ಗಣಪತಿ ಮಂದಿರ ಉದ್ಘಾಟಿಸಿದ ದೇವಸ್ಥಾನಗಳ ಜೀರ್ಣೋದ್ಧಾರಕ ನಾಶೀರ್ ಬಾಗವಾನ ; ವರದಿ: ಜ್ಯೋತಿಬಾ ಬೆಂಡಿಗೇರಿ

ಗಣಪತಿ ಮಂದಿರ ಉದ್ಘಾಟಿಸಿದ ದೇವಸ್ಥಾನಗಳ ಜೀರ್ಣೋದ್ಧಾರಕ ನಾಶೀರ್ ಬಾಗವಾನ
ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಜನಸೇವೆ ಜನಾರ್ದನ ಸೇವೆ ಅಂತಾ ನಿಸ್ವಾರ್ಥ ಸೇವೆ ಮಾಡುತ್ತಾ ತಾಲೂಕಿನಾದ್ಯಂತ ನೂರಾರು ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿ ಕಲಿಯುಗದ ಕರ್ಣ ನೆಂದು ಬಿರುದು ಪಡೆದ ನಾಸೀರ್ ಭಾಗವಾನ ಅವರಿಂದ ಗರಬೆನಟ್ಟಿ ಗ್ರಾಮದ ಗಣಪತಿ ಮಂದಿರ ಉದ್ಘಾಟನೆ ಸಮಾರಂಭ ನಡೆಯಿತು.

ರಾಜಕೀಯದಿಂದ ಸೋಲು ಅನುಭವಿಸಿದರು ಕೂಡ ಬೇಸರ ಪಡದೆ ತಮ್ಮ ನಿಸ್ವಾರ್ಥ ಸೇವೆಯಾದ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯವನ್ನು ಮುಂದು ವರೆಸಿ ತಾಲೂಕಿನಲ್ಲಿ ಅಪಾರ ಅಭಿಮಾನಿಗಳ ಮನೆಮಾತಾಗುತ್ತಿದ್ದಾರೆ
ಅದರಂತೆ ದಿನಾಂಕ 8/5/2025ರಂದು ಗರಬೆನಟ್ಟಿ ಗ್ರಾಮದಲ್ಲಿ ತಾವು ಜೀರ್ಣೋದ್ಧಾರ ಮಾಡಿದ ಗಣಪತಿ ಮಂದಿರನ್ನ ರೆಬ್ಬನ ಕತ್ತರಿಸುವ ಮುಖಾಂತರ ಉದ್ಘಾಟಿಸಿದರು.

ಈ ಸಂಧರ್ಭದಲ್ಲಿ. , ಜೆಡಿಎಸ್ ಪಕ್ಷದ ತಾಲೂಕ ಅಧ್ಯಕ್ಷರಾದ ಯಲ್ಲಪ್ಪ ಕಾತಗಾರ, ಮಾಜಿ ಶಾಸಕರಾದ ಅರವಿಂದ ಪಾಟೀಲ ,ಹಾಗೂ ಗ್ರಾಮದ ಎಲ್ಲಾ ಗ್ರಾಮಸ್ಥರು,ಹಿರಿಯರು ಉಪಸ್ಥಿತರಿದ್ದರು
ವರದಿ: ಜ್ಯೋತಿಬಾ ಬೆಂಡಿಗೇರಿ



