
ಬಿಜೆಪಿಯವರು ಮಾಡುತ್ತಿರುವ ಜನಾಕ್ರೋಶ ಯಾತ್ರೆ ಕಾಂಗ್ರೆಸ್ ವಿರುದ್ಧ ಅಲ್ಲ. ಮೋದಿ ವಿರುದ್ಧ. ಬಿಜೆಪಿಯವರು ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿಗೆ ಕಾರ್ಂಇಕ ಸಚಿವ ಸಂತೋಷ್ ಲಾಡ್ ಟಾಂಗ್ ನೀಡಿದರು.
ಧಾರವಾಡದಲ್ಲಿ ವಿಚಾರಕ್ಕೆ ಪ್ರಕ್ರಿಯಿಸಿದ ಅವರು, ಅವರು ಇನ್ನೂ ಗೊಂದಲದಲ್ಲೇ ಇದ್ದಾರೆ. ಇಡೀ ದೇಶದಲ್ಲಿ ಒಟ್ಟಾರೆ ಬೆಲೆ ಏರಿಕೆಗೆ ಮೋದಿ ಅವರೇ ಕಾರಣ. ಆದರೆ, ಬಿಜೆಪಿಯವರಿಗೆ ಅವರ ಹೆಸರು ಹೇಳಲು ಬರುತ್ತಿಲ್ಲ. ಆದರೆ, ಕಾಂಗ್ರೆಸ್ ಹೆಸರು ಹೇಳಿ ಕರ್ನಾಟಕದಲ್ಲಿ ಬೆಲೆ ಏರಿಕೆಯಾಗಿದೆ ಎನ್ನುತ್ತಿದ್ದಾರೆ ಎಂದರು. ಜತೆಗೆ ಬಿಜೆಪಿ ಅವಧಿಯಲ್ಲಿ ಎಷ್ಟು ಬೆಲೆ ಏರಿಕೆಯಾಗಿದೆ ಎಂಬುದರ ಬಗ್ಗೆ ಇವರು ಶೇಕಡಾವಾರು ಮಾತನಾಡಲಿ.
ಮಾಧ್ಯಮದ ಪ್ರಚಾರಕ್ಕಾಗಿ ಈ ರೀತಿ ಬಿಜೆಪಿಯವರು ಮಾಡುತ್ತಿದ್ದಾರೆ. ಇನ್ನೂ ಗುಜರಾತ್‌ನ ಜಾಮನಗರದಲ್ಲಿ ವಿಮಾನ ಕ್ರ್ಯಾಷ್ ಆಗಿದೆ. ಸಿದ್ದಾರ್ಥ ಎಂಬ ಯುವಕ ಸಾವಿಗೀಡಾಗಿದ್ದಾನೆ. ಅದು 70 ವರ್ಷ ಹಿಂದಿನ ವಿಮಾನ. ಹೀಗಾಗಿ ಅದು ಕ್ರ್ಯಾಷ್ ಆಗಿದೆ. ಇದರ ಬಗ್ಗೆ ಎಲ್ಲೂ ಚರ್ಚೆ ಆಗುತ್ತಿಲ್ಲ. ಈ ವಿಷಯ ಮುಚ್ಚಿ ಹಾಕಲೆಂದೇ ವಕ್ಫ ವಿಚಾರ ಬೆಳಕಿಗೆ ತಂದಿದ್ದಾರೆ ಎಂದು ಕುಟುಕಿದರು.


