ಗುಡ್‌ನ್ಯೂಸ್: ದಸರಾ, ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ರೈಲು ಸಂಚಾರ…

South Western Railway: ಜನರು ದಸರಾ ಹಬ್ಬ ನಂತರ ದೀಪಾವಳಿ ಆಚರಣೆಗೆ ಸಜ್ಜಾಗುತ್ತಿದ್ದಾರೆ. ಈ ಹಬ್ಬಗಳ ಪ್ರಯುಕ್ತ ತಮ್ಮ ಊರುಗಳಿಗೆ ತೆರಳುವ ಹಿನ್ನೆಲೆಯಲ್ಲಿ ಜನದಟ್ಟಣೆ ಹೆಚ್ಚಾಗುತ್ತದೆ. ಈ ಪ್ರಯುಕ್ತ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ದಕ್ಷಿಣ ಪಶ್ಚಿಮ ರೈಲು ಮಂಡಳಿ ಹಲವು ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ.
ಈ ರೈಲುಗಳು ಮೈಸೂರು-ರಾಮೇಶ್ವರಂ, ಮೈಸೂರು-ತಿರುನಲ್ವೇಲಿ ಹಾಗೂ ಮೈಸೂರು-ಕಟ್ಪಾಡಿ ಮಾರ್ಗಗಳಲ್ಲಿ ಸಂಚರಿಸಲಿವೆ. ಯಾವುವು ರೈಲುಗಳು, ಸಂಖ್ಯೆ ಸಂಚಾರದ ಸಮಯ, ವೇಳಾಪಟ್ಟಿ ಇಲ್ಲಿದೆ.
* ಮೈಸೂರು-ರಾಮೇಶ್ವರಂ ಮಾರ್ಗದಲ್ಲಿ ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 27 ರವರೆಗೆ ಪ್ರತೀ ಸೋಮವಾರ (06237) ಮೈಸೂರು-ರಾಮೇಶ್ವರಂ ವಿಶೇಷ ರೈಲು ಸಂಜೆ 6.35ಕ್ಕೆ ಹೊರಡುತ್ತದೆ. ಮರುದಿನ ಮಂಗಳವಾರ ಬೆಳಗ್ಗೆ 10.00ಕ್ಕೆ ತಲುಪಲಿದೆ. ಹಿಂತಿರುಗುವ ರೈಲು (06238) ರಾಮೇಶ್ವರಂ-ಮೈಸೂರು ರೈಲು ಸೆಪ್ಟೆಂಬರ್ 16 ರಿಂದ ಅಕ್ಟೋಬರ್ 28 ರವರೆಗೆ ಪ್ರತೀ ಮಂಗಳವಾರ ಮಧ್ಯಾಹ್ನ 3.10ಕ್ಕೆ ಹೊರಟು, ಬುಧವಾರ ಬೆಳಿಗ್ಗೆ 7.45ಕ್ಕೆ ಮೈಸೂರಿಗೆ ತಲುಪಲಿದೆ.
* ಮೈಸೂರು-ತಿರುನಲ್ವೇಲಿ ಮಾರ್ಗದಲ್ಲಿ ಸೆಪ್ಟೆಂಬರ್ 15ರಿಂದ ನವೆಂಬರ್ 24ರವರೆಗೆ ಪ್ರತೀ ಸೋಮವಾರ (06239) ಮೈಸೂರು-ತಿರುನಲ್ವೇಲಿ ರೈಲು ರಾತ್ರಿ 8.15ಕ್ಕೆ ಹೊರಟು, ಮಂಗಳವಾರ ಬೆಳಿಗ್ಗೆ 10.50ಕ್ಕೆ ತಲುಪಲಿದೆ. ಹಿಂತಿರುಗುವ ರೈಲು (06240) ತಿರುನಲ್ವೇಲಿ-ಮೈಸೂರು ರೈಲು ಸೆಪ್ಟೆಂಬರ್ 16 ರಿಂದ ನವೆಂಬರ್ 25 ರವರೆಗೆ ಪ್ರತೀದಿನ ಮಂಗಳವಾರ ಬೆಳಿಗ್ಗೆ 5.40ಕ್ಕೆ ಹೊರಟು, ಬುಧವಾರ ಬೆಳಿಗ್ಗೆ 11.50ಕ್ಕೆ ಮೈಸೂರಿಗೆ ಬಂದು ಸೇರಲಿದೆ.
* ಇದೇ ರೀತಿಯಲ್ಲಿ, ಮೈಸೂರು-ಕಟ್ಪಾಡಿ ಮಾರ್ಗದಲ್ಲಿ ಸೆಪ್ಟೆಂಬರ್ 18ರಿಂದ ನವೆಂಬರ್ 29ರವರೆಗೆ ಪ್ರತೀ ಗುರುವಾರ (06243) ಮೈಸೂರು-ಕಟ್ಪಾಡಿ ರೈಲು ರಾತ್ರಿ 9.20ಕ್ಕೆ ಹೊರಟು, ಶುಕ್ರವಾರ ಬೆಳಗ್ಗೆ 11.00ಕ್ಕೆ ತಲುಪಲಿದೆ. ಹಿಂತಿರುಗುವ (06244) ಕಟ್ಪಾಡಿ-ಮೈಸೂರು ರೈಲು ಸೆಪ್ಟೆಂಬರ್ 19 ರಿಂದ ನವೆಂಬರ್ 29 ರವರೆಗೆ ಪ್ರತೀ ಶುಕ್ರವಾರ ಸಂಜೆ 6.45ಕ್ಕೆ ಹೊರಟು, ಶನಿವಾರ ಬೆಳಿಗ್ಗೆ 7.45ಕ್ಕೆ ಮೈಸೂರಿಗೆ ತಲುಪಲಿದೆ.
* ಈ ವಿಶೇಷ ರೈಲುಗಳ ಮೂಲಕ ಪ್ರಯಾಣಿಕರಿಗೆ ಹಬ್ಬದ ದಿನಗಳಲ್ಲಿ ಹೆಚ್ಚುವರಿ ಸೌಲಭ್ಯ ದೊರೆಯಲಿದೆ. ರೈಲು ಮತ್ತು ಆಸನ ಲಭ್ಯತೆ ಕುರಿತು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ www.enquiry.indianrail.gov.in , https://www.enquiry.indianrail.gov.in ಅಥವಾ NTES ಮೊಬೈಲ್ ಆಪ್ ಮೂಲಕ ಮಾಹಿತಿ ತಿಳಿದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.