BPL and APL Card: ರಾಜ್ಯದಲ್ಲಿ ಹೊಸ ಬಿಪಿಎಲ್, ಎಪಿಎಲ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸುವವರಿಗೆ ಮಹತ್ವದ ಮಾಹಿತಿ

BPL and APL Ration Card: ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿ ಕೂಡ ಒಂದಾಗಿದೆ. ಇದರಲ್ಲೂ ಹಲವು ವಿಧದ ಕಾರ್ಡ್‌ಗಳಿವೆ. ಇದೀಗ ಈ ಕುರಿತು ಮಹತ್ವದ ಅಪ್ಡೇಟ್‌ವೊಂದನ್ನು ರಾಜ್ಯ ಸರ್ಕಾರ ನೀಡಿದೆ. ಹಾಗಾದ್ರೆ ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಜ್ಯದಲ್ಲಿ ಇಷ್ಟು ದಿನ ಪಡಿತರ ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ನಿಲ್ಲಿಸಿತ್ತು. ಆದರೆ, ಇದೀಗ ಮತ್ತೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ರಾಜ್ಯದ ಕುಟುಂಬಗಳಿಗೆ ಆಧಾರಿತವಾಗಿ ಪಡಿತರ ಚೀಟಿಗಳನ್ನು ನೀಡಲು ಮುಂದಾಗಿದೆ. ಹೊಸ ಪಡೆಯಲು ಬಯಸುವವರು ಅಧಿಕೃತ ಪ್ರಕ್ರಿಯೆ ಮೂಲಕ ಅರ್ಜಿ ಸಲ್ಲಿಕೆ ಮಾಡಲಾಗುತ್ತದೆ.
ರಾಜ್ಯದಲ್ಲಿ ಆಹಾರದ ಭದ್ರತೆಗೆ ಮತ್ತು ಸಬ್ಸಿಡಿ ಸಾಮಗ್ರಿಗಳ ಸರಬರಾಜಿಗೆ ಪಡಿತರ ಚೀಟಿಗಳು ಕಡ್ಡಾಯ ಆಗಿದೆ. ಈ ಮೂಲಕ ಅಕ್ಕಿ, ಗೋಧಿ, ಸಕ್ಕರೆ ಮುಂತಾದ ಅಗತ್ಯ ವಸ್ತುಗಳನ್ನು ನ್ಯಾಯಾಬೆಲೆ ಅಂಗಡಿಗಳಲ್ಲಿ ಕಡಿಮೆ ದರದಲ್ಲಿ ನೀಡಲಾಗುತ್ತದೆ. ಇನ್ನೂ ಕೆಲವೆಡೆ ಉಚಿತವಾಗಿಯೂ ನೀಡಲಾಗುತ್ತದೆ. ಜೊತೆಗೆ ವಿವಿಧ ಸೌಲಭ್ಯಗಳು ಸಹ ಉಚಿತವಾಗಿ ದೊರೆಯಲಿವೆ. ಸಾಮಾನ್ಯವಾಗಿ ಅಂತ್ಯೋದಯ, ಬಿಪಿಎಲ್, ಎಪಿಎಲ್ ಮತ್ತು ಅದರ್ಶ ನಾಲ್ಕು ವಿಧದ ಪಡಿತರ ಚೀಟಿಗಳಿವೆ. ಇವುದನ್ನು ಕುಟುಂಬದ ಪರಸ್ಥಿತಿ ಆಧಾರದ ಮೇಲೆ ವಿತರಿಸಲಾಗುತ್ತದೆ.
ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಮಾಡಲು ಕನಿಷ್ಟ 18 ವರ್ಷ ವಯಸ್ಸಾಗಿರನೇಕು ಮತ್ತು ಅಭ್ಯರ್ಥಿ ಕರ್ನಾಟಕದಲ್ಲಿನ ನಿವಾಸಿ ಆಗಿರಬೇಕು. ಕುಟುಂಬದ ಯಾವ ಸದಸ್ಯರಿಗೂ ಹಳೆಯ ಪಡಿತರ ಚೀಟಿ ಇರಬಾರದು. ಬಿಪಿಎಲ್ ಕಾರ್ಡ್‌ಗೆ, ಗ್ರಾಮೀಣ ಪ್ರದೇಶದ ಆದಾಯ ಮಿತಿ ₹32,000 ಮತ್ತು ನಗರ ಪ್ರದೇಶದ ಮಿತಿ ₹48,000 ಇರುತ್ತದೆ. ಅರ್ಜಿ ಸಲ್ಲಿಕೆಗೆ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ವಿದ್ಯುತ್ ಬಿಲ್, ಆದಾಯ ಪ್ರಮಾಣ ಪತ್ರ, ಪಾಸ್ಪೋರ್ಟ್ ಗಾತ್ರದ ಫೋಟೋಗಳು, ಮತ್ತು ಬ್ಯಾಂಕ್ ಖಾತೆಯ ವಿವರಗಳು ಬೇಕಾಗುತ್ತವೆ.
ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
* ಆಧಾರ್ ಕಾರ್ಡ್
* ಮತದಾರರ ಗುರುತಿನ ಚೀಟಿ
* ವಿದ್ಯುತ್ ಬಿಲ್
* ಆದಾಯ ಪ್ರಮಾಣ ಪತ್ರ
* ಪಾಸ್ಪೋರ್ಟ್ ಗಾತ್ರದ ಫೋಟೋಗಳು
* ಬ್ಯಾಂಕ್ ಖಾತೆಯ ವಿವರಗಳು
ಆನ್‌ಲೈನ್ ಅರ್ಜಿ ಸಲ್ಲಿಕೆ ವಿಧಾನಗಳು
* ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಲು ahara.kar.nic.in ಗೆ ಭೇಟಿ ನೀಡಿ
* ಹೊಸ ಬಳಕೆದಾರರಾಗಿ ನೋಂದಣಿ ಮಾಡಿ, ಲಾಗಿನ್ ಆಗಿ
* ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬೇಕು.
* ಅರ್ಜಿ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ನಮೂದಿಸಿದ ಸಂಖ್ಯೆ ಮೂಲಕ ಪರಿಶೀಲಿಸಬಹುದು
ಆಫ್‌ಲೈನ್ ಅರ್ಜಿ ಸಲ್ಲಿಕೆ ವಿಧಾನ: ಅರ್ಜಿ ನಮೂನೆ ನಿಮ್ಮ ಹತ್ತಿರದ ಪಡಿತರ ಅಂಗಡಿಯಲ್ಲಿ ಲಭ್ಯವಿದ್ದು, ಅದನ್ನು ಸರಿಯಾಗಿ ಭರ್ತಿ ಮಾಡಿ ಜಿಲ್ಲಾ ಕಚೇರಿಗೆ ಸಲ್ಲಿಸಬಹುದು. ಪ್ರಸ್ತುತ ಹೊಸ ಪಡಿತರ ಚೀಟಿಗೆ ಅರ್ಜಿ ಸ್ವೀಕೃತಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅಧಿಕಾರಿಗಳು ಹಳೆಯ ಅರ್ಜಿಗಳನ್ನು ಪರಿಶೀಲನೆಯ ನಂತರ ಪ್ರಕ್ರಿಯೆ ಪುನರಾರಂಭಿಸುವ ಸಾಧ್ಯತೆಯಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಆಹಾರ ಕಚೇರಿ ಅಥವಾ ಇಲಾಖೆಯ ಹೆಲ್ಪ್‌ಡೆಸ್ಕ್ ಸಂಪರ್ಕಿಸಬಹುದು. ಸರಿಯಾದ ಸಮಯದಲ್ಲಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೆ, ಹೊಸ ಪಡಿತರ ಚೀಟಿ ಪಡೆಯುವುದು ಸುಲಭವಾಗಲಿದೆ.


