ಬೆಳಗಾವಿಯ ಅಶೋಕನಗರದಲ್ಲಿ ಬೆಳಗಾವಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯ ಸಹಯೋಗದಲ್ಲಿ “ಇಂದಿರಾ ಕ್ಯಾಂಟಿನ್” ಲೋಕಾರ್ಪಣೆ….

ಬೆಳಗಾವಿಯ ಅಶೋಕನಗರದಲ್ಲಿ ಬೆಳಗಾವಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಬೆಳಗಾವಿಯ ಅಶೋಕ ನಗರ ಮತ್ತು ಶ್ರೀ ನಗರದಲ್ಲಿ ನೂತನ ಇಂದಿರಾ ಕ್ಯಾಂಟಿನ್’ನ್ನು ನಿರ್ಮಿಸಲಾಗಿದೆ. ಇಂದು ಶಾಸಕ ಆಸೀಫ್ ಸೇಠ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ನೂತನ ಸಿಬ್ಬಂದಿಗಳಿಂದ ರಿಬ್ಬನ್ ಕತ್ತರಿಸುವ ಮೂಲಕ ಇಂದಿರಾ ಕ್ಯಾಂಟಿನ್’ಗಳನ್ನು ಲೋಕಾರ್ಪಣೆಗೊಳಿಸಲಾಯಿತು. ನಂತರ ಸ್ವತಃ ಶಾಸಕರು ಮತ್ತು ನಗರಸೇವಕರು ಊಟವನ್ನು ಬಡಿಸಿ, ಇಂದಿರಾ ಕ್ಯಾಂಟಿನ್ ಕಾರ್ಯವನ್ನು ಪ್ರಾರಂಭಿಸಿದರು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಆಸೀಫ್ ಸೇಠ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ನಗರಸೇವಕರಾದ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಮುಜಮ್ಮಿಲ್ ಢೋಣಿ, ವಾರ್ಡಿನ ನಗರಸೇವಕರಾದ ರಿಯಾಜ್ ಕಿಲ್ಲೇದಾರ, ಶಾಹೀದ್’ಖಾನ್ ಪಠಾನ್, ರವಿ ಸಾಳುಂಕೆ, ರೇಷ್ಮಾ ಭೈರಕದಾರ್, ಆಯುಕ್ತರಾದ ಶುಭಾ ಬಿ., ಉಪಾಯುಕ್ತರಾದ ಉದಯಕುಮಾರ ತಳವಾರ, ರೇಷ್ಮಾ ತಾಳಿಕೋಟಿ, ಅಭಿಯಂತೆ ಲಕ್ಷ್ಮೀ ನಿಪ್ಪಾಣಿಕರ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

ಈ ವೇಳೆ ಮಾತನಾಡಿದ ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರಾದ ಶುಭಾ.ಬಿ ಅವರು, ಸಿಎಂ ಸಿದ್ಧರಾಮಯ್ಯನವರು ಇಂದಿರಾ ಕ್ಯಾಂಟೀನ್ ಮೆನ್ಯು ಬದಲಾಯಿಸಿದ್ದು, ಆಯಾ ಪ್ರದೇಶಕ್ಕೆ ತಕ್ಕಂತೆ ಹೊಸ ಮೆನ್ಯು ನೀಡಲಾಗಿದೆ. ಅಲ್ಲದೇ ಗುಣಮಟ್ಟದ ಆಹಾರವನ್ನು ಸರ್ಕಾರ ನೀಡುತ್ತಿದೆ. ಬೆಳಗಾವಿಯಲ್ಲಿ ಶಾಸಕರ ಪ್ರಯತ್ನದಿಂದ 2 ಇಂದಿರಾ ಕ್ಯಾಂಟಿನ್’ಗಳು ಆರಂಭಗೊಂಡಿವೆ. ಅತ್ಯಂತ ಕಡಿಮೆ ದರದಲ್ಲಿ ಜನರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಆಹಾರವನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಇನ್ನು ವಾರ್ಡಿನ ನಗರಸೇವಕ ರಿಯಾಜ್ ಕಿಲ್ಲೇದಾರ ಅವರು 6 ತಿಂಗಳ ಹಿಂದೇ ಕಟ್ಟಡ ನಿರ್ಮಾಣವನ್ನು ಪ್ರಾರಂಭಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಪ್ರಯತ್ನದಿಂದ ಇಂದು ಇಂದಿರಾ ಕ್ಯಾಂಟೀನ್ ಆರಂಭಗೊಂಡಿದ್ದು, ಅತ್ಯಂತ ಕಡಿಮೆ ದರದಲ್ಲಿ ಬಡ ಮಧ್ಯಮ ವರ್ಗದ ಜನರಿಗೆ ಆಹಾರವನ್ನು ಪೂರೈಸಲಾಗುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಆಸೀಫ್ ಸೇಠ್ ಅವರು, ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಸದಾ ಬಡವರ ಪರ ಕೆಲಸ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳು, ಇಂದಿರಾ ಕ್ಯಾಂಟಿನ್’ನ ಎರಡನೇ ಆವೃತ್ತಿ, ಸೇರಿದಂತೆ ಇನ್ನುಳಿದ ಯೋಜನೆಗಳನ್ನು ಜಾರಿಗೊಳಿಸಿ, ನುಡಿದಂತೆ ನಡೆದಿದೆ. ಆಯಾ ಪ್ರದೇಶಕ್ಕೆ ತಕ್ಕಂತೆ ಕೇವಲ 10 ರೂಪಾಯಿಯಲ್ಲಿ ತಿಂಡಿ ಮತ್ತು ಭೋಜನವನ್ನು ಇಂದಿರಾ ಕ್ಯಾಂಟಿನ್ ಮೂಲಕ ನೀಡಲಾಗುತ್ತಿದೆ. ಬಡವರ ಹಿತವೇ ನಮ್ಮ ಪಕ್ಷದ ಆದ್ಯತೆ. ಬಡವರು ಸಂತಸದಿಂದಿದ್ದರೇ, ಎಲ್ಲರೂ ಸಂತಸವಾಗಿರುತ್ತಾರೆ. ಅವಶ್ಯಕತೆಯಿದ್ದಲ್ಲಿ ಇಂದಿರಾ ಕ್ಯಾಂಟೀನ್’ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಬಡವರ ಅನುಕೂಲಕ್ಕೆ ಬಸ್ ಸ್ಟ್ಯಾಂಡ್ ಪಕ್ಕದಲ್ಲಿಯೂ ಒಂದು ಇಂದಿರಾ ಕ್ಯಾಂಟೀನ್ ಆರಂಭಿಸಬೇಕೆಂದರು.
ಈ ವೇಳೆ ಇಂದಿರಾ ಕ್ಯಾಂಟೀನ್’ನ ಸಿಬ್ಬಂದಿಗಳು ಮತ್ತು ಗಣ್ಯರು ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.


