State

BELAGAVI : ಬಿಪಿಎಲ್ ಕಾರ್ಡ್ ಹೊಂದಿದ್ದ ಸರ್ಕಾರಿ ನೌಕರರಿಗೆ ದಂಡದ ಬಿಸಿ!

ಬೆಳಗಾವಿ : ಬಿಪಿಎಲ್ ಕಾರ್ಡ್ (BPL ) ಆಕ್ರಮ ನಿಯಂತ್ರಣಕ್ಕೆ ಸರ್ಕಾರ (government) ಅನೇಕ ಕಾರ್ಯಕ್ರಮ ರೂಪಿಸಿದ್ರೂ ಯಾವುದೇ ಪ್ರಯೋಜನ ಆಗ್ತಿಲ್ಲ. ಇದೀಗ ಬೆಳಗಾವಿಯಲ್ಲಿ ಬಡವರ ಅನ್ನ ಕಸಿಯುತ್ತಿದ್ದ ಜನರಿಗೆ ದಂಡದ (fine) ಬಿದ್ದಿದೆ.

ಬಡ ಕುಟುಂಬಗಳಿಗೆ ಸೇರಬೇಕಾದ ‘BPL’ ರೇಷನ್‌ ಕಾರ್ಡ್‌ ಪಡೆದ 1600ಕ್ಕೂ ಅಧಿಕ ಸರಕಾರಿ ನೌಕರರಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ 1.39 ಕೋಟಿ ರೂ. ದಂಡ ವಿಧಿಸಿ ಬಿಸಿ ಮುಟ್ಟಿಸಿದೆ.

2024-25ನೇ ಸಾಲಿನಲ್ಲಿ ಮತ್ತೆ ಕಾರ್ಯಾಚರಣೆ ನಡೆಸಿದಾಗ ಬಿಪಿಎಲ್‌ ಕಾರ್ಡ್‌ ಪಡೆದ 363 ನೌಕರರನ್ನು ಗುರುತಿಸಿ 17.10 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಇದೀಗ ಜಿಲ್ಲೆಯ ಒಟ್ಟು 1,679 ಸರಕಾರಿ ನೌಕರರಿಗೆ ನೋಟಿಸ್‌ ಜಾರಿ ಮಾಡಿ ಅವರಿಂದ 1,39,27,221 ರೂ.ದಂಡ ವಸೂಲಿ ಮಾಡಲಾಗಿದೆ.

2025-26ರಲ್ಲಿ ಕಾರ್ಯಾಚರಣೆ ವೇಳೆಯಲ್ಲಿ 1,407 ಅನರ್ಹ ಕುಟುಂಬಗಳು ಪಡೆದಿರುವ ಬಿಪಿಎಲ್‌ ಪಡಿತರ ಚೀಟಿಗಳನ್ನು ಪತ್ತೆಮಾಡಿ 7,55,177 ರೂ. ದಂಡ ಸಂಗ್ರಹಿಸಲಾಗಿದೆ. ಸ್ವಯಂ ಪ್ರೇರಿತರಾಗಿ 932 ಅನರ್ಹರು ತಾವು ಪಡೆದಿದ್ದ ಬಿಪಿಎಲ್‌ ಕಾರ್ಡ್‌ಗಳನ್ನು ಸರೆಂಡರ್‌ ಮಾಡಿದ್ದಾರೆ. ಹಾಗೆಯೇ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದ 591 ಜನರ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ.

ಸದ್ಯ 67,667 ಅಂತ್ಯೋದಯ, 10,72,692 ಬಿಪಿಎಲ್‌ ಹಾಗೂ 3,30,455 ಎಪಿಎಲ್‌ ಪಡಿತರ ಚೀಟಿಗಳು ಚಾಲ್ತಿಯಲ್ಲಿದ್ದು, ಒಟ್ಟು 50,79,707 ಫಲಾನುಭವಿಗಳು ಇದ್ದಾರೆ. ಬಿಪಿಎಲ್‌ ಕಾರ್ಡ್‌ ಪಡೆದ ಅನರ್ಹರ ಪತ್ತೆ ಕಾರ್ಯಾಚರಣೆಯಲ್ಲಿ 2022ರಲ್ಲಿ1,316 ಸರಕಾರಿ ನೌಕರರು ಪಡೆದಿದ್ದ ಬಿಪಿಎಲ್‌ ಪಡಿತರ ಚೀಟಿಗಳನ್ನು ಪತ್ತೆ ಮಾಡಿ, 1.22 ಕೋಟಿ ರೂ.ವಿಧಿಸಲಾಗಿತ್ತು.

ಇನ್ನು, ಸರಕಾರಿ ನೌಕರರು ಪಡೆದಿದ್ದ 1,679 ಬಿಪಿಎಲ್‌ ಚೀಟಿಗಳನ್ನು APL ಪಡಿತರ ಚೀಟಿಗಳಾಗಿ ಬದಲಾಯಿಸಲಾಗಿದೆ. ಇದರ ಜತೆಗೆ ಆಹಾರ ನಿರೀಕ್ಷಕರು ತನಿಖೆ ಮಾಡಿ ಹೆಚ್ಚಿನ ಆದಾಯ ಹೊಂದಿರುವ, 3 ಹೆಕ್ಟೇರ್‌ಗಿಂತ ಹೆಚ್ಚಿನ ಜಮೀನು ಹೊಂದಿರುವ 7,544 ಕುಟುಂಬ ಹಾಗೂ ಸ್ವಯಂ ಪ್ರೇರಿತರಾಗಿ ಸರೆಂಡರ್‌ ಮಾಡಿರುವ ಅನರ್ಹರ ಪಡಿತರ ಚೀಟಿಗಳನ್ನು ಕೂಡ APL ಪಡಿತರ ಚೀಟಿಗಳಾಗಿ ಪರಿವರ್ತನೆ ಮಾಡಲಾಗಿದೆ.

ಇನ್ನು,
ರಾಜ್ಯ ಸರ್ಕಾರ ಈಗಾಗಲೇ ಅರ್ಹರಿಗೆ ಬಿಪಿಎಲ್​​ ಕಾರ್ಡ್​ ಇರಬೇಕು, ಅನರ್ಹರ ಕಾರ್ಡ್​​​ ರದ್ದುಗೊಳಿಸುವ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಮುಂದುವರಿದಿದೆ. ಇದರ ನಡುವೆ ಸುಮಾರು 5 ಸಾವಿರಕ್ಕೂ ಅಧಿಕ ಸರ್ಕಾರಿ ನೌಕರರೂ ಬಿಪಿಎಲ್ ಕಾರ್ಡ್​​ ಹೊಂದಿರುವುದು ಬೆಳಕಿಗೆ ಬಂದಿದ್ದು, ಅಂಥವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಇದೀಗ ಖಡಕ್ ಸೂಚನೆ ನೀಡಿದ್ದಾರೆ.

ಈ ಕುರಿತು ಕರ್ನಾಟಕ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಷಡಕ್ಷರಿ ಮಾಹಿತಿ ನೀಡಿದ್ದಾರೆ. ಈ ಹಿಂದೆಯೂ ಕೆಲ ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್​​ ಸೌಲಭ್ಯ ಪಡೆಯುತ್ತಿರುವ ಆರೋಪಗಳು ಕೇಳಿ ಬಂದಿದ್ದವು. ನಿಜವಾಗಲೂ ಬಿಪಿಎಲ್ ಕಾರ್ಡ್​ಗಳ ಮೂಲಕ ಬಡವರಿಗೆ ಸರ್ಕಾರಿ ಯೋಜನೆಗಳು ತಲುಪಬೇಕು.

ಇತ್ತೀಚೆಗೆ ಸರ್ಕಾರಿ ನೌಕರಿ ಪಡೆದುಕೊಂಡ ಕೆಲವರು ಸರ್ಕಾರಿ ‌ಕೆಲಸ ಸಿಗುವ ಮೊದಲೇ ಬಿಪಿಎಲ್ ಕಾರ್ಡ್ ಹೊಂದಿರುತ್ತಾರೆ. ಅಂತವರು ಸರ್ಕಾರಕ್ಕೆ ಬಿಪಿಎಲ್ ಕಾರ್ಡ್​ ಹಿಂದಿರುಗಿಸುವುದನ್ನು ಮರೆತಿರುತ್ತಾರೆ. ಇನ್ನು ಕೆಲವರು ಸರ್ಕಾರಿ ಸೇವೆಗೆ ಸೇರಿದರೂ ಬಿಪಿಎಲ್​​​​​ ಕಾರ್ಡ್​ ಸರ್ಕಾರಕ್ಕೆ ಹಿಂದಿರುಗಿಸಿರಲ್ಲ. ಕೆಲವರು ಕಾರ್ಡ್​​ ಸರ್ಕಾರಕ್ಕೆ ವಾಪಸ್​ ನೀಡಿರುತ್ತಾರೆ ಎಂದು ಷಡಕ್ಷರಿ ಹೇಳಿದ್ದಾರೆ.

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button