
ಕುಂಭ ಮೆರವಣಿಗೆಯಿಂದ ಮಹಾವೀರ ಜಯಂತಿ ಆಚರಣೆ
ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಮಂಗಳೂರು ಗ್ರಾಮದ ಭಗವಾನ್ ಶ್ರೀ ಮಹಾವೀರರು 2624 ನೇ ಜನ್ಮದಿನೋತ್ಸವ ಆಚರಿಸಲಾಯಿತು.

ಜೈನ ಬಸದಿಯನ್ನು ಹೂವಿನ ಅಲಂಕಾರದಿಂದ ವಿದ್ಯುತ್ ದೀಪಗಳಿಂದ ಮಾವು ತೆಂಗು ತೋರಣಗಳಿಂದ ಅಲಂಕರಿಸಿ ಜೈನರ ಸಂಪ್ರದಾಯದಂತೆ ಬೆಳಿಗ್ಗೆ ಅಭಿಷೇಕ ಪ್ರಾರ್ಥನೆ ಮೆರವಣಿಗೆ ಜ್ಞಾನ ಕಾರ್ಯಕ್ರಮದಲ್ಲಿ ತೊಡಗಿ ಜಯಂತಿಯನ್ನು ಆಚರಿಸಲಾಯಿತು.
ಅದೇ ರೀತಿಯಾಗಿ ಮಹಾವೀರ ಭಾವಚಿತ್ರವನ್ನು ಬಿಡಿ ಬೀದಿಗಳಲ್ಲಿ ಮೆರವಣಿಗೆ ಮೂಲಕ ಜೈನಮಂಟಪಕ್ಕೆ ಕುಂಭಮೇಳದೊಂದಿಗೆ ಜೈನ ಧರ್ಮದವರು ಮತ್ತು ಊರಿನ ಮುಖಂಡರು ಸಮಾಜ ಸೇವಕರು ಈ ಕಾರ್ಯಕ್ರಮಕ್ಕೆ ಪಾಲ್ಗೊಂಡು ಸಮಾಜದ ಅಧ್ಯಕ್ಷರಾದ ಎಂ ಎ ದೇಸಾಯಿ ಮಂಗಳಪ್ಪ ದೇಸಾಯಿ ನಾಗರಾಜ್ ದೇಸಾಯಿ ಚಂದ್ರನಾಥ್ ಭರ್ತೇಶ್ ಪದ್ಮಣ್ಣ ಪಲ್ಲೇದ್ ಗುರುರಾಜ್ ದೇಸಾಯಿ ಅನಿಲ್ ಕುಮಾರ್ ಎಂ ಕೆಂಭಾವಿ ಜಾಲಮ್ಮ ಸುನಂದಮ್ಮ. ರೇಖಾ ದೇಸಾಯಿ. ಸಾವಿತ್ರಿ. ಪವಿತ್ರ. ಪದ್ಮಾವತಿ. ಲಕ್ಷ್ಮವ್ವ ಇನ್ನು ಅನೇಕ ಜೈನ ಧರ್ಮದ ಮಹಿಳೆಯರು ಮತ್ತು ಪುರುಷರು ಊರಿನ ಮುಖಂಡರು ಸೇರಿ ಮಹಾವೀರ್ ಜಯಂತಿಯನ್ನು ಅದ್ದೂರಿಂದ ನೆರವೇರಿಸಲಾಯಿತು.
ವರದಿಗಾರರು ಶಶಿಧರ್ ಹೊಸ್ಮನಿ ಕೊಪ್ಪಲ್ ಜಿಲ್ಲೆ ಯಲಬುರ್ಗಾ


