂದ 8,000 ರೂ. ವರೆಗೆ ಏರಿಕೆಯಾಗಿದೆ.ಇನ್ನು, ಫ್ಲೋರ್‌ಗಳು ಹೆಚ್ಚಿದಂತೆ ಲಿಫ್ಟ್ ಸಂಬಂಧಿತ ಪರಿಶೀಲನೆ ಹಾಗೂ ರಿನಿವಲ್ ಶುಲ್ಕವು ಹೆಚ್ಚಾಗಲಿದೆ.
ಕಾರು ಬೆಲೆ ದುಬಾರಿ
ಕಾರು ಕಂಪನಿಗಳು ಸಹ ಶೆ. 3ರಷ್ಟು ಬೆಲೆ ಏರಿಯನ್ನು ಮಾಡಲಿದ್ದು, ಇದರ ಬಿಸಿ ಸಹ ಗ್ರಾಹಕ ಮೇಲೆ ತಟ್ಟುತ್ತದೆ.
ಈ ವರ್ಷದ ಮೊದಲ ತಿಂಗಳಿಂದ ನಿರಂತರ ಬೆಲೆ ಏರಿಕೆಗೆ ರಾಜ್ಯದ ಜನರು ಬೇಸತ್ತು ಹೋಗಿದ್ದಾರೆ. ಮೆಟ್ರೋ ಆಯ್ತು, ಕೆಎಸ್‌ಆರ್ ಟಿಸಿ, ಬಿಎಂಟಿಸಿ ಆಯ್ತುನ ಕರೆಂಟ್ ಬಿಲ್ ,ನೀರಿನ ದರ ಏರಿಕೆ ಸರ್ಕಾರ ಎಲ್ಲದರ ಮೇಲೆ ಬೆಲೆ ಏರಿಕೆಯನ್ನು ಮಾಡಿ ಜನರಿಗೆ ಜೇಬಿಗೆ ಕತ್ತರಿಯನ್ನು ಹಾಕುತ್ತಲೇ ಇದೆ ಬಡವರು ಬಡವರಾಗಿಯೇ ಉಳಿದುಕೊಂಡಿದ್ದಾರೆ.
ಒಟ್ಟಾರಿ ಸಾಲು ಸಾಲು ಬೆಲೆ ಏರಿಕೆಗಳು ವರ್ಷದ ಮೊದಲ ತಿಂಗಳಿಂದ ಜನ ಸಾಮಾನ್ಯರನ್ನು ಸುಡುತ್ತಿದೆ. ಸರ್ಕಾರ ಮಾತ್ರ ಸಾಲವನ್ನು ಬಡವರ ಮೇಲೆ ಹೊರೆಸಿಕೈಚಲ್ಲಿ ಕೂತಿದೆ. ಏಕಾಏಕಿ ಹಲವಾರು ವಸ್ತುಗಳ ದರ ಏರಿಕೆ ಜನರನ್ನು ಕಂಗಾಲು ಮಾಡಿದೆ.