ಬೇಕೇ ಬೇಕು ನ್ಯಾಯ ಬೇಕು: ಕೂಲಿ ಕಾರ್ಮಿಕರಿಗೆ ಅನ್ಯಾಯವಾದರೂ ತಳಕ್ಕೆ ಭೇಟಿ ನೀಡಿದ ಗ್ರಾಮ ಪಂಚಾಯತ್ ಅಧಿಕಾರಿಗಳು

ಕೂಲಿ ಕಾರ್ಮಿಕರಿಗೆ ಅನ್ಯಾಯವಾದರೂ ತಳಕ್ಕೆ ಭೇಟಿ ನೀಡಿದ ಅಧಿಕಾರಿಗಳು
ಯಲಬುರ್ಗಾ : ಬಳೂಟಿಗಿ ಗ್ರಾಮ ಪಂಚಾಯತ್ ಕೂಲಿ ಕಾರ್ಮಿಕರಿಗೆ ಬಳೂಟಿಗಿ ಟು ಗಜೇಂದ್ರಗಡ ನಾಲ ರಸ್ತೆ ದುರಸ್ತಿಗೆಂದು ಎನ್ಎಂಆರ್ ತೆಗೆದಿದ್ದು ಪೂರ್ಣ ಪ್ರಮಾಣದ ಕೆಲಸ ಆಗಿದ್ದು ಕೂಲಿ ಕಾರ್ಮಿಕರಿಗೆ ಒಂದು ಬ್ಯಾಚಿನಲ್ಲಿ 370 ನೀಡಿದ್ದು ಇವರ ಜೊತೆ ಕೆಲಸ ಮಾಡಿದ್ದ ಇನ್ನೊಂದು ಬ್ಯಾಚ್ ಗೆ 230 ರೂಪಾಯಿ ಹಾಕಿದ್ದಾರೆ.


ಇದಕ್ಕೆ ಸಂಬಂಧಪಟ್ಟ ಇಂಜಿನಿಯರ್ ಕಂಪ್ಯೂಟರ್ ಆಪರೇಟರ್ ಮತ್ತು ಪಿ ಡಿಒ ಒಂದೇ ಸಾರಿ ಕೆಲಸ ಮಾಡಿದ ಈ ಕೂಲಿ ಕಾರ್ಮಿಕರಿಗೆ ಒಂದು ಬ್ಯಾಚಿನ ಕೂಲಿ ಕಾರ್ಮಿಕರಿಗೆ ಇನ್ನೊಂದು ಬ್ಯಾಚನ ಕೂಲಿ ಕಾರ್ಮಿಕರಿಗೆ ಅನ್ಯಾಯವಾಗಿರುತ್ತದೆ. ಎಂದು ಗ್ರಾಮ ಪಂಚಾಯಿತಿ ಮುಂದೆ ನೂರಾರು ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.


ಫೋನ್ ನಲ್ಲಿ ಸಂಪರ್ಕಿಸಲು ಆಪರೇಟರ್ ಪಿಡಿಒ ಮತ್ತು ತಾಲೂಕ್ ಪಂಚಾಯತ್ ಅಧಿಕಾರಿಗಳು 2 ಸತತ ಪ್ರತಿಭಟನೆ ನಡೆದರೂ ಫೋನ ರಿಸೀವ್ ಮಾಡ್ತಾ ಇಲ್ಲ.
ಸ್ಥಳಕ್ಕೆ ಆಗಮಿಸದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ ಬೇಕೇ ಬೇಕು ನ್ಯಾಯ ಬೇಕು ಎಂದು ತಕ್ಷಣ ಸ್ಥಳಕ್ಕೆ ಆಗಮಿಸಿ ಅಧಿಕಾರಿಗಳು ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ಎನ್ನುವರಿಗಾದರೂ ಭೇಟಿ ನೀಡಿಲ್ಲ ಅವರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಕೂಲಿಕಾರ್ಮಿಕರು ಒತ್ತಾಯಿಸುತ್ತಿದ್ದಾರೆ.
ವರದಿ ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ


