
ಖಾನಾಪೂರದ ಕಾಡಂಚಿನ ಶಾಲಾ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ಸ್ವಂತ ಖರ್ಚಿನಲ್ಲಿ ಸೈಕಲ್ ವಿತರಿಸಿ ಮಾನವೀಯತೆ ಮೆರೆತ ಬೆಳಗಾವಿ ಡಿಡಿಪಿಐ ಲೀಲಾವತಿ ಹಿರೇಮಠ
ಖಾನಾಪೂರ ತಾಲೂಕಿನ ಕಾಡಂಚಿನ ಮಕ್ಕಳಿಗೆ ಶಾಲೆಗೆ ಹೋಗುವುದೇ ಒಂದು ಸವಾಲಿನ ಕೆಲಸ ಪ್ರತಿದಿನವೂ ಸುಮಾರು ಕಿಲೋಮೀಟರ್ ದೂರದಿಂದ ತಮ್ಮ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಹರಸಾಹಸ ಪಡುವ ಕೆಲವು ಭಾಗಗಳಲ್ಲಿ ನಡೆಯುತ್ತಿದೆ.
ಇಂತಹಾ ಒಂದು ಪರಿ ಬೆಳಗಾವಿ ಡಿಡಿಪಿಐ ಅವರಿಗೆ ಕಂಡಿತು ಡಿಡಿಪಿಐ ಲೀಲಾವತಿ ಹಿರೇಮಠ ಅವರು ಖಾನಾಪೂರ ತಾಲೂಕಿನ ಶಿರೋಲಿಯ ಸರಕಾರಿ ಹೆಣ್ಣು ಮಕ್ಕಳ ಶಾಲೆಗೆ ಭೇಟಿ ನೀಡಿ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಹೆಚ್ಚಿಸುವ ಕುರಿತು ಚರ್ಚಿಸಲು ಆಯೋಜಿಸಿದ್ದ ಸಭೆಗೆ ಬರುವ ಸಂದರ್ಭದಲ್ಲಿ ರಸ್ತೆಯ ಮೇಲೆ ಇಬ್ಬರು ವಿದ್ಯಾರ್ಥಿನಿಯರು ನಡೆದುಕೊಂಡು ಬರುತ್ತಿರುವುದನ್ನು ಗಮಸಿಸಿದ್ರು ಇದರ ಬಗ್ಗೆ ಮಾಹಿತಿ ಪಡೆದ ಡಿಡಿಪಿಐ ಲೀಲಾವತಿ ಹಿರೇಮಠ ಅವರು ಪ್ರತಿದಿನ ತೆರೇಗಾಳಿ ಗ್ರಾಮದಿಂದ ಶಿರೋಳಿಗೆ ನಾಲ್ಕು ಕಿಲೋಮೀಟರ್ ದೂರದಿಂದ ಈ ವಿದ್ಯಾರ್ಥಿನಿಯರು ಶಾಲೆಗೆ ಬರುತ್ತಿರುವುದನ್ನು ಮಾಹಿತಿ ಪಡೆದುಕೊಂಡರು.
ಈ ಇಬ್ಬರೂ ವಿದ್ಯಾರ್ಥಿನಿಯರಿಗೆ ವಾಗುತ್ತಿರುವ ಅನಾನುಕೂಲತೆಯನ್ನು ಗಮನಿಸಿ ಎರಡು ವಿದ್ಯಾರ್ಥಿನಿಯರಿಗೆ ಸೈಕಲ್ ಖರೀದಿಸಲು ಸಿಆರ್ ಪಿ ಬಿ.ಎ.ದೇಸಾಯಿ ಅವರಿಗೆ ಹತ್ತು ಸಾವಿರ ರೂಪಾಯಿ ತಕ್ಷಣವೇ ನೀಡಿ ಸೈಕಲ್ ತರಿಸಿ ವಿತರಣೆ ಮಾಡಿಸಿದ್ರು,
ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿಗಳಾಗಿ ಶಾಲಾ ವಿದ್ಯಾರ್ಥಿಗಳ ಅನಾನುಕೂಲತೆಯನ್ನು ಮನಸಿನಿಂದ ಅರಿತು ತಮ್ಮ ಸ್ವಂತ ಖರ್ಚಿನಲ್ಲಿ ಅವರ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಕಾರ್ಯ ನಿಜಕ್ಕೂ ಶ್ಲಾಘನೀಯ ಈ ಇಬ್ಬರು ವಿದ್ಯಾರ್ಥಿನಿಯರು ಈಗ ಪ್ರತಿದಿನವೂ ಸಮಯಕ್ಕೆ ಸರಿಯಾಗಿ ತಮ್ಮ ಸೈಕಲ್ ನಿಂದ ಶಾಲೆಗೆ ತಲುಪಿ ತಮ್ಮ ವಿದ್ಯಾಭ್ಯಾಸಕ್ಕಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳಾಗಿ ನೀಡಿದ ಸಹಕಾರದಿಂದ ಬಹಳ ಖುಷಿಪಟ್ಟು ಅವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ ನಿಜಕ್ಕೂ ಡಿಡಿಪಿಐ ಲೀಲಾವತಿ ಹಿರೇಮಠ ಅವರ ಕಾರ್ಯಕ್ಕೆ ಜನಮೆಚ್ಚುಗೆ ವ್ಯಕ್ತವಾಗಿದೆ ಇಂತಹ ಅಧಿಕಾರಿಗಳು ಇನ್ನಿತರರಿಗೆ ಮಾದರಿಯಾಗಿದ್ದಾರೆ.