
*ಸಾರ್ವನಜನಿಕರಿಗೆ ಗೂಂಡಾ ವರ್ತನೆ ತೋರಿದ ಪಿಡಿಓ ಉಸ್ಮಾನ್ ನಧಾಪ ಅಮಾನತ್ತಿಗೆ ಮನವಿ*
ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಮಂಗೇನಕೊಪ್ಪ ಗ್ರಾಮ ಪಂಚಾಯಿತಿ ಪಿಡಿಓ ಉಸ್ಮಾನ ನಧಾಪ ಅವರಿಂದ ನ್ಯಾಯ ಕೇಳಿದ ಸಾರ್ವಜನಿಕರಿಗೆ ಗೂಂಡಾವರ್ತನೆ ತೋರಿ ದಮಕಿ ಹಾಕಿದ ಪ್ರಕರಣ ಒಂದು ತಡವಾಗಿ ಬೆಳಕಿಗೆ ಬಂದಿದೆ
ಇದೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಶಿವಾಜಿ ನಗರ ಗ್ರಾಮದಲ್ಲಿ ಪಂಚಾಯಿತಿಯಲ್ಲಿ ದಾಖಲ ಇಲ್ಲದಿರುವ ಕೆಲ ಮನೆಗಳಿಗೆ ಒಬ್ಬ ಚುನಾವಯಿತ ಸದಸ್ಯನ ಪ್ರಭಾವದ ಮೇಲೆ ಅನದಿಕೃತವಾಗಿ ಹಲವಾರು ಕಾಮಗಾರಿಗಳನ್ನ ಮಾಡಲಾಗಿತ್ತು ಅದಿಕೃತವಾಗಿ ತೆರಿಗೆ ತುಂಬುತ್ತಿರುವ ಮನೆಗಳಿಗೆ ಸೌಲಭ್ಯ ಕೋಡುತ್ತಿಲ್ಲವೆಂದು ಪ್ರಶ್ನಿಸಿ ಈಶ್ವರ ಮಡ್ಡಿಮನಿಯವರು ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿಗೆ ದೂರು ಸಲ್ಲಿಸಿದ್ದರು
ಇದರಿಂದ ಪಿಡಿಓ ಉಸ್ಮಾನ ನಧಾಪ ಅವರು ದಿ. 5/8/25 ರಂದು ಸ್ಥಳ ಪರಿಸಲನೆಗಾಗಿ ಶಿವಾಜಿ ನಗರಕ್ಕೆ ಹೋಗಿದ್ದಾರೆ ಆ ಸಂಧರ್ಭದಲ್ಲಿ ದೂರುದಾರ ಈಶ್ವರ ಮಡ್ಡಿಮನಿಯವರ ಮಗನಾದ ಲಿಂಗರಾಜ ಮಡ್ಡಿಮನಿಯವರು ಪರಿಸಿಲನೆ ಮಾಡುವ ವಿಡಿಯೋ ಚಿತ್ರಿಕರಣ ಮಾಡಲು ಮುಂದಾಗಿದ್ದಾರೆ ಆಗ ಪಿಡಿಓ ಅವರು ಆತನನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿ ನಾನ ಬೆಲಬೇಲಕೇಸ ಮಾಡಿ ಎಳು ವರ್ಷ ಜೈಲಿಗೆ ಹಾಕಿಸುತ್ತೇನೆಂದು ಧಮಕಿ ಹಾಕಿ ಗುಂಡಾ ವರ್ತನೆ ತೋರಿದ್ದಾರೆ ಅದು ಅಲ್ಲದೆ ಬೈದು ಹಲ್ಲೆ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿ ಈಶ್ವರ ಮಡ್ಡಿಮನಿಯವರು ಗೂಂಡಾ ವರ್ತನೆ ತೋರಿದ ಪಿಡಿಓನನ್ನ ತಕ್ಷಣ ಅಮಾನತ್ತು ಮಾಡಬೇಕೆಂದು ತಾಲೂಕು ಪಂಚಾಯತಿಗೆ 8/8/25 ರಂದು ದೂರು ಸಲ್ಲಿಸಿದ್ದರು ಆದರೆ ಇಲ್ಲಿಯವರೆಗೆ ಸದರಿ ಪಿಡಿಓ ವಿರುದ್ದ ಯಾವುದೆ ಕ್ರಮ ಕೈಗೋಳ್ಳದ ಹಿನ್ನೆಲೆಯಲ್ಲಿ ಇಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅದಿಕಾರಿಗಳಿಗೆ ಗೂಂಡಾ ವರ್ತನೆ ತೋರಿದ ಪಿಡಿಓ ಅಮಾನತ್ತು ಮಾಡಬೇಕೆಂದು ಈಶ್ವರ ಮಡ್ಡಿಮನಿಯವರು ದೂರು ಸಲ್ಲಿಸಿದರು
ಈ ಸಂದರ್ಭದಲ್ಲಿ ಸಮಾಜ್ ಸೇವಕ ಜ್ಯೋತಿಬಾ ಬೆಂಡಿಗೇರಿ,ಈಶ್ವರ್ ಮಡ್ಡಿಮನಿ , ರುದ್ರಪ್ಪ ಮಡ್ಡಿಮನಿ, ನಾರಾಯಣ್ ಬನೊಷಿ, ಬಸವರಾಜ್ ಸತಬನ್ನವರ , ಪತ್ರಕರ್ತ ಶಶಿಕಾಂತ ತಳವಾರ ಉಪಸ್ಥಿತರಿದ್ದರು


