ಬೆಳಗಾವಿ ಜಿಲ್ಲೆಯ ಮೂಡಲಗಿಯಲ್ಲಿ ಗ್ಯಾರಂಟಿ ಯೋಜನಾ ಸಮಿತಿ ಸಭೆ : ಮನವಿಗೆ ಸ್ಪಂದಿಸಿದ ಗೋಕಾಕ ಘಟಕ ವ್ಯವಸ್ಥಾಪಕರು ಹಾಗೂ ಚಿಕ್ಕೋಡಿ ವಿಭಾಗದ ಸಂಚಾರ ವಿಭಾಗಿಯ ನಿಯಂತ್ರಣಾಧಿಕಾರಿಗಳು

ಬೆಳಗಾವಿ ಜಿಲ್ಲೆಯ ಮೂಡಲಗಿಯಲ್ಲಿ ದಿನಾಂಕ 24.2.2025 ರಂದು ಗ್ಯಾರಂಟಿ ಯೋಜನಾ ಸಮಿತಿ ಸಭೆ ನಡೆದಿತ್ತು.
ಈ ಸಭೆಯಲ್ಲಿ ಬೆಳಗಾಯಿಂದ ಕುಲಗೋಡ ಪಟ್ಟಣಕ್ಕೆ ವಸತಿ ಸಾರಿಗೆ ಪ್ರಾರಂಭಿಸಬೇಕೆಂದು ಅರಬಾವಿ ಮತ ಕ್ಷೇತ್ರದ ಕೌಜಲಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರಕಾಶ ಸುಭಾಷ ಅರಳಿ, ಮಹದೇವ್ ಸಮಗಾರ, ಶಿವನಗೌಡ ಪಾಟೀಲ್, ಅನಿಲ್ ಹಾದಿಮನಿ, ವೆಂಕಟನಗೌಡರವರು ಮೂಡಲಗಿ ತಾಲೂಕಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅನಿಲಕುಮಾರ ದಳವಾಯಿ ರವರೊಂದಿಗೆ ಚರ್ಚಿಸಿ ಘಟಕ ವ್ಯವಸ್ಥಾಪಕರು ವಾಕರ ಸಾರಿಗೆ ಸಂಸ್ಥೆ ಗೋಕಾಕರವರಿಗೆ ಮನವಿ ಮಾಡಿದ್ದರು.




ಈ ಮನವಿಗೆ ಸ್ಪಂದಿಸಿದ ಗೋಕಾಕ ಘಟಕ ವ್ಯವಸ್ಥಾಪಕರು ಹಾಗೂ ಚಿಕ್ಕೋಡಿ ವಿಭಾಗದ ಸಂಚಾರ ವಿಭಾಗಿಯ ನಿಯಂತ್ರಣಾಧಿಕಾರಿಗಳು , ದಿನಾಂಕ 17.4.2025 ದಿಂದ ಪ್ರಾರಂಭಗೊಂಡ ಗೋಕಾಕ ಡಿಪೋ ಬಸ್ಸು ಬೆಳಿಗ್ಗೆ 10:45ಕ್ಕೆ ಕೌಜಲಗಿ ಮಮದಾಪುರ ಮಾರ್ಗವಾಗಿ ಕುಲಗೋಡದಿಂದ ಬೆಳಗಾವಿಗೆ ಹಾಗೂ ಬೆಳಿಗ್ಗೆ 11:15 ಗಂಟೆಗೆ ಬೆಳಗಾವಿಂದ ಕುಲಗೋಡ ಪಟ್ಟಣಕ್ಕೆ ಬಸ್ಸಿನ ವ್ಯವಸ್ಥೆ ಕಲ್ಪಿಸಿಕೊಂಡಿದ್ದಾರೆ.
ಈ ಬಸ್ಸು ಸಂಚಾರಿಸುವ ಮಾರ್ಗದ ಸಾರ್ವಜನಿಕರು ಹಾಗೂ ಸಮಾಜ ಸೇವಕ ಜಾನ್ಸಕುಮಾರ ಮಾರುತಿ ಕರೆಪ್ಪಗೋಳರವರು ತಾಲೂಕ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅನಿಲ ಕುಮಾರ ದಳವಾಯಿಯವರಿಗೆ, ಕೌಜಲಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ ಅರಳಿಯವರಿಗೆ, ಉಪಾಧ್ಯಕ್ಷ ಮಹಾದೇವ ಸಮಗಾರರವರಿಗೆ, ಶಿವನಗೌಡ ಪಾಟೀಲ ಹಾಗೂ ಅನಿಲ ಹಾದಿಮನಿಯವರಿಗೆ, ವೆಂಕನಗೌಡ ಪಾಟೀಲರವರಿಗೆ ಧನ್ಯವಾದಗಳನ್ನು ಸಲ್ಲಿಸಿ ಸಂತಸ ವ್ಯಕ್ತಪಡಿಸಿದ್ದಾರೆ.


