State
BREAKING : ಬೆಳಗಾವಿಯಲ್ಲಿ ಘೋರ ದುರಂತ : ಮಣ್ಣು ಕುಸಿದುಬಿದ್ದು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವು.!

ಬೆಳಗಾವಿ: ನ್ಯೂ ಗಾಂಧಿ ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಬುಧುವಾರ ಮಣ್ಣು ಕುಸಿತದಿಂದ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿದ್ದು, ಓರ್ವನ ಪತ್ತೆಗೆ ಶೋಧ ಕಾರ್ಯಚರಣೆ ನಡೆಸಲಾಗುತ್ತಿದೆ.

ಮೃತ ಕಾರ್ಮಿಕರು ಮೂಡಲಗಿ ತಾಲೂಕಿನ ಪಟಗುಂದಿ ಗ್ರಾಮದ ಬಸವರಾಜ್ ಸರವಿ (40) ಶಿವಲಿಂಗ ಸರವಿ ( 38)ಎಂದು ಗುರುತಿಸಲಾಗಿದೆ.
ಮಣ್ಣನಲ್ಲಿ ಸಿಲುಕಿರುವ ಮತ್ತೋರ್ವ ವ್ಯಕ್ತಿಯನ್ನು ಶೋಧ ಕಾರ್ಯಚರಣೆ ನಡೆಸುತ್ತಿರುವ ಸಿಬ್ಬಂದಿಗಳು ಮಾಳ ಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


