ಬೆಳಗಾವಿ: ಬೆಳಗಾವಿಯಲ್ಲಿ ಈದ್-ಎ-ಮಿಲಾದ್ ಉನ್ ನಬಿ ಮೆರವಣಿಗೆಯೂ ನಗರದಲ್ಲಿ ಭಾನುವಾರ ಅದ್ದೂರಿಯಾಗಿ ಜರುಗಿತು.

ಬೆಳಗಾವಿ: ಬೆಳಗಾವಿಯಲ್ಲಿ ಈದ್-ಎ-ಮಿಲಾದ್ ಉನ್ ನಬಿ ಮೆರವಣಿಗೆಯೂ ನಗರದಲ್ಲಿ ಭಾನುವಾರ ಅದ್ದೂರಿಯಾಗಿ ಜರುಗಿತು. ಅಶೋಕ ವೃತ್ತ(ಕೋಟೆ ಕೆರೆ) ದಿಂದ ಆರಂಭವಾದ ಮೆರವಣಿಗೆಗೆ ಶಾಸಕ ರಾಜು ಸೇಠ ಅವರು ಚಾಲನೆ ನೀಡಿದರು.
ಶಾಸಕ ರಾಜು ಸೇಠ್ ಅವರು ಮಾತನಾಡಿ, ಮೊಹ್ಮದ್ ಪೈಗಂಬರರು ನೀಡಿದ ಪ್ರೀತಿ, ಶಾಂತಿ ಸೌಹಾರ್ದತೆಯ ಸಂದೇಶವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಪೈಗಂಬರರು ನೀಡಿದ ಹಕ್ಕುಗಳು, ಸಂದೇಶಗಳ ದಾರಿಯಲ್ಲಿ ನಡೆದು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದರು.
ಮಾಜಿ ಶಾಸಕ ಫಿರೋಜ್ ಸೇಠ್ ಅವರು ಮಾತನಾಡಿ, ಎಲ್ಲರೂ ಒಂದಾಗಿದ್ದರೇ, ಗಣೇಶೋತ್ಸವ ಮತ್ತು ಈದ್ ಮಿಲಾದ್ ಮೆರವಣಿಗೆ ಸೌಹಾರ್ದತೆಯೊಂದಿಗೆ ಒಂದೇ ದಿನ ನಡೆಸಬಹುದು. ಪಾಲ್ಯೆಸ್ತಿನ್ ದೇಶಕ್ಕೆ ಬೆಂಬಲಿಸಿದ ಪಿಎಂ ಮೋದಿ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಅವರು ಮಾತನಾಡಿ, ಕಳೆದ 3 ವರ್ಷಗಳಿಂದ ಗಣೇಶೋತ್ಸವದ ಹಿನ್ನೆಲೆ ಮುಸ್ಲಿಂ ಸಮಾಜವು ಈದ್ ಎ ಮಿಲಾದ್ ಮೆರವಣಿಗೆಯನ್ನು ಮುಂದೂಡಿ ಸಹಕರಿಸುವ ಮೂಲಕ ಶಾಂತಿ ಮತ್ತು ಸೌಹಾರ್ದತೆಗೆ ಮಾದರಿಯಾಗಿದೆ.ಬೆಳಗಾವಿಯ ಸೌಹಾರ್ದತೆ ಇಡಿ ಜಗತ್ತಿಗೆ ಮಾದರಿಯಾಗಲಿ. ಮೊಹ್ಮದ್ ಪೈಗಂಬರರು ಇಡೀ ಮಾನವೀಯ ಜೀವನಕ್ಕೆ ನೀಡಿದ ಸಂದೇಶವನ್ನು ಅರಿತು ಬಾಳಬೇಕೆಂದು ಎಂದು ತಿಳಿಸಿದರು.
ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ ಅವರು ಮಾತನಾಡಿ, ಎಲ್ಲರಿಗೂ ಹಬ್ಬದ ಶುಭಾಷಯಗಳನ್ನು ನೀಡಿ, ಮೊಹ್ಮದ್ ಪೈಗಂಬರರ ಶಾಂತಿ – ಸೌಹಾರ್ದತೆಯ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಡಿಸಿಪಿರೋಹನ್ ಜಗದೀಶ್ ಅವರು ಮಾತನಾಡಿ, ವಿಶೇಷವಾಗಿ ಈದ್ ಮಿಲಾದ್ ಹಬ್ಬದ ನಿಯೋಜನೆಗೆ ಆಗಮಿಸಿ, ಎಲ್ಲರಿಗೂ ಹಬ್ಬದ ಶುಭಾಷಯಗಳನ್ನು ತಿಳಿಸಿದರು.
ಮಾಜಿ ನಗರಸೇವಕ ರಂಜೀತ್ ಚವ್ಹಾಣ್ ಪಾಟೀಲ್ ಅವರು ಮಾತನಾಡಿ, ಬೆಳಗಾವಿಯಲ್ಲಿ ಹಿಂದೂ ಮುಸ್ಲಿಂ ಬಾಂಧವರು ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬಗಳನ್ನು ಪರಸ್ಪರ ಸಹಯೋಗದೊಂದಿಗೆ ನಡೆಸಿಕೊಂಡು ಬರಲಾಗುತ್ತಿದೆ. ಬೆಳಗಾವಿ ನಗರದಲ್ಲಿ ಶಾಂತಿ ಮತ್ತು ಸೌಹಾರ್ದತೆಯೂ ಎಂದಿಗೂ ಅಖಂಡಿತವಾಗಿರಲಿ ಎಂದರು.
ಈ ಸಂದರ್ಭದಲ್ಲಿ ಮೌಲಾನಾಗಳು, ಮುಸ್ಲಿಂ ಸಮಾಜದ ಮುಖಂಡರು ಮತ್ತು ಸಮಾಜ ಬಾಂಧವರು ಭಾಗಿಯಾಗಿದ್ಧರು. ನಂತರ ಮೆರವಣಿಗೆಯೂ ಆರಂಭಗೊಂಡು, ಫೋರ್ಟ್ ರಸ್ತೆ, ಆರ್.ಟಿ.ಓ. ಸರ್ಕಲ್ ರಾಣಿ ಚನ್ನಮ್ಮ ವೃತ್ತ, ಕಾಲೇಜ್ ರೋಡ್ ಮಾರ್ಗವಾಗಿ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು.