Breaking News
ಸಾರಾಪೂರದ ಹಾಲಸಿದ್ದೇಶ್ವರ್ ದೇವಸ್ಥಾನದಲ್ಲಿ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು. ವರದಿ :ಸಂಜಯ ಕಾಂಬಳೆ

01/05/2025ರಂದು ಸಾರಾಪೂರದ ಹಾಲಸಿದ್ದೇಶ್ವರ್ ದೇವಸ್ಥಾನದಲ್ಲಿ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ನವ ಕರ್ನಾಟಕ್ ಮಾನವ ಹಕ್ಕುಗಳು ಮತ್ತು ಕಾರ್ಮಿಕ ಕ್ಷೇಮಾಬಿವೃದ್ದಿ ಸಮಿತಿ ಹುಕ್ಕೇರಿ ಘಟಕ ಅಧ್ಯಕ್ಷರು ಆದ ಅಜಿತ್ ಕುಮಾರ ಪಾಟೀಲ್, ಉಪಾಧ್ಯಕ್ಷರು ಆದ ನಾಗಪ್ಪ ಮಾಲ್ದಿನ್ನಿ, ಸಂಚಾಲಕರು ಆದ ಮಾರುತಿ ಕಾಂಬಳೆ ಮತ್ತು ಸಾರಪುರದ ಉದ್ದೋಗ ಖಾತ್ರಿ ಯೋಜನೆಯ ಕಾಯಕ ಬಂದುಗಳಾದ ಇಂದ್ರವ್ವ ಕಾಂಬಳೆ, ಕಲಾವತಿ ಕಾಂಬಳೆ, ಮಿಲಿಂದ್ ಕಾಂಬಳೆ ಮತ್ತು ಸಂಜೀವಿನಿ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ನಾಗಪ್ಪ ಮಾಲ್ದಿನ್ನಿ ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳುವದು ಅತೀ ಮುಖ್ಯವಾಗಿದ್ದು ಭಾರತದಲ್ಲಿ ಕಾರ್ಮಿಕ ಕಲ್ಯಾಣ ಮತ್ತು ಕಾರ್ಮಿಕ ಕಾನೂನುಗಳಿಗೆ ಅಂಬೇಡ್ಕರ್ ಅವರ ಕೊಡುಗೆ ಅಪಾರ. ಭಾರತೀಯ ಸಂವಿಧಾನದ ಮುಖ್ಯ ಶಿಲ್ಪಿಯಾಗಿರುವ ಡಾ. ಬಿ. ಆರ್ ಅಂಬೇಡ್ಕರ್ ಅವರು ಕಾರ್ಮಿಕ ಹಕ್ಕುಗಳನ್ನು ರಕ್ಷಿಸಿದ್ದಾರೆ ಎಂದು ಹೇಳಿದರು.
ವರದಿ :ಸಂಜಯ ಕಾಂಬಳೆ


