ಪುಣೆ – ಬೆಳಗಾವಿ ಮತ್ತು ಪುಣೆ – ಕಲಬುರಗಿ – ಹೈದರಾಬಾದ್ ನಡುವೆ ಹೊಸ ವಂದೇ ಭಾರತ್ ರೈಲುಗಳ ಸೇವೆ ಶೀಘ್ರದಲ್ಲೇ ಆರಂಭ ಆಗಲಿದೆ.

Vande Bharat Express: ಐಷಾರಾಮಿ ರೈಲುಗಳಲ್ಲಿ ಒಂದಾದ ವಂದೇ ಭಾರತ್ ಎಕ್ಸ್‌ಪ್ರೆಸ್ ದೇಶಾದ್ಯಂತ ಸಂಚಾರ ಮಾಡುತ್ತಿದ್ದು, ಭಾರೀ ಜನಮನ್ನಣೆ ಪಡೆದುಕೊಂಡಿದೆ. ಇದೀಗ ಕರ್ನಾಟಕಕ್ಕೆ ಎರಡು ಹೊಸ ವಂದೇ ಭಾರತ್ ರೈಲುಗಳು ಎಂಟ್ರಿ ಕೊಡಲಿವೆ. ಹಾಗಾದ್ರೆ ಯಾವೆಲ್ಲಾ ಮಾರ್ಗಗಳಲ್ಲಿ ಓಡಲಿವೆ ಹಾಗೂ ಇದರಿಂದ ಯಾವೆಲ್ಲಾ ಅನುಕೂಲಗಳಿವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈಗಾಗಲೇ ದೇಶಾದ್ಯಂತ ಐಷಾರಾಮಿ ವಂದೇ ಭಾರತ್ ರೈಲು ಸಂಚಾರ ಮಾಡುತ್ತಿದ್ದು, ಜನಮನ್ನಣೆ ಪಡೆದುಕೊಳ್ಳುತ್ತಲಿವೆ. ಈ ಹೈಸ್ಪೀಡ್ ರೈಲುಗಳಿಗೆ ಪ್ರಯಾಣಿಕರು ಫಿಧಾ ಆಗಿದ್ದು, ಸೇವೆಯನ್ನು ವಿಸ್ತರಣೆ ಮಾಡುವಂತೆ ಒತ್ತಾಯ ಮಾಡುತ್ತಲಿದ್ದಾರೆ. ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಭಾರತೀಯ ರೈಲ್ವೆಯೂ ಈ ರೈಲು ಸೇವೆಯನ್ನು ವಿಸ್ತರಣೆ ಮಾಡುತ್ತಲೇ ಇದೆ. ಇದೀಗ ಉತ್ತರ ಕರ್ನಾಟಕಕ್ಕೆ ಅನುಕೂಲ ಆಗುವಂತೆ ಶೀಘ್ರದಲ್ಲೇ ಎರಡು ಹೊಸ ವಂದೇ ಭಾರತ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.
ಪುಣೆ – ಬೆಳಗಾವಿ ಮತ್ತು ಪುಣೆ – ಕಲಬುರಗಿ – ಹೈದರಾಬಾದ್ ನಡುವೆ ಹೊಸ ವಂದೇ ಭಾರತ್ ರೈಲುಗಳ ಸೇವೆ ಶೀಘ್ರದಲ್ಲೇ ಆರಂಭ ಆಗಲಿದೆ. ಈ ಮೂಲಕ ಕರ್ನಾಟಕದಿಂದ ಮಹಾರಾಷ್ಟ್ರದ ಪ್ರಮುಖ ನಗರಗಳಿಗೆ ಹಾಗೂ ಹೈದರಾಬಾದ್‌ಗೆ ರೈಲು ಸಂಚಾರ ಮತ್ತಷ್ಟು ಸುಲಭ ಆದಂತಾಗಲಿದೆ.
ಮಹಾರಾಷ್ಟ್ರ ಪ್ರಮುಖ ನಗರವಾದ ಪುಣೆಯಿಂದ 4 ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಪುಣೆಯಿಂದ ಬೆಳಗಾವಿ, ಶೇಗಾಂವ್, ವಡೋದರಾ ಹಾಗೂ ಹೈದರಾಬಾದ್ ಸಿಕಂದರಾಬಾದ್ ನಗರಗಳಿಗೆ ಈ ರೈಲುಗಳು ಸಂಚಾರ ಮಾಡಲಿದೆ.
ಪುಣೆ -ಕಲಬುರಗಿ-ಹೈದರಾಬಾದ್ ನಡುವೆ ಸೇವೆ: ಪುಣೆಯಿಂದ ಹೈದರಾಬಾದ್ ಸಿಕಂದರಾಬಾದ್ ನಡುವೆ ಆರಂಭ ಆಗುತ್ತಿರುವ ಹೊಸ ವಂದೇ ಭಾರತ್ ರೈಲು ಮಹಾರಾಷ್ಟ್ರ ಕರ್ನಾಟಕ ಹಾಗೂ ತೆಲಂಗಾಣದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ರೈಲು ದೌಂಡ್, ಸೋಲಾಪುರ ಮತ್ತು ಕಲಬುರಗಿದಲ್ಲಿ ನಿಲುಗಡೆಯಾಗಲಿದೆ. ಇದರಿಂದ ರೈಲು ಪ್ರಯಾಣದ ಸಮಯ 2-3 ಗಂಟೆಗಳಷ್ಟು ಕಡಿಮೆ ಆದಂತಾಗಲಿದೆ.
ಪುಣೆ-ಬೆಳಗಾವಿ ನಡುವೆ ಸೇವೆ: ಈಗಾಗಲೇ ಹುಬ್ಬಳ್ಳಿ ಬೆಳಗಾವಿ ಪುಣೆ ನಡುವೆ ವಾರದಲ್ಲಿ ಮೂರು ಬಾರಿ ವಂದೇ ಭಾರತ್ ರೈಲು ಸಂಚಾರ ಮಾಡುತ್ತಿದೆ. ಇದೀಗ ಪ್ರತಿನಿತ್ಯ ಈ ಮಾರ್ಗದಲ್ಲಿ ಸೆಮಿ ಹೈಸ್ಪೀಡ್ ಓಡಿಸಬೇಕೆಂಬುದು ಬೆಳಗಾವಿ ಜನರು ಬೇಡಿಕೆ ಇಟ್ಟಿದ್ದರು. ಸದ್ಯ ರೈಲ್ವೆ ಇಲಾಖೆ ಬೆಳಗಾವಿ-ಪುಣೆ ನಡುವೆ ಹೊಸ ವಂದೇ ಭಾರತ್ ಆರಂಭಿಸಿದೆ. ಸತಾರಾ, ಸಾಂಗ್ಲಿ ಮತ್ತು ಮಿರಾಜ್‌ನಲ್ಲಿ ಈ ರೈಲು ನಿಲುಗಡೆಯಾಗಲಿದೆ.
ಬೆಳಗಾವಿ-ಪುಣೆ ಹೊಸ ವಂದೇ ಭಾರತ್ ರೈಲಿನ ವೇಳಾಪಟ್ಟಿ, ಟಿಕೆಟ್ ದರ ಮತ್ತು ಇತರ ವಿವರಗಳ ಕುರಿತು ರೈಲ್ವೆ ಇಲಾಖೆ ಶೀಘ್ರದಲ್ಲೇ ಅಧಿಕೃತ ಮಾಹಿತಿಯನ್ನ ಬಿಡುಗಡೆಗೊಳಿಸುವ ಸಾಧ್ಯತೆಯಿದೆ ಈ ರೈಲು ಸೇವೆಯು ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದ ಪ್ರಯಾಣಿಕರಿಗೆ ಹೆಚ್ಚು ಅನುಲೂಕ ಆದಂತಾಗಲಿದೆ. ಇದರಿಂದ ವ್ಯಾಪಾರ, ಶಿಕ್ಷಣ ಮತ್ತು ಪ್ರವಾಸೋದ್ಯಮ ಸೇರಿದಂತೆ ಇನ್ನಿತರ ಅಗತ್ಯಗಳಿಗೆ ಅನುಕೂಲ ಆದಂತಾಗಲಿದೆ.


