Breaking News

ಸ್ವಾತಂತ್ರ್ಯ ದಿನಾಚರಣೆ: ಬ್ರಿಟಿಷರನ್ನು ನಡುಗಿಸಿದ ಕರ್ನಾಟಕದ ಹೋರಾಟಗಳಿವು ಅವರ ಅಪ್ರತಿಮ ಸಾಹಸವನ್ನು ನೆನೆಯುವುದು ನಾವು ಅವರಿಗೆ ಸಲ್ಲಿಸಬಹುದಾದ ದೊಡ್ಡ ಗೌರವ.

ದೇಶಾದ್ಯಂತ ಬ್ರಿಟಿಷರ ವಿರುದ್ಧ ಭಾರತೀಯರ ಸ್ವಾತಂತ್ರ್ಯ ಕಹಳೆ ಮೊಳಗಿದ್ದ ಸಂದರ್ಭದಲ್ಲಿಯೇ ಕರ್ನಾಟಕದಲ್ಲೂಅದರ ಕೂಗು ಪ್ರತಿಧ್ವನಿಸಿತ್ತು. ಕರುನಾಡಿನ ಉದ್ದಗಲಕ್ಕೂ ಜನನಾಯಕರು, ವಿದ್ಯಾರ್ಥಿಗಳು, ಮಹಿಳೆಯರು ಒಟ್ಟಿನಲ್ಲಿ ಜನಸಾಮಾನ್ಯರ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಳು ಬ್ರಿಟಿಷರನ್ನು ಕಂಗೆಡಿಸಿದವು.

ಅವರ ಅಪ್ರತಿಮ ಸಾಹಸವನ್ನು ನೆನೆಯುವುದು ನಾವು ಅವರಿಗೆ ಸಲ್ಲಿಸಬಹುದಾದ ದೊಡ್ಡ ಗೌರವ.

ಪ್ರಬಂಧ ಮುಖೇನ ಪ್ರತಿಭಟನೆ (ಬಳ್ಳಾರಿ)

ನಲವತ್ತರ ದಶಕದಲ್ಲಿ ಬಳ್ಳಾರಿಯಲ್ಲಿ ಬ್ರಿಟಿಷರು ಹೇರಿದ್ದ ಸುಂಕವನ್ನು ನಿರಾಕರಿಸಿ ಆರಂಭಗೊಂಡಿದ್ದ ಚಳವಳಿ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಕ್ವಿಟ್‌ ಇಂಡಿಯಾ ಚಳವಳಿಯ ಭಾಗವಾಗಿ ಹೋರಾಟಗಾರರು ಸ್ಥಳೀಯ ಅಂಚೆ ಕಚೇರಿಗಳ ಮೇಲೆ ದಾಳಿ ಮಾಡಿ ಟಪಾಲುಗಳನ್ನು ಸುಟ್ಟು ಹಾಕಿದ ಘಟನೆಗಳು ವರದಿಯಾದುವು.

ಜನರು ತಮ್ಮದೇ ಆದ ರೀತಿಯಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಕೈಗೊಂಡರು. ಗುರುಹಿರಿಯರೇ ಸ್ವಾತಂತ್ರ್ಯ ಹೋರಾಟದಲ್ಲ ತೊಡಗಿದ್ದ ಸಮಯದಲ್ಲಿ ವಿದ್ಯಾರ್ಥಿಗಳೂ ಕೈಕಟ್ಟಿ ಕೂರಲಿಲ್ಲ. ಯುವಕ ಯುವತಿಯರು ಪ್ರತಿಭಟನೆಗೆ ಧುಮ್ಮಿಕ್ಕಿದ್ದು ಒಂದೆಡೆಯಾದರೆ ವಿದ್ಯಾರ್ಥಿಗಳು ಶೈಕ್ಷಣಿಕವಾಗಿಯೂ ತಮ್ಮ ವಿರೋಧ ತೋರ್ಪಡಿಸಿದ್ದು ಗಮನ ಸೆಳೆದರು.

ನಗರದ ಅಲಬೂರು ನಂಜಪ್ಪ, ಅರಸನಾಳು ಎ.ಬಿ.ಆರ್‌.ಕೊಟ್ರಗೌಡ ಮತ್ತು ಕೋ.ಚನ್ನಬಸಪ್ಪ ಅವರು 1942ರಲ್ಲಿಅನಂತಪುರ ಕಾಲೇಜಿನಲ್ಲಿಅಭ್ಯಾಸ ಮಾಡುತ್ತಿದ್ದ ವೇಳೆ ಅರ್ಧ ವಾರ್ಷಿಕ ಪರೀಕ್ಷೆ ನಡೆಯಿತು. ಬ್ರಿಟಿಷರ ದಬ್ಬಾಳಿಕೆಯ ಬಗ್ಗೆ ಒಬ್ಬರು, ಉಳಿದಿಬ್ಬರು ‘ಬ್ರಿಟಿಷ್‌ ಆಳ್ವಿಕೆಯಲ್ಲಿಭಾರತೀಯ ಸಂಸ್ಕೃತಿಯ ದುರಂತ’ ಹಾಗೂ ಮತ್ತೊಬ್ಬ ವಿದ್ಯಾರ್ಥಿ ‘ಎ ಕೇಸ್‌ ಫಾರ್‌ ಇಂಡಿಯನ್‌ ಇಂಡಿಪೆಂಡೆಸ್ಸ್‌’ ಎನ್ನುವ ಪ್ರಬಂಧ ಬರೆದರು. ಪ್ರಬಂಧದ ಕೊನೆಯಲ್ಲಿಯಾವುದೇ ಪದವಿ ಗಳಿಸಿದರೂ ಬ್ರಿಟಿಷರ ಅಧೀನದಲ್ಲಿನೌಕರಿ ಮಾಡುವುದಿಲ್ಲಎನ್ನುವ ಪ್ರತಿಜ್ಞೆ ಮಾಡಿದ್ದಕ್ಕೆ ಜೈಲುವಾಸಕ್ಕೂ ಗುರಿಯಾದರು.
ನಿಜಾಮರಿಗೆ ಎದುರಾಗಿ ಧ್ವಜ ಹಾರಿಸಿದ ಪಂಚಾಕ್ಷರ (ಕೊಪ್ಪಳ)

ಕಲ್ಯಾಣ ಕರ್ನಾಟಕ ಸ್ವತಂತ್ರಗೊಂಡಿದ್ದು 1948ರ, ಸೆ.17ರಲ್ಲಿ. ಇಡೀ ಭಾರತ 1947ರ ಅ.15ರಂದು ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದ್ದರೆ ಕಲ್ಯಾಣ ಕರ್ನಾಟಕ ಇನ್ನೂ ದಾಸ್ಯದ ಸಂಕೋಲೆಯಲ್ಲೇ ಇತ್ತು. ಹೈದರಾಬಾದ್‌ ನಿಜಾಮ, ದೇಶದ ಸ್ವಾತಂತ್ರ್ಯ ಸಂಭ್ರಮಿಸಿದಂತೆ ಕಟ್ಟಪ್ಪಣೆ ಹೊರಡಿಸಿದ್ದ. ನಿಜಾಮನ ಸೈನಿಕರು ಎಲ್ಲಡೆ ಬಿಗಿ ಕಾವಲು ಕಾಯುತ್ತಿದ್ದರು. ಜನರು ತಮ್ಮ ಮನಸ್ಸಿನೊಳಗಿನ ರೋಷಾವೇಶ ಅದುಮಿಟ್ಟುಕೊಂಡರು.

ಈ ಸಂದರ್ಭದಲ್ಲಿ ಕೊಪ್ಪಳ ತಾಲೂಕಿನ ಬಿಸರಳ್ಳಿ ಗ್ರಾಮದ 15ರ ಪೋರ ಪಂಚಾಕ್ಷರ ಹಿರೇಮಠ ಅವರು, 1947, ಆ. 15ರ ಮುಂಜಾನೆ 4 ಗಂಟೆಗೆ ಕೊಪ್ಪಳ ಕೋಟೆಯ ಮೇಲೆ ಭಾರತಾಂಬೆಯ ಧ್ವಜ ಹಾರಿಸಿ ಕಿಚ್ಚು ಪ್ರದರ್ಶಿಸಿದರು. ನಿಜಾಮರ ಆಜ್ಞೆಯನ್ನು ಲೆಕ್ಕಿಸದೆ ಧೈರ್ಯ ತೋರಿದ ಪುಟ್ಟ ಬಾಲಕನೊಬ್ಬ ಊರಿನವರಲ್ಲಿಸ್ವಾತಂತ್ರ್ಯ ಸಂಗ್ರಾಮದ ಕಿಚ್ಚನ್ನೂ ಬೆಳಗಿಸುವಲ್ಲಿಯಶಸ್ವಿಯಾಗಿದ್ದ. ಇದರಿಂದ ನಿಜಾಮನ ಸೈನಿಕರಿಗೆ ಮುಖಭಂಗವಾದಂತಾಯಿತು. ಕುಪಿತಗೊಂಡ ಅವರು ಬಾಲಕ ಪಂಚಾಕ್ಷರ ಹಿರೇಮಠನನ್ನು ಬಂಧಿಸಿದರು. ಆದರೇನಂತೆ ಅವನು ಹೊತ್ತಿಸಿದ ಕಿಚ್ಚು ಭವಿಷ್ಯದ ಯುವಪೀಳಿಗೆಗೆ ಮಾದರಿಯಾಯಿತು.

 

ವಂದೇ ಮಾತರಂ ಹಾಡಿ ಆಂಗ್ಲರ ಕಾಡಿದ ಶರಣ (ಕಲಬುರಗಿ)

ಭಾರತೀಯರಲ್ಲಿ ಹರಡುತ್ತಿದ್ದ ದೇಶಭಕ್ತಿಯ ಕಾವು ಆಂಗ್ಲರನ್ನು ಥರಗುಟ್ಟಿಸಿತ್ತು. ಹೀಗಾಗಿ ದೇಶಭಕ್ತಿಯನ್ನು ಹತ್ತಿಕ್ಕಲು ಅವರು ಇನ್ನಿಲ್ಲದಂತೆ ಪ್ರಯತ್ನಿಸಿದರು. ಅದಕ್ಕಾಗಿಯೇ ವಂದೇ ಮಾತರಂ ಗೀತೆ ಹಾಡುವುದಕ್ಕೂ ನಿರ್ಬಂಧಾಜ್ಞೆ ವಿಧಿಸಿದ್ದರು.

ಆದರೆ, ಕಲಬುರಗಿಯ ಇಂಟರ್‌ಮೀಡಿಯೆಟ್‌ ವಿದ್ಯಾರ್ಥಿ ಶರಣಗೌಡ ಇನಾಮದಾರ ಅದನ್ನು ಮೀರಿ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾದರು. ಪೊಲೀಸರು ಶರಣಗೌಡರನ್ನು ಬಂಧಿಸಿ ಬಳಿಕ ವಿದ್ಯಾರ್ಥಿ ಎನ್ನುವ ಕಾರಣಕ್ಕೆ ಬಿಡುಗಡೆ ಮಾಡಿದ್ದರು. ಮುಂದೆ ಅವರು ಇನ್ನಷ್ಟು ಬ್ರಿಟಿಷ್‌ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ಮುಂಬಯಿಯಲ್ಲಿ ನಡೆದ ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡರು.

ಭೂಗತವಾಗಿಯೇ ಕೆಲಸ ಮಾಡಿ ಸ್ವಾತಂತ್ರ್ಯದ ಕಿಚ್ಚು ಹಳ್ಳಿ ಹಳ್ಳಿಗಳಲ್ಲೂಹರಡುವಂತೆ ಪ್ರೇರಣೆ ನೀಡಿದರು. ಆಳಂದ ತಾಲೂಕಿನ ಹಡಗಲಿಯಲ್ಲಿಜನರನ್ನು ಸೇರಿಸಿ ತ್ರಿವರ್ಣ ಧ್ವಜ ಏರಿಸಿದ್ದು ಅವರ ಸಾಹಸಗಳಲ್ಲೊಂದು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂದು ಬ್ರಿಟಿಷರು ಪರಿತಪಿಸುವಂತೆ ಮಾಡಿದ್ದು ಶರಣಗೌಡ ಇನಾಮದಾರರ ಹೆಗ್ಗಳಿಕೆ.

 

ಈಚಲ ಮರಗಳಿಗೆ ಶಿಗ್ಗಾವಿಯ ಗಾಂಧಿವಾದಿಯ ಕೊಡಲಿ ಪೆಟ್ಟು (ಹಾವೇರಿ)

ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ತರ ಪಾತ್ರ ವಹಿಸಿಯೂ ಬೆಳಕಿಗೆ ಬಾರದ ಅಸಂಖ್ಯ ಸ್ವಾತಂತ್ರತ್ರ್ಯ ಹೋರಾಟಗಾರರ ಪೈಕಿ ಶಿಗ್ಗಾವಿ ತಾಲೂಕಿನ ಅನಂತ ಭಟ್‌ ಹುರಳಿಕುಪ್ಪಿ ಅವರೂ ಒಬ್ಬರು. ಅನಂತ ಭಟ್‌ ಹುರಳಿಕುಪ್ಪಿ ಅವರು ಗಾಂಧೀಜಿಯವರ ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, ಕರ ನಿರಾಕರಣೆ ಮೊದಲಾದ ಸೌಮ್ಯ ಹೋರಾಟಗಳಿಂದ ಆಕರ್ಷಿತರಾಗಿದ್ದರು. ಪಿಕೆಟಿಂಗ್‌, ವಿದೇಶಿ ಬಟ್ಟೆಗಳ ಬಹಿಷ್ಕಾರ ಮೊದಲಾದ ಚಳವಳಿಗಳಲ್ಲಿ ತೊಡಗಿಸಿಕೊಂಡರು.

1929 ರಲ್ಲಿ ನಡೆದ ಲಾಹೋರ್‌ ಕಾಂಗ್ರೆಸ್‌ ಅಧಿವೇಶನದಲ್ಲಿ ನೀಲಕಂಠರಾವ್‌ ಹಳೆಪೇಟಿ ಅವರ ಜತೆ ಶಿಗ್ಗಾವಿಯ ಪ್ರತಿನಿಧಿಯಾಗಿ ಪಾಲ್ಗೊಂಡರು. ಹಾನಗಲ್‌ ತಾಲೂಕಿನ ನೀರಲಗಿ ಗ್ರಾಮದಲ್ಲಿ ಸೇಂದಿ ತಯಾರಿಸುವ ಸಾವಿರಾರು ಈಚಲು ಮರಗಳನ್ನು ಕಡಿದು ಹಾಕುವಲ್ಲಿಪ್ರಮುಖ ಪಾತ್ರ ವಹಿಸಿದರು. ಅದಕ್ಕಾಗಿ ಹಿಂಡಲಗಾ ಜೈಲಿಯಲ್ಲಿಒಂದೂವರೆ ವರ್ಷಗಳ ಸೆರೆವಾಸವನ್ನು ಎದುರಿಸಿದರು. 1939 ರಲ್ಲಿ ತ್ರಿಪುರಾದಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದಲ್ಲಿ ಕೆಪಿಸಿಸಿಯ ಚುನಾಯಿತ ಸದಸ್ಯರಾಗಿ ಪಾಲ್ಗೊಂಡರು.

 

ಸಂಗ್ರಾಮದ ಕಥೆ ಹೇಳುವ ರಾಮಸ್ವಾಮಿ ಸರ್ಕಲ್‌ (ಮೈಸೂರು)

1946ರಲ್ಲಿ ಮೈಸೂರು ಚಲೋ ಚಳವಳಿ ಆರಂಭಗೊಂಡಿತು. ಈ ಚಳಧಿವಧಿಳಿಯ ಭಾಧಿಗಧಿವಾಗಿ 5ರಂದು ಬೆಳಗ್ಗೆ 11 ಗಂಟೆಗೆ ವಿದ್ಯಾರ್ಥಿಗಳು ಮೈಸೂರಿನ 100 ಅಡಿ ರಸ್ತೆಯ ಐದು ದೀಪದ ಹತ್ತಿರ ಮುಷ್ಕರಕ್ಕೆ ಸಜ್ಜುಗೊಂಡರು. ಆ ವೇಳೆ ಸಂಬಂಧಿಕರ ಮನೆಯಲ್ಲಿದ್ದುಕೊಂಡು ಮೈಸೂರಿನ ಹಾಡ್ರ್ವಿಕ್‌ ಶಾಲೆಯಲ್ಲಿಅಧ್ಯಯನ ಮಾಡುಧಿತ್ತಿಧಿದ್ದ ರಾಮಸ್ವಾಮಿ ಎಂಬ ವಿದ್ಯಾರ್ಥಿಯು ಚಧಿಳಧಿವಧಿಳಿಯ ಮುಂದಾಧಿಳತ್ವ ವಧಿಹಿಧಿಸಿಧಿದ್ದ. ಪ್ರಧಿತಿಧಿಭಧಿಟಧಿನೆ ಹತೋಟಿ ಮೀರುತ್ತಿರುವುದನ್ನು ಮನಗಂಡು ಜಿಲ್ಲಾಧಿಕಾರಿ ಜಿ.ಎನ್‌.ನಾಗರಾವ್‌, ಕುದುರೆ ಏರಿ ಸ್ಥಳಕ್ಕೆ ಬಂದರು. ಮೆರವಣಿಗೆಯಲ್ಲಿದ್ದ ಯುವಕರು ಮುಂದೆ ಹೋಗಲೇಬೇಕೆಂದು ಹಠ ಮಾಡಿ ಮುನ್ನುಗ್ಗಿದರು. ರಾಮಸ್ವಾಮಿ ಗುಂಪಿನ ಮುಂಚೂಣಿಯಲ್ಲಿದ್ದರು. ಮುಂದೆ ಬಂದರೆ ಗುಂಡು ಹೊಡೆಯುವುದಾಗಿ ಪೊಲೀಸರು ಎಚ್ಚರಿಸಿದರು. ಅಧಿದನ್ನು ಲೆಧಿಕ್ಕಿಧಿಸದೇ ಮುಧಿನ್ನಧಿಡೆಧಿದಾಗ ಗುಂಡು ತಾಗಿ ರಾಮಸ್ವಾಮಿ ಅಲ್ಲಿಯೇ ಕೊನೆಯುಸಿರೆಳೆದರು. ರಾಮಸ್ವಾಮಿ ಮೂಲತಃ ಅರಸೀಕೆರೆ ಸಮೀಪದ ಬಾಣಾವರದವರು. ಅವರ ಮರಣದಿಂದಾಗಿ ಮೈಸೂರಿನಲ್ಲಿ48 ಗಂಟೆಗಳ ಕಾಲ ಕಫ್ರ್ಯೂ ವಿಧಿಸಲಾಯಿತು. ವೃತ್ತದಲ್ಲಿಅಂದು ನಡೆದ ಗೋಲಿಬಾರ್‌ಗೆ ರಾಮಸ್ವಾಮಿ ಜತೆ ತೋರಾ ನಾಯಕ್‌, ರಂಗ ಎಂಬ ಇನ್ನಿಬ್ಬರು ತರುಣರೂ ಬಲಿಯಾದರು. ರಾಮಸ್ವಾಮಿಯ ನೆನಪಿಗಾಗಿ ಮೈಧಿಸೂಧಿರಿಧಿನಧಿಲ್ಲಿನ ಆ ಸ್ಥಳಕ್ಕೆ ರಾಮಸ್ವಾಮಿ ವೃತ್ತ ಎಂದು ನಾಮಕರಣ ಮಾಡಲಾಯಿತು.

ವಿಧಿರಾಧಿಜಧಿಪೇಟೆಯ ಗೆರಿಲ್ಲಾವೀರ ಅಧಿಪ್ಪಧಿಚ್ಚು(ಕೊಡಗು)

ಕೊಧಿಡಧಿಗಿಧಿನಲ್ಲಿಭಾಧಿರತ ಸ್ವಾಧಿತಂತ್ರ್ಯ ಹೋಧಿರಾಧಿಟದ ಇಧಿತಿಧಿಹಾಧಿಸಧಿವನ್ನು ತಿಧಿರುಧಿವು ಹಾಧಿಕಿಧಿದರೆ ಅಲ್ಲಿಮುಖ್ಯಧಿವಾಗಿ ಕಾಧಿಣುವ ಹೆಧಿಸರು ವೀರ ಯೋಧ ಮಾಧಿತಂಡ ಅಧಿಪ್ಪಚ್ಚು. ಅಂದಿನ ಬೆಧಿಪ್ಪುಧಿನಾಧಿಡ್‌, ಇಂದಿನ ವಿಧಿರಾಧಿಜಧಿಪೇಟೆ ತಾಧಿಲೂಧಿಕಿನ ಬೊಧಿಳ್ಳುಧಿಮಾಡು ಗ್ರಾಧಿಮಧಿದಧಿ ಮಾತಂಡ ಅಪ್ಪಚ್ಚು ಕೊಡಗಿನ ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕರಾಗಿದ್ದರು. 18ನೇ ಶತಮಾನದ ಅಂತ್ಯದ ಹೊತ್ತಿಗೆ ಬ್ರಿಟಿಷ್‌ ಸೈಧಿನ್ಯ ಕೊಧಿಡಧಿಗನ್ನು ವಧಿಶಧಿಪಧಿಡಿಧಿಸಿಧಿಕೊಧಿಳ್ಳಲು ಮುಂದಾಧಿಗಿತ್ತು. ಆಗ ಬ್ರಿಟಿಷ್‌ ಸೈಧಿನ್ಯದ ಮುಂದಾಧಿಳತ್ವ ವಧಿಹಿಧಿಸಿದ್ದ ಕಧಿರ್ನಲ್‌ ಗಿಧಿಲ್ಬರ್ಟ್‌ ವ್ಹಾಗ್‌ ಸೋಧಿಮಧಿವಾಧಿರಧಿಪೇಟೆ ಕಧಿಡೆಧಿಯಿಂದ ಮಧಿಡಿಧಿಕೇಧಿರಿಧಿಯತ್ತ ಬಧಿರುಧಿತ್ತಿದ್ದ. ಇಧಿತ್ತ ಕೊಧಿಡಧಿಗಿನ ರಾಜ ಚಿಧಿಕ್ಕವೀರ ರಾಧಿಜೇಂದ್ರನ ಸೇಧಿನೆಧಿಯಲ್ಲಿದಿಧಿವಾಧಿನಧಿರಾಧಿಗಿದ್ದ ಮಾಧಿತಂಡ ಅಧಿಪ್ಪಚ್ಚು, ಕೊಧಿಡಗು ಬ್ರಿಧಿಟಿಧಿಷರ ವಧಿಶಧಿವಾಧಿಗುಧಿವುಧಿದನ್ನು ತಧಿಡೆಧಿಯಲು ಹೋಧಿರಾಟ ಮಾಡಿ ಬ್ರಿಧಿಟಿಷ್‌ ಸೈಧಿನ್ಯಧಿವನ್ನು ತಧಿಡೆಧಿದಿಧಿದ್ದಧಿರು. ಅಪ್ಪಚ್ಚು ಅವರ ಅರಣ್ಯ ಮಾರ್ಗಗಳ ಜ್ಞಾನ ಹಾಗೂ ಗೆರಿಲ್ಲಾತಂತ್ರಗಳು ಬ್ರಿಟಿಷರಿಗೆ ಸವಾಲಾಗಿ ಪರಿಣಮಿಸಿತು. ಆದರೆ, ಒಳಗಿನ ದೇಧಿಶದ್ರೋಹಿಗಳ ಮಾಹಿತಿ ಸೋರಿಕೆಯಿಂದ ಅಪ್ಪಚ್ಚು ಸೆರೆಗೆ ಸಿಕ್ಕರು. ಬ್ರಿಟಿಷರು ಅಪ್ಪಚ್ಚುರನ್ನು ಕಂಡು ಎಷ್ಟು ಹೆದರಿದ್ದರೆಂದರೆ ಅವರಿಗೆ ಮರಣದಂಡನೆಯನ್ನು ವಿಧಿಸಿತು.

ಜುಬಿಲಿ ಮೈದಾನದಿ ಕಿಚ್ಚಿನ ಬಿಜಲಿ (ಹಾಸನ)

1940ರ ಸಮಯದಲ್ಲಿಹಾಸನದ ಜುಬಿಲಿ ಮೈದಾನದಲ್ಲಿಮಧಿಹಾತ್ಮ ಗಾಂಧೀಜಿ ಭಾಷಣ ಮಾಡಿದ್ದರು. ಅಂದಿನಿಂದ ಜುಬಿಲಿ ಮೈದಾನ ಅಸಂಖ್ಯ ಪ್ರತಿಭಟನೆಗಳು, ಚರ್ಚೆಗಳು, ಭಾಷಣಗಳಿಗೆ ಸಾಕ್ಷಿಯಾಯಿತು. ಸ್ವಾತಂತ್ರ್ಯ ಹೋರಾಟಗಾರರಾದ ಎಸ್‌.ಕೆ.ಕರೀಂಖಾನ್‌, ಬೋರಣ್ಣಗೌಡ, ಎಚ್‌.ಎಸ್‌.ನಂಜಪ್ಪ, ಹಾರನಹಳ್ಳಿ ರಾಮಸ್ವಾಮಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್‌, ಕೆ.ಸಿ.ಕರೀಗೌಡರು, ಪಂಡಿತ್‌ ಶ್ರೀನಿವಾಸ ಅಯ್ಯಂಗಾರ್‌, ಅರಸೀಕೆರೆಯ ಡಾ.ಕರಿಸಿದ್ದಪ್ಪ, ಹಾಸನದ ಎಚ್‌.ಎಂ.ಶಿವಣ್ಣ, ಯಶೋಧರಮ್ಮ ದಾಸಪ್ಪಹೀಗೆ ಅನೇಕ ಮಹಾನುಭಾವರು ಇಲ್ಲಿತಮ್ಮ ಉಪಸ್ಥಿತಿ ಮತ್ತು ಮಾತಿನಿಂದ ಜನರಲ್ಲಿಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿದರು. ‘ಧಿ’ಜುಬಿಲಿ ಮೈದಾನದ ಸ್ವಾತಂತ್ರ್ಯ ಚಟುವಟಿಕೆಗಳಲ್ಲಿಭಾಗವಹಿಸಿದ ನಾವೆಲ್ಲರೂ ಬ್ರಿಟಿಷರ ಲಾಠಿ, ಬೂಟಿನ ಪೆಟ್ಟು ತಿಂದಿದ್ದೇವೆ. ಮನೆ, ಮಕ್ಕಳು, ಕುಟುಂಬ ವರ್ಗ ಹೀಗೆ ಎಲ್ಲವನ್ನೂ ಬಿಟ್ಟು ಹೋರಾಟ ನಡೆಸಿದ್ದು ಅವಿಸ್ಮರಣೀಯ ದಿನಗಳು,” ಎಂದು ಸ್ಮರಿಸುತ್ತಾರೆ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಂ.ಶಿವಣ್ಣ.

ಲೆಕ್ಕ ಪುಸ್ತಕದಿಂದ ರಾಮದುರ್ಗದ ಹುಲಿಯವರೆಗೆ… (ರಾಮದುರ್ಗ)

1934-1937ರ ಅವಧಿಯಲ್ಲಿತೀವ್ರ ಬರಗಾಲ. ಜನರಿಗೆ ಒಪ್ಪತ್ತಿನ ಊಟಕ್ಕೂ ಗತಿ ಇಲ್ಲದ ಸಂದರ್ಭದಲ್ಲಿಭೂ-ಕಂದಾಯ ಹೆಚ್ಚಿಸಿದ್ದರಿಂದ ಸಂಘರ್ಷ ಶುರುವಾಯಿತು. ರಾಮದುರ್ಗ ಸಂಸ್ಥಾನದ 33 ಹಳ್ಳಿಗಳ ಜನ ಒಗ್ಗೂಡಿ ಭೂ ಕಂದಾಯ ಮನ್ನಾ ಮಾಡಬೇಕೆಂದು ಕೇಳಲು ಅರಮನೆಯತ್ತ ಹೊರಟಿದ್ದರು. ರಾಜಬೀದಿಯಲ್ಲೇ ಇದ್ದ ಅಂಗಡಿಯಲ್ಲಿಲೆಕ್ಕ ಬರೆಯುತ್ತ ಕುಳಿತಿದ್ದ ಮಹಾದೇವಪ್ಪ ಪಟ್ಟಣ ಅವರನ್ನು ನಾಯಕತ್ವ ವಹಿಸುವಂತೆ ವಿನಂತಿಸಿದರು. ಕೈಯಲ್ಲಿದ್ದ ಪುಸ್ತಕ ಎಸೆದ ಮಹಾದೇವಪ್ಪನವರು ‘ನಡೀರಿ, ನಿಮ್ಮನ್ನ ಬಿಟ್ರ ನಮ್ದೇನೈತಿ’ ಎನ್ನುತ್ತಾ ಹೋರಾಟಕ್ಕೆ ರಂಗಪ್ರವೇಶ ಮಾಡಿದರು. ಕಂಗೆಟ್ಟ ರಾಜ ಅವರನ್ನು ಕಂಡಲ್ಲಿಗುಂಡಿಕ್ಕುವಂತೆ ಆದೇಶಿಸಿದ. ಮಹಾದೇವಪ್ಪ ಪಟ್ಟಣ 7 ವರ್ಷಗಳ ಕಾಲ ಅಜ್ಞಾತವಾಸಿಯಾದರು. ಕೊನೆಗೆ ಕ್ರಾಂತಿಕಾರಿಯಾಗಿ ಹೊರಬಂದು ‘ರಾಮದುರ್ಗದ ಹುಲಿ’ ಎಂಬ ಬಿರುದು ಪಡೆದರು.

ಚಳವಳಿಕಾರರ ನಿಧಿ ಕಾಯ್ದ ದೇವಿ ! (ಹುಬ್ಬಳ್ಳಿ)

ಸ್ವಾತಂತ್ರ್ಯ ಚಳವಳಿಯಲ್ಲಿಪಾಲ್ಗೊಂಡ ಮನೆಯವರೆಲ್ಲಜೈಲು ಸೇರಿದಾಗ ಆ ಮನೆಯ ಚಿನ್ನಾಭರಣವನ್ನು ಜತನದಿಂದ ಕಾಯ್ದುಕೊಂಡ ಖ್ಯಾತಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕೆಳಗಿನಮನೆಯ ಹಸಲರ ಸಮುದಾಯದ ದೇವಿ ಎಂಬ ಮಹಿಳೆಯದ್ದು.

ಕರ ನಿರಾಕರಣೆ ಚಳವಳಿಯಲ್ಲಿಪಾಲ್ಗೊಂಡ ಕಾರಣಕ್ಕೆ ಕೆಳಗಿನಮನೆ ನಾಗೇಶ ಹೆಗಡೆ ಹೇಳಿದಂತೆ ಸಹೋದರ ಸುಬ್ರಾಯ ಹೆಗಡೆ ತಮ್ಮ ಮನೆಯ ಚಿನ್ನಾಭರಣ, ಬೆಲೆ ಬಾಳುವ ವಸ್ತುಗಳನ್ನು ಚರಿಗೆ ಪಾತ್ರೆಯಲ್ಲಿಇಟ್ಟು ತೋಟದಲ್ಲಿಕೆಸುವಿನ ಹಿಂಡಿನ ಮಧ್ಯ ಹುಗಿದು ಇಡುತ್ತಾರೆ. ನಂತರ ಇಬ್ಬರೂ ಬ್ರಿಟಿಷರ ಬಂಧನಕ್ಕೆ ಒಳಗಾಗುತ್ತಾರೆ. ಮುಂದೊಂದು ದಿನ ಮನೆಗೆಲಸದಾಕೆ ದೇವಿ ಕೆಸುವಿನ ಸೊಪ್ಪು ಕೊಯ್ದು ತರಲು ಹೋದಾಗ ಚಿನ್ನಾಭರಣವಿದ್ದ ಚರಿಗೆ ಕಣ್ಣಿಗೆ ಬೀಳುತ್ತದೆ. ಅದು ಬೇರೆಯವರ ಪಾಲಾಗಬಾರದು ಎಂದು ಯೋಚಿಸಿ ಅದನ್ನು ಎತ್ತಿಕೊಂಡು ಬಂದು ತನ್ನ ಮನೆಯ ಅಡುಗೆ ಕೋಣೆಯಲ್ಲಿಬಚ್ಚಿಡುತ್ತಾಳೆ. ತನ್ನ ಮನೆಯಲ್ಲಿತೀರಾ ಬಡತನವಿದ್ದರೂ ಪಾತ್ರೆಯಲ್ಲಿರುವ ಚಿನ್ನಾಭರಣ ಮುಟ್ಟುವುದಿಲ್ಲ. ನಂತರ ಹೆಗಡೆ ಸಹೋದರರು ಬಂಧನದಿಂದ ಬಿಡುಗಡೆಯಾಗಿ ಬಂದಾಗ ಆ ಪಾತ್ರೆಯನ್ನು ದೇವಿ ಅವರಿಗೆ ಮರಳಿಸುತ್ತಾಳೆ. ಅವರು ಆಕೆಯ ಪ್ರಾಮಾಣಿಕತೆ ಮೆಚ್ಚಿ ಚಿನ್ನದ ಸರ ಉಡುಗೊರೆಯಾಗಿ ಕೊಡಲು ಹೋದಾಗ ಅದನ್ನು ತೆಗೆದುಕೊಳ್ಳಲು ನಿರಾಕರಿಸುತ್ತಾಳೆ.

ಗದುಗಿನ ಗಟ್ಟಿಗಿತ್ತಿ ಬಸವ್ವ (ಗದಗ)

ಬಸವ್ವ ವೀರಪ್ಪ ಅಂಗಡಿ 1930ರ ಉಪ್ಪಿನ ಸತ್ಯಾಗ್ರಹದಲ್ಲಿಸಕ್ರಿಯವಾಗಿ ಪಾಲ್ಗೊಂಡಿದ್ದರು. ವೀರಗಚ್ಚೆ ಹಾಕಿ ಗದಗಿನ ಗ್ರೇನ್‌ ಮಾರ್ಕೆಟ್‌ನ ಬನ್ನಿ ಕಟ್ಟೆಯಲ್ಲಿನಿಂತು ಉಪ್ಪು ಮಾರುತ್ತಿದ್ದ ಬಸವ್ವ ವೀರಪ್ಪ ಅಂಗಡಿ ವೀರ ಮಹಿಳೆ.

”ಉಪ್ಪು, ಉಪ್ಪು, ಇದು ಪರದೇಸಿ ಉಪ್ಪಲ್ಲ, ಗದುಗಿನ ಕಲ್ಲುಪ್ಪು, ಒಂದು ಉಪ್ಪಿನ ಚೀಟಿಗೆ ಒಂದೇ ರೂಪಾಯಿ” ಎಂದು ಘೋಷಿಸುತ್ತಾ, ಜನರಲ್ಲಿದೇಶಿ ಉಪ್ಪಿನ ಮಹತ್ವ ಸಾರಿದರು. ಪೊಲೀಸರು ಬಸವ್ವ ಅವರನ್ನು ತಡೆಯಲು ಬಂದಾಗ, ಪೊಲೀಸರನ್ನು ದೂಡಿ, ”ಇನ್ನೊಮ್ಮೆ ನನ್ನ ರಟ್ಟೆ ಮುಟ್ಟಬೇಡಿ” ಎಂದು ತಾಕೀತು ಮಾಡಿದರು. ಆಕೆಯ ಸಿಟ್ಟು ಮತ್ತು ದೃಢತೆ ಕಂಡು ಪೊಲೀಸರು ಕೂಡ ಹಿಂಜರಿದರು. ಆ ಸಮಯದಲ್ಲಿವೀರಶೈವ ಸಮಾಜದ ಕೆಲವರು ಸ್ವಾತಂತ್ರ್ಯ ಹೋರಾಟದಲ್ಲಿತೊಡಗಿದರೆ ಬಹಿಷ್ಕಾರ ಹಾಕುವುದಾಗಿ ಬೆದರಿಕೆ ಹಾಕಿದರು. ಆಗ ಬಸವ್ವ ಅವರು, ”ನಾನು ಸತ್ತಾಗ ನನ್ನ ಹೆಣ ಹೊರಲು ನೀವು ಬರಬೇಡಿ,” ಎಂದು ಖಂಡತುಂಡವಾಗಿ ಉತ್ತರಿಸಿದರು.

(ಡಾ. ಉಪೇಂದ್ರ ಘೋರ್ಪಡೆ ವಿರಚಿತ ‘ಸ್ವಾತಂತ್ರ್ಯದ ಸವಿನೀರು’ ಗ್ರಂಥ)

ಹಲಗಲಿಯ ಆಯುಧ ಜಡಗಾ, ಬಾಲಾ (ಬಾಗಲಕೋಟೆ)

1857ರ ಸಿಪಾಯಿ ದಂಗೆಯ ನಂತರ ಬ್ರಿಟಿಷರು ನಿಶಸ್ತ್ರೀಕರಣ ಕಾಯಿದೆ ಹೆಸರಿನಲ್ಲಿದೇಶಾದ್ಯಂತ ಜನರಿಂದ ಆಯುಧಗಳನ್ನು ವಶಪಡಿಸಿಕೊಂಡರು. ಬಾಗಲಕೋಟೆ ಜಿಲ್ಲೆಯ ಮುಧೋಳದ ಹಲಗಲಿಯ ಬೇಡ ಸಮುದಾಯದವರಿಂದ ಮನೆಯಲ್ಲಿನ ಚಾಕು, ಚೂರಿಗಳನ್ನು ವಶಪಡಿಸಿಕೊಳ್ಳಲು ಮುಂದಾದರು. ಆಗ ಜಡಗಾ, ಬಾಲಾ ಎಂಬ ಇಬ್ಬರು ವೀರರು ಬ್ರಿಟಿಷರ ಪ್ರಯತ್ನಕ್ಕೆ ತಡೆಯೊಡ್ದಿದರು. ಆಯುಧ ವಶಪಡಿಸಿಕೊಳ್ಳಲು ಬಂದ ಬ್ರಿಟಿಷ್‌ ಸೈನ್ಯ ಹಿಮ್ಮೆಟ್ಟಿಸುವ ಸಂದರ್ಭದಲ್ಲಿಹ್ಯಾವ್‌ಲಾಕ್‌ ಎಂಬ ಬ್ರಿಟಿಷ್‌ ಅಧಿಕಾರಿಯನ್ನು ಹತ್ಯೆ ಮಾಡುತ್ತಾರೆ.

ತೀವ್ರ ಮುಖಭಂಗ ಅನುಭವಿಸಿದ ಬ್ರಿಟಿಷ್‌ ಅಧಿಕಾರಿಗಳು ಬೃಹತ್‌ ದಂಡಿನೊಂದಿಗೆ ಹಲಗಲಿಗೆ ದಾಳಿಯಿಟ್ಟರು. ಜಡಗಾ, ಬಾಲಾ ನೇತೃತ್ವದಲ್ಲಿಜನರು ಬ್ರಿಟಿಷರ ವಿರುದ್ಧ ಮುಗಿಬಿದ್ದರು. ಅಪಾರ ಸೈನ್ಯದೊಂದಿಗೆ ಬಂದಿದ್ದ ಬ್ರಿಟಿಷರು ಜಡಗಾ, ಬಾಲಾ ಸೇರಿದಂತೆ 300 ಜನರನ್ನು ಬಂಧಿಸಿದರು. 1857ರಂದು 13 ಜನರನ್ನು ಮುಧೋಳದ ಸಂತೆಯಲ್ಲಿಯೇ ಗಲ್ಲಿಗೇರಿಸಿದರು. ಹಲಗಲಿ ಗ್ರಾಮದಲ್ಲಿನ ಜಡಗಾ, ಬಾಲಾ ಅವರ ಪುತ್ಥಳಿ ಅವರ ಶೌರ್ಯದ ಕಥೆ ಸಾರುತ್ತಿದೆ.

ಶ್ರೇಷ್ಠಿ ಪಾರ್ಕ್ನ ಭಾಷಣಕಾರರು (ಶಿವಮೊಗ್ಗ )

ಶಿಕಾರಿಪುರದ ಈಸೂರಲ್ಲಿನಡೆದ ಸ್ವಾತಂತ್ರ್ಯ ಹೋರಾಟ ಬಹುತೇಕರಿಗೆ ತಿಳಿದೇ ಇರುತ್ತದೆ. ಅದಕ್ಕೆ 2 ಎರಡು ದಶಕಗಳ ಮೊದಲೇ ಶಿವಮೊಗ್ಗದ ರಾಮಣ್ಣ ಶ್ರೇಷ್ಠಿ ಪಾರ್ಕ್ನಲ್ಲಿಸದ್ದಿಲ್ಲದೆ ಸ್ವಾತಂತ್ರ್ಯ ಹೋರಾಟದ ಚಟುವಟಿಕೆಗಳು ನಡೆಯುತ್ತಿದ್ದವು. ಶಿವಮೊಗ್ಗದಲ್ಲಿತುಂಗಾ ನದಿಯ ಎಡ ದಂಡೆಯಲ್ಲಿಪುರಸಭೆಯ ಮೈದಾನವಾಗಿದ್ದ ಈ ಜಾಗವು ಮಕ್ಕಳ ಆಟಕ್ಕೆ ಮಾತ್ರವಲ್ಲದೆ ಸಭೆ, ಸಮಾರಂಭಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಕೇಂದ್ರವಾಗಿತ್ತು. ಈ ವಾತಾವರಣವು ಆಗಿನ ಯುವಕರಲ್ಲಿಸ್ವಾತಂತ್ರ್ಯ ಹೋರಾಟದ ಮೊಳಕೆ ಒಡೆಯಲು ಕಾರಣವಾಯಿತು.

1927ರಲ್ಲಿಮಹಾತ್ಮ ಗಾಂಧೀಜಿ ಅವರು ಕಸ್ತೂರಬಾ ಅವರೊಂದಿಗೆ ಶಿವಮೊಗ್ಗಕ್ಕೆ ಆಗಮಿಸಿ ಒಂದು ವಾರ ಕಾಲ ವಾಸ್ತವ್ಯ ಹೂಡಿದ್ದು ಪಟ್ಟಣದಲ್ಲಿಸ್ವಾತಂತ್ರ್ಯ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿತು. 1942ರ ಕ್ವಿಟ್‌ ಇಂಡಿಯಾ ಚಳವಳಿ ಹೊತ್ತಿಗೆ ಈ ಮೈದಾನದಲ್ಲಿಪ್ರತಿದಿನ ಸ್ವಾತಂತ್ರ್ಯ ಚಳವಳಿ ನಡೆಯುತ್ತಿತ್ತು. ಧ್ವಜಾರೋಹಣ ನೆರವೇರಿಸಿ ದೇಶಭಕ್ತಿಗೀತೆಗಳನ್ನು ಹಾಡಿ ಪ್ರಭಾತ್‌ ಬೇರಿ ಹೊರಟು ಪೇಟೆಯನ್ನು ಸುತ್ತಿ ಇದೇ ಮೈದಾನದಲ್ಲಿಬರಕಾಸ್ತುಗೊಳಿಸುತ್ತಿದ್ದರು. ಎಚ್‌.ಸಿದ್ದಯ್ಯ, ಎಸ್‌.ವಿ.ಕೃಷ್ಣಮೂರ್ತಿರಾವ್‌, ಡಿ.ಎಸ್‌.ದಿನಕರ್‌, ಎಸ್‌.ಆರ್‌.ನಾಗಪ್ಪಶೆಟ್ಟರು ಮತ್ತು ಇತರರು ಮಾರುವೇಷದಲ್ಲಿ ಬಂದು ಜನರನ್ನು ಪ್ರಚೋದಿಸುವ ಭಾಷಣ ಮಾಡುತ್ತಿದ್ದರು. ಆಗಿನ ಯುವಪಡೆಗಳಾದ ಜಯತೀರ್ಥಾಚಾರ್‌, ಸಿ.ರಾಮಸ್ವಾಮಿ ಶೆಟ್ಟಿ, ಎಚ್‌.ಎಸ್‌.ರುದ್ರಪ್ಪ, ಪಾರ್ಥನಾರಾಯಣ್‌ ಪಂಡಿತ್‌, ಶಾಂತವೇರಿ ಗೋಪಾಲಗೌಡ, ವೈ.ಆರ್‌.ಪರಮೇಶ್ವರಪ್ಪ, ಎ.ವಿ.ಶ್ರೀನಿವಾಸ್‌ ಸೇರಿದಂತೆ ಹಲವರು ಜನರನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದರು.

 

ಖಿಲಾಫತ್‌ ಕಾರ್ಯಕರ್ತರ ನೆತ್ತರು ಹರಿದಿದ್ದು (ಧಾರವಾಡ)

1921 ರಲ್ಲಿ ಧಾರವಾಡದ ಜಕಣಿಬಾವಿ ಬಳಿ ನಡೆದ ಗೋಲಿಬಾರ್‌ಗೆ ಮೂವರು ಖಿಲಾಫತ್‌ ಕಾರ್ಯಕರ್ತರ ನೆತ್ತರು ಹರಿದು ಸ್ವಾತಂತ್ರತ್ರ್ಯ ಸಂಗ್ರಾಮದ ಕಿಚ್ಚು ಹೆಚ್ಚಿಸಿದ ಕತೆ ರೋಚಕ. ಬ್ರಿಟಿಷರ ವಿರುದ್ಧ ಅಸಹಕಾರ ಆಂದೋಲನ ಭಾಗವಾಗಿ ದೇಶಾದ್ಯಂತ ಪಿಕೆಟಿಂಗ್‌(ಉದ್ಯೋಗಸ್ಥಳದ ಹೊರಗಡೆ ಪ್ರತಿಭಟನೆ) ಜೋರಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಅಂದಿನ ಡಿಸಿ ಇಬ್ಬರು ಖಿಲಾಫತ್‌ ಸ್ವಯಂ ಸೇವಕರಿಗೆ 6ತಿಂಗಳ ಶಿಕ್ಷೆ ವಿಧಿಸಿದ್ದರು. ಇದರ ಪ್ರತಿಭಟನಾರ್ಥವಾಗಿ 1921 ಜುಲೈ 1ರಂದು ಜಕಣಿಬಾವಿ ಬಳಿ ಹರತಾಳ ನಡೆದಿತ್ತು. ಆಗ ಬ್ರಿಟಿಷರು ಮಲ್ಲಿಕ ಸಾಬ್‌ ಮರ್ದಾನಸಾಬ್‌, ಗೌಸುಸಾಬ್‌ ಖಾದರಸಾಬ್‌, ಅಬ್ದುಲ್‌ ಗಫಾರ ಚೌಕಥಾಯಿ ಎಂಬುವರ ಮೇಲೆ ಗುಂಡುಹಾರಿಸಿದರು. ಈ ಘಟನೆ ಸ್ವಾತಂತ್ರತ್ರ್ಯ ಹೋರಾಟಗಾರರ ಒಗ್ಗಟ್ಟನ್ನು ಮತ್ತಷ್ಟು ಗಟ್ಟಿಗೊಳಿಸಿತು.

ಈ ದೊಂಬಿಗೆ ಸಂಬಂಧಿಸಿದಂತೆ ಬ್ರಿಟಿಷ್‌ ಸರಕಾರ 29 ಜನರನ್ನು ಬಂಧಿಸಿ, 27 ಜನರ ಮೇಲೆ ಸುಳ್ಳು ಪ್ರಕರಣ ದಾಖಲಿಸಿತು. ಇದನ್ನು ತಿಳಿದು ಲಾಲಾ ಲಜಪತರಾಯ್‌ ಧಾರವಾಡಕ್ಕೆ ಬಂದು ಕೈದಿಗಳನ್ನೆಲ್ಲಕಂಡು ಧೈರ್ಯ ಹೇಳಿ ಸಾರ್ವಜನಿಕ ಭಾಷÜಣ ಕೂಡ ಮಾಡಿದ್ದರೆಂದು ಸ್ಥಳೀಯ ಉದಯ ಯಂಡಿಗೇರಿ ನೆನಪಿಸಿಕೊಳ್ಳುತ್ತಾರೆ.

ಗಾಂಧಿಗೆ 401 ರೂ.ಗಳ ಬೆಳ್ಳಿ ನಾಣ್ಯ (ಚಿಕ್ಕಮಗಳೂರು)

ಚಿಕ್ಕಮಗಳೂರು ಜಿಲ್ಲೆಯ ಅನೇಕರು ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿಸಕ್ರಿಯವಾಗಿ ಭಾಗವಹಿಸಲು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪ್ರೇರಣೆ ಸ್ಫೂರ್ತಿಯ ಸೆಲೆಯಾಗಿದೆ. ಮಹಾತ್ಮ ಗಾಂಧೀಜಿ 1927ರಲ್ಲಿಕರ್ನಾಟಕಕ್ಕೆ ಕೈಗೊಂಡ 10ನೇ ಪ್ರವಾಸದ ಅವಧಿಯಲ್ಲಿಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಿದ್ದರು. ಜಿಲ್ಲೆಯ ಜನರಲ್ಲಿಸ್ವಾತಂತ್ರ್ಯದ ಕಿಚ್ಚು ಹತ್ತಿಸಿದ್ದ ಅವರು, ಆಗಿನ ಜಿಲ್ಲಾಕೇಂದ್ರವಾಗಿದ್ದ ಕಡೂರು ಪಟ್ಟಣದಲ್ಲಿದೊಡ್ಡ ಸಭೆ ನಡೆಸಿದ್ದರು. ಅಂದಿನ ಸಭೆಯ ಉಸ್ತುವಾರಿಯನ್ನು ಕಡೂರಿನ ಕೆಂಪೇಗೌಡರು, ಕೃಷ್ಣ ಶೆಟ್ಟರು, ಪಿ.ಲಕ್ಷ್ಮೇನಾರಾಯಣ ಮುಂತಾದ ಮಹನೀಯರು ವಹಿಸಿದ್ದರು. ಈ ವೇಳೆ ಸಾರ್ವಜನಿಕರಿಂದ 401 ರೂ.ಗಳ ಬೆಳ್ಳಿ ನಾಣ್ಯಗಳ ಥೈಲಿಯನ್ನು ಸಮರ್ಪಿಸಲಾಗಿತ್ತು.

ಆಗಸ್ಟ್‌ 19 ರಂದು ಚಿಕ್ಕಮಗಳೂರು ನಗರದ ಈಗಿನ ಜಿಲ್ಲಾಧಿಕಾರಿ ಕಚೇರಿ (ಆಗಿನ ಅಮಲ್ದಾರರ ಕಚೇರಿ)ಯಲ್ಲಿಸಾರ್ವಜನಿಕ ಸಭೆ ನಡೆಸಿ ಸ್ವರಾಜ್ಯದ ಬಗ್ಗೆ ಭಾಷಣ ಮಾಡಿ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ನೀಡಿದ್ದರು.
ಗಂಗಾವಳಿಯಲ್ಲಿ ಜಂಗಲ್‌ಗೆ ಅಗ್ನಿ ಸ್ಪರ್ಶ (ಕಾರವಾರ)

ಅಂಕೋಲಾದಲ್ಲಿಕಳೆದ ವರ್ಷ ನಡೆದ ಶಿರೂರು ಗುಡ್ಡ ಕುಸಿತದಿಂದ ಹಾನಿಯಾದ ಉಳುವರೆಯಲ್ಲಿ1942ರಲ್ಲಿಆದ ಘಟನೆ ಇದು. ಆಗ ದೇಶದಲ್ಲಿ’ಚಲೇಜಾವ್‌ ಚಳವಳಿ’ ಜೋರಾಗಿತ್ತು. ಉಳುವರೆಯಲ್ಲಿವಾಹನಗಳನ್ನು ಗಂಗಾವಳಿ ನದಿ ದಾಟಿಸಲು ಎರಡು ದೊಡ್ಡ ದೋಣಿಗಳಿದ್ದವು. ಅದನ್ನು ‘ಜಂಗಲ್‌’ ಎನ್ನುತ್ತಿದ್ದರು. ಎರಡೂ ದೋಣಿಗೆ ದೊಡ್ಡ ದೊಡ್ಡ ಹಲಗೆ ಹಾಕಿ ಅದರ ಮೇಲೆ ಲಾರಿ, ಬಸ್‌ ಇಟ್ಟು ನದಿ ದಾಟಿಸುತ್ತಿದ್ದರು. ಅಲ್ಲಿಪೊಲೀಸ್‌ ನಾಕಾ ಕೂಡ ಇತ್ತು.

ಒಂದು ದಿನ ಸ್ವಾತಂತ್ರತ್ರ್ಯ ಹೋರಾಟಗಾರರು ದಾಳಿ ನಡೆಸಿ ಕಾವಲಿಗಿದ್ದ ನಾಲ್ವರು ಪೊಲೀಸರನ್ನು ಕಟ್ಟಿ ಹಾಕಿ ದೋಣಿಗಳ ಮೇಲೆ ಕಟ್ಟಿಗೆ, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದರು. ಹಗ್ಗ ಹರಿದು ದೋಣಿಯನ್ನು ನದಿಯಲ್ಲಿ ತೇಲಿ ಬಿಟ್ಟರು. ದೋಣಿಗಳು ಬೆಂಕಿ ಚೆಂಡಿನ ತೇರಿನಂತೆ ಗಂಗಾವಳಿ ನದಿಯಲ್ಲಿ ಸಮುದ್ರದ ಕಡೆ ಸಾಗಿತು. ಅವು ಸ್ವಾತಂತ್ರತ್ರ್ಯ ಹೋರಾಟಗಾರರ ಜ್ವಾಲಾಗ್ನಿಯ ಪ್ರತೀಕವಾಗಿತ್ತು. ಉತ್ತರ ಕನ್ನಡ ಜಿಲ್ಲೆಯಲ್ಲಿಇಂಥದ್ದೊಂದು ಹೋರಾಟ ನಡೆಯಬಹುದು ಎಂದು ಬ್ರಿಟಿಷರೂ ಊಹಿಸಿರಲಿಲ್ಲ. ಕಂಪನಿ ಸರಕಾರದ ಅಹಂಗೆ ಪೆಟ್ಟು ನೀಡಿದ ಘಟನೆಯಿದು.

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button