
ಗದಗ, (ಜೂನ್ 15): ಮದುವೆಯಾಗು ಎಂದು ಪೀಡಿಸಿದ್ದ ಪ್ರೇಯಿಸಿ (Lover) ಮಧುಶ್ರೀಯನ್ನು ಕೊಲೆ ಮಾಡಿ ಬಳಿಕ ಹಳ್ಳದಲ್ಲಿ ಹೂತ್ತಿದ್ದ ಪ್ರಕರಣವನ್ನು ಗದಗ (Gadag) ಪೊಲೀಸರು ಭೇದಿಸಿದ್ದಾರೆ.
ಗದಗ ತಾಲೂಕಿನ ನಾರಾಯಣಪುರ (Narayanapura) ಗ್ರಾಮದ ಸತೀಶ್ ಹಿರೇಮಠ ಅದೇ ಗ್ರಾಮದ ಮಧುಶ್ರೀ ಪರಸ್ಪರ ಪ್ರೀತಿಸುತ್ತಿದ್ದರು. ಹೀಗೆ ಒಂದು ದಿನ ಕುಟುಂಬಸ್ಥರ ಕಣ್ತಪ್ಪಿಸಿ ಇಬ್ಬರು ಹಳ್ಳಿ ಗ್ರಾಮದ ಹೊರಹೊಲದಲ್ಲಿ ಭೇಟಿಯಾಗಿದ್ದು, ಈ ವೇಳೆ ಮಧುಶ್ರೀ ತನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ.
ಬಳಿಕ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಸತೀಶ್, ವೇಲ್ ನಿಂದ ಮಧುಶ್ರೀ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಪಕ್ಕದ ಹಳ್ಳದಲ್ಲೇ ಹೂತು ಹಾಕಿ ಏನು ಗೊತ್ತಿಲ್ಲದಂತೆ ಇದ್ದ. ಆದ್ರೆ, ಪೊಲೀಸರಿಗೆ ಸಿಕ್ಕ ಆ ಒಂದು ಮೆಸೇಜ್ ನಿಂದ ಸತೀಶನ ಪ್ರೀತಿ ಕೊಂದ ಕೊಲೆಯ ಕಥೆ ಆಚೆ ಬಂದಿದೆ.
ಮಧುಶ್ರೀ ಅಂಗಡಿ ಗದಗ ತಾಲೂಕಿನ ನಾರಾಯಣಪುರ ಗ್ರಾಮದ ನಿವಾಸಿ. ಅದೇ ಗ್ರಾಮದ ಸತೀಶ್ ಹಿರೇಮಠ ಎನ್ನುವಾತನ ಜೊತೆಗೆ ಪ್ರೀತಿಸುತ್ತಿದ್ದಳು. ಐದಾರು ವರ್ಷ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದ್ರೆ ಮಧುಶ್ರೀ ಕುಟುಂಬಸ್ಥರಿಗೆ ಈ ಪ್ರೀತಿ ಪ್ರೇಮದ ವಿಷಯ ಗೊತ್ತಾಗಿದೆ.
ಹೀಗಾಗಿ ಗದಗನಲ್ಲಿ ಅವರ ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದರು. ಕೆಲವು ತಿಂಗಳು ಕಾಲ ದೂರ ಇದ್ದ ಈ ಜೋಡಿ ಪುನಃ ಒಂದಾಗಿತ್ತು. ಅದು 2024 ಡಿಸೆಂಬರ್ 16 ರ ರಾತ್ರಿ ಮಧುಶ್ರೀ ಗದಗ ನಗರದ ಅವರ ಸಂಬಂಧಿಕರ ಮನೆಯಿಂದ ನಾಪತ್ತೆಯಾಗಿದ್ದಳು.
ಸಂಬಂಧಿಕರು ಎಲ್ಲಾ ಕಡೆ ಹುಡುಕಾಟ ನಡೆಸಿ ಕೊನೆಗೆ 2025 ಜನವರಿ 12ರಂದು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು. ಆಗ ಪೊಲೀಸರು ಸತೀಶ್ ಮೇಲೆ ಅನುಮಾನದಿಂದ ವಿಚಾರಣೆ ಆರಂಭ ಮಾಡಿದ್ದು, ನನಗೆ ಏನು ಗೊತ್ತಿಲ್ಲ ಎಂದು ನಾಟಕ ಮಾಡಿದ್ದ.


