ಮುಷ್ಕರದಿಂದ ಶಾಲೆ ಕಾಲೇಜು ವಿದ್ಯಾರ್ಥಿಗಳ ಪರದಾಟ

ಮುಷ್ಕರದಿಂದ ಶಾಲೆ ಕಾಲೇಜು ವಿದ್ಯಾರ್ಥಿಗಳ ಪರದಾಟ
ಯಲಬುರ್ಗಾ. ಕೇಂದ್ರೀಯ ಬಸ್ ನಿಲ್ದಾಣ ವಾದ ಕೊಪ್ಪಳ ಜಿಲ್ಲೆಯ ಎಲ್ಬರು ತಾಲೂಕಿನ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳಲ್ಲಿ ಸಾಗುತ್ತಿರುವ ಶಾಲೆ ಕಾಲೇಜು ವಿದ್ಯಾರ್ಥಿಗಳು ಮತ್ತು ತಮ್ಮ ತಮ್ಮ ಊರುಗಳಿಗೆ ತೆರಳಲು ನಿಂತಿರುವಂತೆ ಪ್ರಯಾಣಿಕರು ಈ ಮುಷ್ಕರದಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದ್ದು ಸುತ್ತಮುತ್ತಿನ ಶಾಲೆ ಕಾಲೇಜುಗಳಿದ್ದು ಪ್ರತಿನಿತ್ಯ 9:00ಗೆ ಶಾಲೆ ಕಾಲೇಜುಗೆ ಹಾಜರಾಗಬೇಕೆಂದು ಎಂದಿನಂತೆ ಏಳು ಗಂಟೆಗೆ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ಹಾಗೂ ಪ್ರಯಾಣಿಕರು ಕೂಡ ಗದಗ್ ಮತ್ತು ಹುಬ್ಬಳ್ಳಿಗೆ ತಮ್ಮ ದೈನಂದಿನ ಜೀವನಕ್ಕಾಗಿ ತೆರಳಲು ತೊಂದರೆ ಆಗದು ಕಂಡು ಬಂದಿದೆ ಸರ್ಕಾರವು ಶೀಘ್ರದಲ್ಲಿ ಈ ಮುಷ್ಕರವನ್ನು ಸಾರಿಗೆ ನೌಕರರಿಗೆ ಅವರ ಬೇಡಿಕೆಯನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ ಇದೇ ರೀತಿ ಮುಷ್ಕರ ಮುಂದುವರೆದರೆ ನಮ್ಮ ದೈನಂದಿನ ಚಟುವಟಿಕೆ ಮತ್ತು ಆಸ್ಪತ್ರೆಗೆ ಹೋಗಲು ಬಹಳ ತೊಂದರೆಯಾಗುತ್ತದೆ ಎಂದು ಪ್ರಯಾಣಿಕರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ವರದಿ ಶಶಿಧರ್ ಹೊಸ್ಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ


