State
ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ ವತಿಯಿಂದ ಸಾರಾಪೂರ ಗ್ರಾಮದಲ್ಲಿ, ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವಲಂಬಿತರಿಗೆ ಏರ್ಪಡಿಸಿರುವ ಉಚಿತ ಅರೋಗ್ಯ ತಪಾಸಣಾ ಶಿಬಿರ

ಸೋಮವಾರ 21/04/2025ರಂದು ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ ವತಿಯಿಂದ ಸಾರಾಪೂರ ಗ್ರಾಮದಲ್ಲಿ, ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವಲಂಬಿತರಿಗೆ ಏರ್ಪಡಿಸಿರುವ ಉಚಿತ ಅರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಾಯಿತು.
ಮುನ್ನಎಚ್ಚರಿಕಾ ಅರೋಗ್ಯ ರಕ್ಷಣೆ ಎಂದರೆ ಒಂದು ನಿರ್ದಿಷ್ಟ ರೋಗ ಅದರ ಮುಂದಿನ ಹಂತವನ್ನು ಅಥವಾ ಯಾವದೇ ರೋಗದ ಸಾಧ್ಯತೆಯನ್ನು ಮುಂಚಿತವಾಗಿ ಕಂಡುಹಿಡಿದು ಮುಂಜಾಗ್ರತೆ ಹಾಗೂ ಅಗತ್ಯ ಚಿಕಿತ್ಸೆ ಪಡೆದುಕೊಳ್ಳಲು ಕ್ರಮವಹಿಸುವ ವಿಧಾನವಾಗಿದೆ. ಈ ಸಂದರ್ಭದಲ್ಲಿ ಅರೋಗ್ಯ ತಪಾಸಣಾ ಶಿಬಿರದ ಸಂಚಾಲಕರಾದ ರಾಜು ಕಾಂಬಳೆ ಹಾಗೂ ಸಹ ಸಂಚಾಲಕರಾದ ಸಚಿನ್ ಹೊಸಮನಿ ಉಪಸ್ಥಿತರಿದ್ದರು. ಮತ್ತು ಸಾರಾಪೂರ ಗ್ರಾಮದ ಕಟ್ಟಡ ಕಾರ್ಮಿಕರು ಶಿಬಿರದ ಸದುಪಯೋಗ ಪಡೆದುಕೊಂಡರು.


