ಯಲಬುರ್ಗಾ ತಾಲೂಕಿಗೆ ಒಂದೇ ಆಧಾರ್ ಕಾರ್ಡ್ ನೋಂದಣಿ ಕೇಂದ್ರ ಇನ್ನೊಂದು ಆಧಾರ್ ಕಾರ್ಡ್ ಕೇಂದ್ರವನ್ನು ಸ್ಥಾಪನೆ ಮಾಡಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ. ವರದಿ ಶಶಿಧರ್ ಹೊಸ್ಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ

ಯಲಬುರ್ಗಾ ತಾಲೂಕಿಗೆ ಒಂದೇ ಆಧಾರ್ ಕಾರ್ಡ್ ನೋಂದಣಿ ಕೇಂದ್ರ
ಯಲಬುರ್ಗಾ : ತಹಶೀಲ್ದಾರ್ ಕಾರ್ಯದಲ್ಲಿ ಆಧಾರ್ ಕಾರ್ಡ್ ನೋಂದಣಿಗೆ ತಾಲೂಕಿಗೆ ಒಂದೇ ಆಧಾರ್ ಕಾರ್ಡ್ ಇದ್ದು ಜನರಿಗೆ ತೊಂದರೆ ಆಗುತ್ತಿದೆ ತಾಲೂಕಿಗೆ ಸಂಬಂಧಪಟ್ಟ ಹಳ್ಳಿಗಳು 65 ರಿಂದ 70 ಹಳ್ಳಿಗಳು ಬರುತ್ತವೆ ಇಷ್ಟು ಹಳ್ಳಿಗಳಿಗೆ ಇದು ಒಂದೇ ಆಧಾರ್ ಕಾರ್ಡ್ ಕೇಂದ್ರ ಇದರಲ್ಲಿ ದಿನಕ್ಕೆ 30 ರಿಂದ 40 ಆಧಾರ್ ಕಾರ್ಡ್ ಮಾಡುತ್ತಿದ್ದು ಪ್ರತಿದಿನಕ್ಕೆ 100 ರಿಂದ 150 ಜನರು ಬರುತ್ತಿದ್ದಾರೆ.

ಸರಕಾರ ನಿಗದಿಪಡಿಸಿದ ಪ್ರತಿಯೊಂದು ಆಧಾರ್ ಕಾರ್ಡ್ ಲಿಂಕ್ ಕೇಳುವುದರಿಂದ ರೈತರಿಗೆ ಬೀಜ ಗೊಬ್ಬರ ತೆಗೆದುಕೊಳ್ಳಲು ತೊಂದರೆಯಾಗುತ್ತಿದ್ದು ಇದರ ಜೊತೆಗೆ ಶಾಲಾ ಮಕ್ಕಳಿಗೆ ಅಡ್ಮಿಶನ್ ಮಾಡಿಸಲು ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಜನಸಾಮಾನ್ಯರಿಗೆ ಇದಕ್ಕೆ ಸಂಬಂಧಪಟ್ಟ ತಾಲೂಕ ಅಧಿಕಾರಿಗಳು ಜಿಲ್ಲಾಧಿಕಾರಿಗಳು ಅತಿ ಬೇಗನೆ ಇನ್ನೊಂದು ಆಧಾರ್ ಕಾರ್ಡ್ ಕೇಂದ್ರವನ್ನು ಸ್ಥಾಪನೆ ಮಾಡಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ.


ಜನರು ಮಾತನಾಡಿ ನೋಡಿ ಗ್ರಾಮದಿಂದ ಬಂದಿದ್ದ ಯಂಕಪ್ಪ ಮುರುಡಿ ಕರೀಂ ಸಾಬ್ ದರ್ಗಾ ಮಲ್ಲವ್ವ ಕುರ್ನಾಲ್ ಹಿರೇ ಮೇಗಿರಿ ಗ್ರಾಮದಿಂದ ಬಂದ ಅಶೋಕ್ ಕುಮಾರ್ ಸೀತವ್ವ ಗೆದ್ಗೇರಿ ತಾಂಡದಿಂದ ಪರಶುರಾಮ್ ರಾಥೋಡ್ ಮುದ್ದೆಪ್ಪ ನಾಯಕ್ ಸುತ್ತಮುತ್ತಲ ಹಳ್ಳಿಗಳಿಂದ ಬಂದ ಜನರು ಒತ್ತಾಯಿಸುತ್ತಿದ್ದಾರೆ
ವರದಿ ಶಶಿಧರ್ ಹೊಸ್ಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ


