ಅನಿರ್ದಿಷ್ಟ ವಧಿ ಮೌನ ಪ್ರತಿಭಟನೆ ಖಾಸಗಿ ವಿದ್ಯುತ್ ರಿನಿವ್ ಕಂಪನಿ ವಿರುದ್ಧ. ಪರಿಹಾರ ನೀಡದಿದ್ದರೆ ಮುಂದಿನ ದಿನಗಳಲ್ಲಿ ಉಪಾಸ ಸತ್ಯಾಗ್ರ ಪ್ರಾರಂಭ ಮಾಡಬೇಕಾಗುತ್ತದೆ ಎಂದ ರೈತರು. ವರದಿ ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ

ಅನಿರ್ದಿಷ್ಟ ವಧಿ ಮೌನ ಪ್ರತಿಭಟನೆ
ಖಾಸಗಿ ವಿದ್ಯುತ್ ರಿನಿವ್ ಕಂಪನಿ ವಿರುದ್ಧ
ಯಲಬುರ್ಗಾ : ಯಲಬುರ್ಗಾ ತಾಲೂಕು ಕರಮುಡಿ ಗ್ರಾಮದಲ್ಲಿ ಅನಿರ್ದಿಷ್ಟ ಮೌನ ಪ್ರತಿಭಟನೆ ಸತತ ಮೂರು ದಿನಗಳಿಂದ ನಡಿತಾ ಇದೆ ಕಾರಣ ಖಾಸಗಿ ವಿದ್ಯುತ್ ರಿನಿವ್ ಕಂಪನಿಯಿಂದ ರೈತರ ಮೇಲೆ ದಬ್ಬಾಳಿಕೆ ವಿರೋಧಿಸಿ ಹಾಗೂ ಸೂಕ್ತ ಪರಿಹಾರಕ್ಕಾಗಿ ಅನಿರ್ದಿಷ್ಟ ವಧಿ ಮೌನ ಪ್ರತಿಭಟನೆ ನಡೆದಿದೆ.
ಇದರ ನೇತೃತ್ವ ರೈತ ಸಮುದಾಯ ಹಾಗೂ ಡಿ ಎಸ್ ಎಸ್ ಭೀಮ ಘರ್ಜನೆ ಮತ್ತು ಹೊಲದ ಮಾಲೀಕರು ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಕರಮುಡಿ ಗ್ರಾಮದ ರೈತರಿಗೆ ಸಂಬಂಧಪಟ್ಟ ಜಮೀನಿನಲ್ಲಿ ಸರ್ವೆ ನಂಬರ್ 304 ಸರ್ವೇ ನಂಬರ್ ನಲ್ಲಿ 18 ಎಕರೆ 20 ಗುಂಟೆ ಅನ್ನಧಿಕೃತವಾಗಿ ರೈತರಿಗೆ ಯಾವುದೇ ರೀತಿಯ ಮಾಹಿತಿ ನೀಡದೆ 400 ಕಿವಿ ಲೈನ ಕಂಬವನ ಹಾಕಲು ಇದಕ್ಕೆ ಸಂಬಂಧಪಟ್ಟ ರೈತರನ್ನು ಕೇಳದೆ ಹಾಕಲು ಬಂದಾಗ ರೈತರ ಮೇಲೆ ದೌರ್ಜನ್ಯ
ಹೆಸರಿಗಿ ನಮ್ಮ ಕಂಪನಿ ಸರ್ವೆಯಿಂದ ಸರ್ವೆ ಮಾಡಿದಾಗ ನಿಮ್ಮ ಹೊಲದಲ್ಲಿ ಬಂದಿದೆ ಎಂದು ಇದನ್ನು ಬಿಟ್ಟು ಬೇರೆ ಕಡೆ ಎಲ್ಲೂ ಹಾಕೋದಿಲ್ಲ ಎಂದು ರೈತರದ ತ್ರೀ ಭೀಮಪ್ಪ ಶಿವಪ್ಪ ಬಂಡಿ ಇವರ ಮೇಲೆ ದೌರ್ಜನದಿಂದ ಕೆಲಸ ಮಾಡಲು ಮುಂದಾದಾಗ ಇವರ ಸಾಯಕ್ಕೆ ಅಧಿಕಾರಿಗಳಾಗಲಿ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದರು ಯಾರೂ ಕೂಡ ಬರಲೇ ಇಲ್ಲ.

ರೈತರು ಅದಕ್ಕಾಗಿ ಸ್ಥಳೀಯರ ನೆರವು ಮತ್ತು ರೈತ ಯಲಬುರ್ಗಾ ಮತ್ತು ಜಿಲ್ಲಾ ಡಿಎಸ್ಎಸ್ ಭೀಮ ಘರ್ಜನೆ ರಾಜ್ಯ ಗೌರವ ಅಧ್ಯಕ್ಷರಾದ ಶ್ರೀ ಬಸವರಾಜ್ ನಡವಲಮನಿ ಹಾಗೂ ಶ್ರೀ ಗಾಳೆಪ್ಪ ಎಂಡಿ ಡಿಎಸ್ಎಸ್ ಜಿಲ್ಲಾ ಗೌರವ ಅಧ್ಯಕ್ಷರು ಮತ್ತು ಶ್ರೀ ಮಲ್ಲನಗೌಡ ಕೋನ ಗೌಡರು ಜೆಡಿಎಸ್ ಜಿಲ್ಲಾಧ್ಯಕ್ಷರು ಹಾಗೂ ಶ್ರೀ ಬಸವರಾಜ್ ಗುಳಗುಳಿ ಜೆಡಿಎಸ್ ತಾಲೂಕ್ ಅಧ್ಯಕ್ಷರು ಮತ್ತು ಶ್ರೀ ಚನ್ನಬಸಪ್ಪ ಗೊರಹಳ್ಳಿ ಅಲ್ಲಾ ಸಾಬ್ ಲಕ್ಷ್ಮಪ್ಪ ಇನ್ನು ಅನೇಕ ರೈತ ಬಂಧುಗಳು ಈ ಅನಿರ್ದಿಷ್ಟ ಮೌನ ಪ್ರತಿಭಟನೆ ಭಾಗಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಡಿಎಸ್ಎಸ್ ಜಿಲ್ಲಾ ಭೀಮ ಘರ್ಜನೆ ಜಿಲ್ಲಾ ಗೌರವಾಧ್ಯಕ್ಷರಾದ ಬಸವರಾಜ್ ನಡಲಮನಿ ಅವರು ಮಾತನಾಡಿ ರೈತರಿಗೆ ಸೂಕ್ತ ಪರಿಹಾರ ನೀಡುವವರೆಗೂ ಈ ಮೌನ ಪ್ರತಿಭಟನೆಯನ್ನು ನಿಲ್ಲುಸುವುದಿಲ್ಲ ಎಂದು ತಿಳಿಸಿದರು
ಅದೇ ರೀತಿಯಾಗಿ ಹೊಲದ ಮಾಲೀಕರು ಮಾತನಾಡಿ ಖಾಸಗಿ ಕಂಪನಿಗಳಿಂದ ರೈತರಿಗೆ ಅನ್ಯಾಯವಾದರೂ ನ್ಯಾಯ ದೊರಕಿಸಿ ಕೊಡುವಲ್ಲಿ ಅಧಿಕಾರಿ ವರ್ಗದವರು ಎರಡು ಮೂರು ದಿನ ಕಳೆದರೂ ಇನ್ನೂ ಕೂಡವಾದರೂ ಸ್ಥಳಕ್ಕೆ ಧಾವಿಸದೆ ಕಂಪನಿ ಅವರ ಬೆನ್ನಿಗೆ ನಿಂತಿದ್ದಾರೆ ರೈತರ ತಮ್ಮ ಅಳೆಲನ್ನು ವ್ಯಕ್ತಪಡಿಸಿದರು ಸ್ಥಳೀಯ ರೈತರು ಮಾತನಾಡಿ ಕೂಡಲೇ ಅದು ಅಧಿಕಾರ ಸ್ಥಳಕ್ಕೆ ಬಂದು ಸೂಕ್ತ ಪರಿಹಾರ ನೀಡಬೇಕೆಂದು ಪರಿಹಾರ ನೀಡದಿದ್ದರೆ ಮುಂದಿನ ದಿನಗಳಲ್ಲಿ ಉಪಾಸ ಸತ್ಯಾಗ್ರ ಪ್ರಾರಂಭ ಮಾಡಬೇಕಾಗುತ್ತದೆ ಎಂದು ರೈತರು ಎಚ್ಚರಿಸಿದ್ದಾರೆ
ವರದಿ ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ


