ಪಂಚಾಯಿತಿಯ ಮುಂದೆ ಧರಣಿ ಕೂರಲು ಜನರ ನಿರ್ಧಾರ: ಕೊಳಚೆ ನೀರಿನಲ್ಲಿ ಪ್ರತಿ ದಿನ ದೈನಂದಿನ ಚಟುವಟಿಕೆ. ಗಮನಹರಿಸದೆ ಕಣ್ಮುಚ್ಚಿ ಕುಳಿತ ಆಡಳಿತ ಅಧಿಕಾರಿಗಳು.

ಕೊಳಚೆ ನೀರಿನಲ್ಲಿ ಪ್ರತಿ ದಿನ ದೈನಂದಿನ ಚಟುವಟಿಕೆ ಗ್ರಾಮದ ಜನರಿಂದ
ಯಲಬುರ್ಗಾ : ಬಳೂಟಿಗಿ ಗ್ರಾಮದಲ್ಲಿ ದೈನಂದಿನ ನಡೆದಾಡುವ ರಸ್ತೆಯಲ್ಲಿ ಪ್ರತಿ ದಿನ ಇದೇ ರಸ್ತೆಯಲ್ಲಿ ಜನರು ನಡೆದಾಡುವ ಪರಿಸ್ಥಿತಿ ಎದುರಾಗಿದೆ.
ಇದೇ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಇದ್ದರೂ ಕೂಡ ಗ್ರಾಮ ಪಂಚಾಯತ್ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಇದ್ದರೂ ಕೂಡ ಇತ್ತ ಕಡೆ ಗಮನಹರಿಸದೆ ಕಣ್ಮುಚ್ಚಿ ಕುಳಿತ ಆಡಳಿತ ಅಧಿಕಾರಿಗಳು.
ಮಳೆಗಾಲ ಪ್ರಾರಂಭವಾಗಿದ್ದರಿಂದ ಜನರಲ್ಲಿ ಡೆಂಗ್ಯೂ ಜ್ವರದ ಭೀತಿ ಬರಬಹುದಿಯೆಂದು ಜನರು ಆತಂಕದಲ್ಲಿದ್ದಾರೆ. ಪ್ರತಿದಿನ ಶಾಲೆಗೆ ಹೋಗುವ ಮಕ್ಕಳು ಇದೇ ರಸ್ತೆ ಮುಖಾಂತರ ಶಾಲೆಗಳಿಗೆ ಹೋಗುತ್ತಿದ್ದಾರೆ.
ಈ ಕಾಲೋನಿಯಲ್ಲಿ ಸರಿಸುಮಾರು 500 ಜನರು ಎಸ್ ಸಿ ಕಾಲೋನಿಯಲ್ಲಿದ್ದಾರೆ ಇಲ್ಲಿನ ಜನರು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಕೂಡ ಇನ್ನೂವರೆಗೆಯಾದ್ರು ಕ್ರಮಕ್ಕೆ ಮುಂದಾಗದೆ ಉದ್ಘಾಟನೆತನ ತೋರುತ್ತಿದ್ದಾರೆ.
ಈ ಒಂದು ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಈ ಅಧಿಕಾರಿಗಳ ಕ್ರಮಕ್ಕೆ ಮುಂದಾಗಬೇಕೆಂದು ಈ ಕಾಲೋನಿಯ ಜನರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಮುಂದಿನ ದಿನಗಳಲ್ಲಿ ಇದು ಸರಿ ಹೋಗುತ್ತಿದ್ದರೆ ಯಲಬುರ್ಗಾ ತಾಲೂಕು ಪಂಚಾಯಿತಿಯ ಮುಂದೆ ಧರಣಿ ಕೂರಲು ಈ ಕಾಲೋನಿಯ ಜನರು ನಿರ್ಧರಿಸಿದ್ದಾರೆ.
ವರದಿ ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ