
ದೆಹಲಿ, ಫೆಬ್ರವರಿ 08: ದೆಹಲಿ ವಿಧಾನಸಭಾ ಚುನಾವಣೆ 2025 ಮತದಾನ ಬುಧವಾರ (ಫೆ.5) ಪೂರ್ಣಗೊಂಡಿದ್ದು, ಇಂದು ಶನಿವಾರ (ಫೆ. 08) ಮತ ಎಣಿಕೆ ನಡೆದು ಫಲಿತಾಂಶ ಹೊರ ಬೀಳಲಿದೆ. ಚುನಾವಣೆ ಆಯೋಗವು ದೆಹಲಿಯ 70 ಸೀಟುಗಳಲ್ಲಿ ಯಾವ ಪಕ್ಷ ಅತೀ ಹೆಚ್ಚು ಸೀಟು ಗಳಿಸಲಿದೆ ಎಂಬುದು ಕೆಲವೇ ಕ್ಷಣಗಳಲ್ಲಿ ಬಹಿರಂಗಗೊಳ್ಳಲಿದೆ.
ಬೆಳಗ್ಗೆ 7ಗಂಟೆಯಿಂದಲೇ ಮತ ಎಣಿಕೆ ಆರಂಭವಾಗಲಿದೆ. ಚುನಾವಣೆ ಅಧಿಕಾರಿಗಳು, ಸಿಬ್ಬಂದಿ ಎಲ್ಲ ಸಿದ್ಧತೆಗಳೊಂದಿಗೆ ಮತ ಎಣಿಕೆ ಮಾಡಲಿದ್ದಾರೆ. ಎಎಪಿ, ಬಿಜೆಪಿ ಮಧ್ಯೆ ಪ್ರಬಲ ಪೈಪೋಟಿ ಕಂಡು ಬಂದಿದ್ದು, ಈ ಬಾರಿ ದೆಹಲಿ ಯಾರ ಪಾಲಾಗಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಈ ಕೌತುಕಕ್ಕೆ ಕೆಲವೇ ಗಂಟೆಗಳಲ್ಲಿ ತೆರೆ ಬೀಳಲಿದೆ. ದೆಹಲಿ ಚುನಾವಣೆ ಫಲಿತಾಂಶ, ಪಕ್ಷವಾರು ಮತಗಳು, ಸೀಟುಗಳಿಕೆ ಕ್ಷಣ ಕ್ಷಣದ ಮಾಹಿತಿಗೆ ‘ಒನ್‌ಇಂಡಿಯಾ ಕನ್ನಡ’ ನೇರಪ್ರಸಾರ ವೀಕ್ಷಿಸಿ…