
Viral Monalisa Bhosle Song: ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನಲ್ಲಿ ನಡೆಯುತ್ತಿರುವ ‘ ಮಹಾಕುಂಭ ಮೇಳ 2025’ ದಲ್ಲಿ ರುದ್ರಾಕ್ಷಿ ಮಾಲೆ ಮಾರಲು ಬಂದಿದ್ದ ಯುವತಿ ‘ಮೋನಾಲಿಸಾ ಭೋಸ್ಲೆ’ ಕಣ್ಣೋಟದ ವಿಡಿಯೋದಿಂದ ಸಾಕಷ್ಟು ವೈರಲ್ ಆಗಿದ್ದಳು.
ಇದೀಗ ಆಕೆಯ ಮಾದಕ ಕಣ್ಣಿನ ಮೇಲೆಯೇ ಹಾಡೊಂದು ರಚಿಸಲಾಗಿದೆ. ಈ ಬಾಲಿವುಡ್ ಹಾಡು ಯೂಟ್ಯೂಬ್‌ನಲ್ಲಿ ಹಲ್ ಚಲ್ ಸೃಷ್ಟಿಸಿದೆ. ಲಕ್ಷ ಲಕ್ಷ ವೀಕ್ಷಣೆ ಪಡೆದು ಆನ್‌ಲೈನ್‌ನಲ್ಲಿ ಧೂಳೆಬ್ಬಿಸುತ್ತಿದೆ.
ಮಾದಕ ಚೆಲುವು, ಕಣ್ಣೋಟದಿಂದಲೇ ಸಖತ್ ಸದ್ದು ಮಾಡಿದ್ದ ಯುವತಿ ಮೊನಾಲಿಸಾ ನೋಡ ನೋಡುತ್ತಿದ್ದಂತೆ ರಾತ್ರೋ ರಾತ್ರಿ ಫೇಮಸ್ ಆಗಿಬಿಟ್ಟಳು. ವಿವಿಧ ಸಿನಿಮಾ ರಂಗದಿಂದದಲ್ಲೂ ಈ ವೈರಲ್ ಬೆಡಗಿ ಮೋನಾಲಿಸಾಗೆ ಆಫರ್‌ಗಳು ಬಂದಿವೆ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೆ ಮೋನಾಲಿಸಾಳ ಕಣ್ಣುಗಳ ಮೇಲೆ ರಚಿಸಿದ ಹಿಂದಿಯ ‘ಮೋನಾಲಿಸಾ ಥೆರಿ ಆಕ್ಕೋ ಮಿ ಹೈ ನಶಾ’ (ನಿನ್ನ ಕಣ್ಣುಗಳು ಮಾದಕವಾಗಿವೆ) ಎಂಬ ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಎರಡೇ ದಿನಕ್ಕೆ 20 ಸಾವಿರ ಆಸುಪಾಸು ಇದ್ದ ವೀಕ್ಷಣೆ, ಏಳು ದಿನದಲ್ಲಿ 3.25 ಲಕ್ಷಕ್ಕೆ ಏರಿದೆ.
ಸೆನ್ಸೆಷನ್ ಕ್ರಿಯೇಟ್ ಮಾಡುತ್ತಿರುವ ‘ಕಣ್ಣೋಟ ಸಾಂಗ್’
‘ತುಳಸಿ ಮ್ಯೂಸಿಕ್’ ಯೂಟ್ಯೂಬ್ ಚಾನೆಲ್‌ನಲ್ಲಿ ಮೊನಾಲಿಸಾ ಬಾಲಿವುಡ್ ಸಾಂಗ್, ಮಹಾಕುಂಭ ಮೇಳ ವೈರಲ್ ಗರ್ಲ್ ಸಾಂಗ್ ಹೆಸರಿನಲ್ಲಿ ಈ ಹಾಡು ಅಪ್ಲೋಡ್ ಮಾಡಲಾಗಿದೆ. ಈ ಚಾನೆಲ್‌ಗೆ ಒಟ್ಟು 122ಕೆ ಚಂದಾದಾರರಿದ್ದಾರೆ. ಹಾಡಿನುದ್ದಕ್ಕೂ ಯುವತಿಯ ಫೋಟೋ ಆಗಾಗ ಬಂದು ಹೋಗುತ್ತದೆ. ವೈರಲ್ ಆಗಿದ್ದ ಆಕೆಯ ಮಾದಕ ಸೌಂದರ್ಯ ಕಣ್ಣೋಟ, ಮಾತಿನ ಶೈಲಿಯ ಫೋಟೋ, ವಿಡಿಯೋಗಳು ಹಾಡಿನಲ್ಲಿವೆ. ಈ ಹಾಡು ಸೆನ್ಸೆಷನ್ ಕ್ರಿಯೇಟ್ ಮಾಡುತ್ತಿದೆ.
ಬಾಲಿವುಡ್ ಖ್ಯಾತ ಹಿನ್ನೆಲೆ ಗಾಯಕರಾದ ಅರ್ಜಿತ್ ಸಿಂಗ್ ಅವರು ಮಾದಕ ಚೆಲುವೆಯ ಕಣ್ಣೋಟ ಆಧರಿಸಿ ಹಾಡಿ ಹಾಡು ಇದಾಗಿದೆ. ಪ್ರೇಕ್ಷಕರಲ್ಲಿ ಈ ಹಾಡು ಮತ್ತೆ ಮತ್ತೆ ಗುನುಗುವಂತೆ ಮಾಡಿದೆ. ಮೊನಾಲಿಸಾಳ ನೋಟ, ವಿಡಿಯೋಗಳು ಹಾಡಿನ ಸೊಬಗನ್ನು ಹೆಚ್ಚಿಸಿವೆ. ಅನೇಕರು ಈ ಹಾಡನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಸಾಂಗ್ ವಿಡಿಯೋ ನೋಡಿದ ಕೆಲವರು ಈ ಹಾಡನ್ನು ಅರ್ಜಿತ್ ಸಿಂಗ್ ಅವರು ಹಾಡಿಲ್ಲ ಎಂದು ಹೇಳಿದ್ದಾರೆ. ಮತ್ತೆ ಹಲವರು ಹಾಡು ಸೂಪರ್ ಆಗಿದೆ ಎಂದು ಮೇಲಿಂದ ಮೇಲೆ ನೋಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಲಕ್ಷ ಲಕ್ಷ ವೀಕ್ಷಣೆ ಪಡೆದುಕೊಂಡಿದೆ.
ಬಿಹಾರ ಮೂಲದ ಯುವತಿ ಮೊನಾಲಿಸಾ ರುದ್ರಾಕ್ಷಿ ಮಾರಲು ಪ್ರಯಾಗ್‌ರಾಜ್‌ಗೆ ಬಂದಿದ್ದರು. ಯಾರೋ ಆಕೆಯ ಫೋಟೋ ವಿಡಿಯೋ ತೆಗೆದು ಹರಿಬಿಡುತ್ತಿದ್ದಂತೆ ಒಂದೇ ದಿನದಲ್ಲಿ ವೈರಲ್ ಆಗಿಬಿಟ್ಟಳು. ನೋಡ ನೋಡುತ್ತಲೇ ದೇಶಾದ್ಯಂತ ಮುನ್ನೆಲೆಗೆ ಬಂದಳು. ಹೆಚ್ಚು ವಿವ್ಸ್, ಫಾಲೋವರ್ಸ್ ಪಡೆಯಲು ಮೊನಾಲಿಸಾ ಹೆಸರಿನ ಅದೆಷ್ಟೋ ಫೆಕ್ ಐಡಿಗಳು ಕ್ರಿಯೇಟ್ ಆಗಿಬಿಟ್ಟವು.
ಹಿಂದಿ, ತೆಲುಗು ಸಿನಿಮಾದಲ್ಲಿ ವೈರಲ್ ಬೆಡಗಿ
ಇಷ್ಟೆಲ್ಲ ಆಗುತ್ತಿದ್ದಂತೆ ವೈರಲ್ ಬೆಡಗಿಗೆ ಲುಕ್ ಬದಲಾಯಿತು. ಹೊಸ ವೇಷಭೂಷಣಗಳ ಫೋಟೋಗಳು ಹರಿದಾಟ ತೊಡಗಿವು. ಸದ್ಯ ಆಕೆಗೆ ಬಾಲಿವುಡ್ ನಲ್ಲಿ ಆಫರ್ ಬಂದಿವೆ ಎನ್ನಲಾಗುತ್ತಿದೆ. ಹಿಂದಿಯ ‘ದಿ ಡೈರಿ ಆಫ್ ಮಣಿಪುರ’ ಸಿನಿಮಾದಲ್ಲಿ ಮೊನಾಲಿಸಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಇನ್ನೂ ಕನ್ನಡದ ನಟ ಶಿವರಾಜ್ ಕುಮಾರ್ ಅವರು ನಟಿಸುವ ತೆಲುಗಿನ ಸಿನಿಮಾದಲ್ಲೂ ಬಣ್ಣ ಹಚ್ಚಲಿದ್ದಾಳೆ ಎನ್ನಲಾಗುತ್ತಿದೆ.