State
KJ ಟ್ರಾವೆಲ್ಸ್ ಎ ಸಿ ಸ್ಲೀಪರ್ ಬಸ್‌ಗಳಿಗೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಚಾಲನೆ

ಗೋಕಾಕ: ಹೊಸದಾಗಿ ಆರಂಭಗೊಂಡ ಗೋಕಾಕದಿಂದ ಬೆಂಗಳೂರು KJ ಟ್ರಾವೆಲ್ಸ್ ಎ ಸಿ ಸ್ಲೀಪರ್ ಬಸ್‌ಗಳಿಗೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಚಾಲನೆ ನೀಡಿದರು.
ಬೆಳಗಾವಿ ಗ್ರಾಮೀಣ ಮಹಿಳೆ ಅಧ್ಯಕ್ಷೆ ಕಲ್ಪನಾ ಜೋಶಿ ಅವರ ಮಾಲಿಕತ್ವದ ನೂತನ KJ ಟ್ರಾವೆಲ್ಸ್ ಬಸ್ ಗಳಿಗೆ ಹಿಲ್ ಗಾರ್ಡನ್ ಕಚೇರಿಯಲ್ಲಿ ಚಾಲನೆ ನೀಡಿ, ನಂತರ ಬಸವೇಶ್ವರ ವೃತ್ತದ ವರೆಗೆ ಪ್ರಯಾಣ ಮಾಡಿ ಶುಭ ಹಾರೈಸಿದರು.
ಈ ಸಂರ್ಭದಲ್ಲಿ KJ ಟ್ರಾವೆಲ್ಸ್ ಎ ಸಿ ಸ್ಲೀಪರ್ ಬಸ್‌ಗಳ ಮಾಲಿಕರಾದ ಕಲ್ಪನಾ ಜೋಶಿ, ಸಚಿವರ ಆಪ್ತ ಸಹಾಯಕ ಶಿವು ಪಾಟೀಲ್ ಸೇರಿದಂತೆ ಗಾರ್ಡನ್ ಕಚೇರಿ ಸಿಬ್ಬಂದಿ ಇದ್ದರು.



