ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆ ಕುರಿತು ಅಚ್ಚರಿ ಭವಿಷ್ಯ ನುಡಿದ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು

ಹಾಸನ: ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಮುಸುಕುಧಾರಿ ದೂರುದಾರ ನೂರಾರು ಶವವನ್ನ ಹೂತು ಹಾಕಿರುವ ಕುರಿತು ನೀಡಿದ ಹೇಳಿಕೆ ರಾಜ್ಯ ಮಟ್ಟದಲ್ಲಿ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲೂ ತೀವ್ರ ಸಂಚಲನ ಸೃಷ್ಟಿಸಿತ್ತು. ಇದೀಗ ಧರ್ಮಸ್ಥಳದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಹಾಸನ ಜಿಲ್ಲೆ ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಬಗ್ಗೆ ಭವಿಷ್ಯ ನುಡಿದಿದ್ದು, ನಿನಗಾಗಿ ಪಶ್ಚಿಮದಲ್ಲಿ ಸೂರ್ಯ ಮೂಡುತ್ತಾನಾ? ಶಕ್ತಿ ಇದ್ದರೆ ಗೆಲ್ಲು, ಇಲ್ಲದಿದ್ದರೆ ಒದಿಸಿಕೋ ಎನ್ನುವ ಮಾತುಗಳನ್ನಾಡಿದ್ದಾರೆ. ನಿನಗಾಗಿ ಪಡುವಣದಲ್ಲಿ ರವಿ ಮೂಡುವನೇ, ಶಕ್ತಿ ಇದ್ದರೆ ಗೆಲ್ಲು, ಇಲ್ಲದಿದ್ದರೆ ಒದಿಸಿಕೋ. ದ್ವೇಷ, ಅಸೂಯೆ, ಮತ್ಸರ ಜಾಗತಿಕವಾಗಿ ತಾಂಡವಾಡುತ್ತದೆ. ಬೆಳಕು ಬಂದ ಮೇಲೆ ಕತ್ತಲು ಹೋಗುತ್ತದೆ ಇದು ವಿಧಿ ನಿಯಮ. ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದಿದ್ದಾರೆ.


