ಯಲಬುರ್ಗಾದ ನೂತನ ನ್ಯಾಯಾಲಯದ ಮುಂದೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿ ಪ್ರತಿಷ್ಠಾಪನೆಗೆ ದಲಿತ ಮುಖಂಡರುಗಳ ಬೇಡಿಕೆ

ಯಲಬುರ್ಗಾದ ನೂತನ ನ್ಯಾಯಾಲಯದ ಮುಂದೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿ ಪ್ರತಿಷ್ಠಾಪನೆಗೆ ದಲಿತ ಮುಖಂಡರುಗಳ ಬೇಡಿಕೆ
ಯಲಬುರ್ಗಾ ನಗರದಲ್ಲಿ ನೂತನ ನ್ಯಾಯಾಲಯ ಕಟ್ಟಡ ಉದ್ಘಾಟನೆಗೆ ಸಜ್ಜಾಗಿರುತ್ತದೆ ಯಲಬುರ್ಗಾ ತಾಲೂಕಿನ ಜನರು ಕೇಳುವುದೇನೆಂದರೆ , ನ್ಯಾಯಾಲದ ಮುಂದೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ಜನರ ಅಭಿಪ್ರಾಯ.

ಪ್ರತಿಯೊಂದು ನ್ಯಾಯಾಲಯದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನ್ಯಾಯಾಲಯದ ಮುಂದೆ ಇರುತ್ತದೆ ದಲಿತ ಮುಖಂಡರಗಳ ಅವರದೊಂದು ದೊಡ್ಡ ಕನಸು ಅಭಿಪ್ರಾಯ ವ್ಯಕ್ತಪಡಿಸಿದವರು.

ಶ್ರೀಯುತ ಡಿಕೆ ಪರಶುರಾಮ್ ಛಲವಾದಿ ಮಹಾಸಭಾ ಟ್ರಸ್ಟ್ ಅಧ್ಯಕ್ಷರು ಮತ್ತು ಯಲಬುರ್ಗಾ ತಾಲೂಕು ಚಲವಾದಿ ಅಧ್ಯಕ್ಷರಾದ ಶ್ರೀಯುತ ಅಂದಪ್ಪ ಹಾಳ್ಕೇರಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಸಿದ್ದಪ್ಪ ಕಟ್ಟಿಮನಿ ಅವರು ಶ್ರೀ ಶಂಕರ್ ಜಕ್ಕುಲಿ ಶ್ರೀ ಶಿವಮೂರ್ತಿ ಇಟಗಿ ಶ್ರೀ ರಮೇಶ್ ದೊಡ್ಡಮನಿ ಶ್ರೀ ಬಸಪ್ಪ ಬಿನ್ನಾಳ್ ಇನ್ನು ಅನೇಕ ಹಿರಿಯ ಮುಖಂಡರುಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಶ್ರೇಷ್ಠ ನ್ಯಾಯವಾದಿ ಹಾಗೂ ಕಾನೂನು ತಜ್ಞರಾಗಿ ವಿಶ್ವವಿಖ್ಯಾತಿ ಆಗಿರುವ ವಿಶ್ವಜ್ಞಾನಿ ಡಾ ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆ ದೇಶದ ಪ್ರತಿ ನ್ಯಾಯಾಲಯದ ಮುಂದೆ ಪ್ರತಿಷ್ಠಾಪನೆ ಮಾಡಿ ಸಂವಿಧಾನದ ಪಿತಾಮಹರಿಗೆ ಗೌರವಿಸುವ ಸುಕಾರ್ಯ ಆರಂಭ ಆಗಬೇಕು.
ನಮ್ಮ ಯಲಬುರ್ಗಾ ನಗರದಲ್ಲಿ ನಿರ್ಮಾಣ ವಾಗುತ್ತಿರುವ ನ್ಯಾಯಾಲಯದ ಹೊಸ ಕಟ್ಟಡ ಆವರಣದಲ್ಲಿ ಸಂವಿಧಾನ ಪಿತಾಮಹ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಭವ್ಯ ಪ್ರತಿಮೆ.ಪ್ರತಿಷ್ಠಾಪನೆ ವಿನಂತಿ.
ವರದಿ ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ


