Technology

2026 ರ ವರ್ಷದ ಮೊದಲ ʻಕಂಕಣ ಸೂರ್ಯಗ್ರಹಣʼ – ಎಲ್ಲೆಲ್ಲಿ ಗೋಚರ?

ನವದೆಹಲಿ: 2026 ರ ವರ್ಷದ ಮೊದಲ ಸೂರ್ಯಗ್ರಹಣ  ಮಂಗಳವಾರ (ಫೆ.17) ಗೋಚರವಾಗಲಿದೆ. ಇದನ್ನ ʻರಿಂಗ್ ಆಫ್ ಫೈರ್ʼ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಕಂಕಣ ಸೂರ್ಯಗ್ರಹಣ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ಮಂಗಳವಾರ ಮಧ್ಯಾಹ್ನ 3:26 ರ ವೇಳೆಗೆ ಗ್ರಹಣ ಪ್ರಾರಂಭವಾಗಿ ಸಂಜೆ 7:57 ಕ್ಕೆ ಕೊನೆಗೊಳ್ಳಲಿದೆ. ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು, 2 ನಿಮಿಷ 20 ಸೆಕೆಂಡುಗಳ ವರೆಗೆ ಇರಲಿದೆ. ಸಂಪೂರ್ಣ ಸೂರ್ಯಗ್ರಹಣದ ವೇಳೆ ಸೂರ್ಯನ ಕೇಂದ್ರದ 96% ರಷ್ಟನ್ನು ಚಂದ್ರ ಆವರಿಸಲಿದೆ. ಆದ್ರೆ ಈ ಗ್ರಹಣ ಭಾರತದಲ್ಲಿ ಗೋಚರ ಆಗುವುದಿಲ್ಲ. ಅಂಟಾರ್ಟಿಕಾ, ದಕ್ಷಿಣ ಆಫ್ರಿಕಾದ ಪ್ರದೇಶದಲ್ಲಿ, ದಕ್ಷಿಣ ಆಫ್ರಿಕಾ, ಟಾಂಜಾನಿಯಾ, ಜಾಂಬಿಯಾ ಮತ್ತು ಜಿಂಬಾಬ್ವೆಯಂತಹ ದೇಶಗಳಲ್ಲಿ ಗೋಚರವಾಗಲಿದೆ. ಆಕಾಶವೀಕ್ಷಕರು ವಿಶೇಷ ವೀಕ್ಷಣಾ ಸಾಧನಗಳನ್ನ ಬಳಸಿಕೊಂಡು ಗ್ರಹಣ ವೀಕ್ಷಿಸಲಿದ್ದಾರೆ.

ನಾಸಾ ಹೇಳುವಂತೆ, ಚಂದ್ರ ತನ್ನ ಕಕ್ಷೆಯಲ್ಲಿ ಭೂಮಿಯಿಂದ ಅತ್ಯಂತ ದೂರದ ಬಿಂದುವಿನಲ್ಲಿ ಅಥವಾ ಹತ್ತಿರದಲ್ಲಿದ್ದಾಗ ಸಂಭವಿಸುತ್ತದೆ. ಚಂದ್ರನು ಆಕಾಶದಲ್ಲಿ ಸ್ವಲ್ಪ ಚಿಕ್ಕದಾಗಿ ಕಾಣಿಸಿಕೊಳ್ಳಲಿದ್ದಾನೆ, ಸೂರ್ಯನನ್ನ ಸಂಪೂರ್ಣವಾಗಿ ಆವರಿಸಲು ಸಾಧ್ಯವಿಲ್ಲ. ಹಾಗಾಗಿ ಸಂಪೂರ್ಣ ಕತ್ತಲಾಗುವ ಬದಲಿಗೆ ವೀಕ್ಷಕರು ಸೂರ್ಯನ ಮುಂದೆ ಬಂದ ಚಂದ್ರನ ಗಾಢ ವೃತ್ತಾಕಾರದ ಸಿಲೂಯೆಟ್‌ (ಚಂದ್ರನ ಸುತ್ತ ಬೆಳಕು ಇರುವ ಮಾದರಿ) ಅನ್ನು ವೀಕ್ಷಿಸುತ್ತಾರೆ. ಆಗ ಸೂರ್ಯನ ಬೆಳಕು ಉಂಗುರದ ಮಾದರಿಯಲ್ಲಿ ಗೋಚರಿಸುತ್ತದೆ. ಅದಕ್ಕಾಗಿ ʻರಿಂಗ್ ಆಫ್ ಫೈರ್ʼ ಎಂದು ಕರೆಯಲಾಗುತ್ತದೆ. ವಾರ್ಷಿಕ ಗ್ರಹಣದಲ್ಲಿ ಹಗಲು – ಬೆಳಕಿನ ಆಟ ನಡೆಯುತ್ತದೆ.  

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button