State

BIG NEWS : ಮೈಕ್ರೋ ಫೈನಾನ್ಸ್’ ಕಿರುಕುಳ ತಡೆಗೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಿ ಗೆಜೆಟೆಡ್ ಅಧಿಸೂಚನೆ ಪ್ರಕಟ.!

ಬೆಂಗಳೂರು : ‘ಮೈಕ್ರೋ ಫೈನಾನ್ಸ್’ ಕಿರುಕುಳ ತಡೆಗೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಿದ್ದು, ಗೆಜೆಟೆಡ್ ಅಧಿಸೂಚನೆ ಪ್ರಕಟಿಸಿದೆ.

ಏನಿದೆ ಆದೇಶದಲ್ಲಿ..?

ಕರ್ನಾಟಕ ಕಿರು (Micro) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ, 2025ರ ಫೆಬ್ರವರಿ ತಿಂಗಳ 12ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2025ರ ಕರ್ನಾಟಕ ಅಧ್ಯಾದೇಶ ಸಂಖ್ಯೆ : 02 ಎಂಬುದಾಗಿ ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ (ಭಾಗ IV-A) ಪ್ರಕಟಿಸಬೇಕೆಂದು ಆದೇಶಿಸಲಾಗಿದೆ.

 

2025 ರ ಕರ್ನಾಟಕ ಅಧ್ಯಾದೇಶ ಸಂಖ್ಯೆ:02
ಕರ್ನಾಟಕ ಕಿರು (Micro) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ)
ಅಧ್ಯಾದೇಶ, 2025

(ಭಾರತ ಗಣರಾಜ್ಯದ ಎಪ್ಪತ್ತಾರನೇ ವರ್ಷದಲ್ಲಿ ಕರ್ನಾಟಕ ರಾಜ್ಯಪಾಲರಿಂದ ಪ್ರಖ್ಯಾಪಿತವಾಗಿ 2025ರ ಫೆಬ್ರವರಿ ತಿಂಗಳ 12ನೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟವಾಗಿದೆ)
ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು (organizations) ಅಥವಾ ಲೇವಾದೇವಿದಾರನು ನೀಡುವ ದುಬಾರಿ ಬಡ್ಡಿ ದರಗಳ ಅನುಚಿತ ತೊಂದರೆ ಮತ್ತು ಬಲವಂತದ ವಸೂಲಾತಿ ವಿಧಾನಗಳಿಂದ ಆರ್ಥಿಕವಾಗಿ ದುರ್ಬಲ ಗುಂಪುಗಳು ಮತ್ತು ವ್ಯಕ್ತಿಗಳು, ವಿಶೇಷವಾಗಿ ರೈತರು, ಮಹಿಳೆಯರು ಮತ್ತು ಮಹಿಳಾ ಸ್ವಸಹಾಯ ಗುಂಪುಗಳನ್ನು ರಕ್ಷಿಸಲು ಮತ್ತು ಮುಕ್ತಗೊಳಿಸಲು ಹಾಗೂ ಅದಕ್ಕೆ ಸಂಬಂಧಪಟ್ಟ ಅಥವಾ ಅದಕ್ಕೆ ಪ್ರಾಸಂಗಿಕವಾದ ವಿಷಯಗಳಿಗಾಗಿ ಒಂದು ಅಧ್ಯಾದೇಶ.

(0) ಕರ್ನಾಟಕ ವಿಧಾನ ಸಭೆ ಮತ್ತು ವಿಧಾನ ಪರಿಷತ್ತು ಅಧಿವೇಶನದಲ್ಲಿ ಇಲ್ಲದಿರುವುದರಿಂದ, ಮತ್ತು ಭಾರತ ಸಂವಿಧಾನದ 213 (1)ನೇ ಅನುಚ್ಛೇದದ ಮೇರೆಗಿನ ಅಧಿಕಾರಗಳನ್ನು ಚಲಾಯಿಸಲು ಅವಶ್ಯಕ ಮತ್ತು ಯುಕ್ತವಾದ ಸನ್ನಿವೇಶಗಳು ಉದ್ಭವವಾಗಿವೆಯೆಂದು ಮಾನ್ಯ ಕರ್ನಾಟಕ ರಾಜ್ಯಪಾಲರು ಮನಗಂಡಿರುವುದರಿಂದ, ಈ ಮುಂದಿನ ಅಧ್ಯಾದೇಶವನ್ನು ಪ್ರಖ್ಯಾಪಿಸುವರು, ಎಂದರೆ.

1. ಸಂಕ್ಷಿಪ್ತ ಹೆಸರು, ಪ್ರಾರಂಭ ಮತ್ತು ಅನ್ವಯ.- (1) ಈ ಅಧ್ಯಾದೇಶವನ್ನು ಕರ್ನಾಟಕ
ಕಿರು (Micro) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ, 2025 ಎಂದು ಕರೆಯತಕ್ಕದ್ದು.

(2) ಇದು ಈ ಕೂಡಲೆ ಜಾರಿಗೆ ಬರತಕ್ಕದ್ದು.
(3) ಈ ಅಧ್ಯಾದೇಶದಲ್ಲಿ ಇರುವುದಾವುದೂ ಆರ್ಬಿಐನೊಂದಿಗೆ ನೋಂದಾಯಿಸಲಾದ ಯಾವುದೇ ಬ್ಯಾಂಕಿಂಗ್ ಅಥವಾ ಬ್ಯಾಂಕಿಂಗೇತರ ಹಣಕಾಸು ಕಂಪನಿಗೆ (NBFC) ಅನ್ವಯಿಸತಕ್ಕದ್ದಲ್ಲ.
(4) ಈ ಅಧ್ಯಾದೇಶದ ಉಪಬಂಧಗಳು ತತ್ಕಾಲದಲ್ಲಿ ಜಾರಿಯಲ್ಲಿರುವ ಅಸ್ತಿತ್ವದಲ್ಲಿನ ಯಾವುದೇ ಕಾನೂನಿನೊಂದಿಗೆ ಮುಂದುವರೆಯತಕ್ಕದು ಮತ್ತು ಅಧ್ಯಾರೋಹಿಯಾಗಿರತಕ್ಕದ್ದಲ್ಲ.
2. ಪರಿಭಾಷೆಗಳು.- (1) ಈ ಅಧ್ಯಾದೇಶದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ
ಹೊರತು,

(ಎ) “ಸಾಲಗಾರ” ಎಂದರೆ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು ಅಥವಾ ಲೇವಾದೇವಿದಾರರಿಂದ ಮೌಖಿಕ ಅಥವಾ ಲಿಖಿತ ಕರಾರಿನಡಿ ಷರತ್ತುಗಳು ಮತ್ತು ನಿಬಂಧನೆಗಳೊಂದಿಗೆ, ಯಾವುದೇ ಉದ್ದೇಶಕ್ಕಾಗಿ ಸಾಲದ ರೂಪದಲ್ಲಿ ಹಣವನ್ನು ಪಡೆಯುವ, ಆ ಹಣವನ್ನು ಕೆಲವು ಕಾಲಾವಧಿಯೊಳಗೆ ಮರುಪಾವತಿಸತಕ್ಕ ವ್ಯಕ್ತಿ ಅಥವಾ ಸ್ವಸಹಾಯ ಗುಂಪು (SHG) ಅಥವಾ ಜಂಟಿ ಹೊಣೆಗಾರಿಕೆ ಗುಂಪು (JLG) ಅಥವಾ ವ್ಯಕ್ತಿಗಳ ಗುಂಪು;

(ಬಿ) “ಬಲವಂತದ ಕ್ರಮ” ಎಂದರೆ 8ನೇ ಪ್ರಕರಣದಲ್ಲಿ ವಿವರಿಸಲಾದ ಬಲವಂತದ ಕ್ರಮ;
(ಸಿ) “ಬಡ್ಡಿ” ಎಂಬುದು ಈ ಅಧ್ಯಾದೇಶದ ಉಪಬಂಧಗಳಡಿ ಪರಿಭಾಷಿಸಿದ ನಿಬಂಧನೆಗಳ ಉದ್ದೇಶಗಳಿಗಾಗಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು ಅಥವಾ ಲೇವಾದೇವಿದಾರರಿಂದ ನಗದು ಅಥವಾ ಸಂದರ್ಭಾನುಸಾರವಾಗಿ ವಸ್ತುರೂಪದಲ್ಲಿ ಸಾಲಗಾರನಿಗೆ ನೀಡಿದ ಮೊತ್ತದ ಮೇಲಿನ ಲಾಭ ಹಾಗೂ ಅದು ದಿನಕ್ಕೆ, ವಾರಕ್ಕೆ, ತಿಂಗಳಿಗೆ ಅಥವಾ ವರ್ಷದ ಆಧಾರದಲ್ಲಿ ವಿಧಿಸಲಾದ ಬಡ್ಡಿಯನ್ನು ಒಳಗೊಳ್ಳುವುದು;
(ಡಿ) “ಸಾಲ” ಎಂದರೆ ಸಾಲಗಾರನಿಗೆ ಬಡ್ಡಿಯ ಮೇರೆಗೆ ಖಚಿತವಾಗಿ ಅಥವಾ ಅನ್ಯಥಾ ನೀಡಲಾದ ಹಣದ ರೂಪದಲ್ಲಿನ ಅಥವಾ ಬೀಜ, ಗೊಬ್ಬರ, ಇತ್ಯಾದಿಗಳಂತಹ ವಸ್ತುರೂಪದಲ್ಲಿನ ಮುಂಗಡ ಅಥವಾ ಕೈಸಾಲ;
(ಇ) “ಲೇವಾದೇವಿದಾರ” ಎಂಬುದು ಮೈಕ್ರೋ ಫೈನಾನ್ಸ್ ಸಂಸ್ಥೆ ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆಗಳನ್ನು ಒಳಗೊಳ್ಳುವುದು ಹಾಗೂ ದಿನಕ್ಕೆ, ವಾರಕ್ಕೆ ತಿಂಗಳಿಗೆ ಅಥವಾ ವರ್ಷದ ಆಧಾರದಲ್ಲಿ ಬಡ್ಡಿಯನ್ನು ವಿಧಿಸುವ ಮೂಲಕ ಲಾಭವನ್ನು ಗಳಿಸಲು ನಗದು ಅಥವಾ ವಸ್ತುರೂಪದಲ್ಲಿ ಸಾಲ ನೀಡುವ ಅಥವಾ ಯಾವುದೇ ಸ್ವರೂಪದ ಹಣಕಾಸು ನೆರವು ನೀಡುವುದನ್ನು ಪ್ರಧಾನ ಅಥವಾ ಪ್ರಾಸಂಗಿಕ ಚಟುವಟಿಕೆಯಾಗಿಸಿಕೊಂಡ ಯಾವುದೇ ಪಾಲುದಾರ ಫರ್ಮು ಅಥವಾ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು ಅಥವಾ ಡಿಜಿಟಲ್ ಸಾಲನೀಡಿಕೆ ಪ್ಲಾಟ್ಫಾರ್ಮ್;
(ಎಫ್) “ನೋಂದಣಿ ಪ್ರಾಧಿಕಾರಿ” ಎಂದರೆ ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿ:
ಪರಂತು ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ಅಂಥ ಇತರ ಗೊತ್ತುಪಡಿಸಿದ ಅಧಿಕಾರಿಯನ್ನು ನೋಂದಣಿ ಪ್ರಾಧಿಕಾರಿ ಎಂದು ನೇಮಿಸಬಹುದು.

(ಜಿ) “ಸಮಾಜದ ದುರ್ಬಲ ವರ್ಗ” ಎಂದರೆ ರೈತರು, ಮಹಿಳೆಯರು, ಮಹಿಳಾ ಸ್ವಸಹಾಯ ಗುಂಪುಗಳು, ಕೃಷಿ ಕಾರ್ಮಿಕರು, ಕಾರ್ಮಿಕರು, ಬೀದಿ ವ್ಯಾಪಾರಿಗಳು, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸುವ ಇತರ ವ್ಯಾಪಾರಿಗಳು, ಹಾಲಿನ ಡೈರಿಯಲ್ಲಿ ಕೆಲಸ ಮಾಡುವ ಕಾರ್ಮಿಕರು, ನಿರ್ಮಾಣ ಕಾರ್ಮಿಕರು, ವಲಸೆ ಕಾರ್ಮಿಕರು, ಅವರ ಮೂಲ ಸೇವೆಗಳಿಗೆ ಕುಗ್ಗಿರುವ ಪ್ರವೇಶಾವಕಾಶದ ಮತ್ತು ಮುಖ್ಯವಾಗಿ ಆರೋಗ್ಯ, ವಸತಿ ನೈರ್ಮಲ್ಯ ಇತ್ಯಾದಿಗಳ ಅಂತರ್ನಿಹಿತ ನಿರ್ಣಾಯಕತೆಗಳ (underlying determinants) ಕಾರಣದಿಂದಾಗಿ ಇತರರಿಗೆ ಹೋಲಿಸಿದಲ್ಲಿ ಅನನುಕೂಲತೆಯಿರುವ ಜನರ ಗುಂಪು ಮತ್ತು ಆರ್ಥಿಕವಾಗಿ ಹಿಂದುಳಿದ, ನಿಯತ ಆದಾಯದ ಮೂಲವಿಲ್ಲದೆ ಜೀವನೋಪಾಯದ ಮಾದರಿಗಳಲ್ಲಿ ಕೆಳಮಟ್ಟದಲ್ಲಿರುವವರು.
(2) ಈ ಅಧ್ಯಾದೇಶದಲ್ಲಿ ಬಳಸಿರುವ ಆದರೆ ಪರಿಭಾಷಿಸದಿರುವ ಪದಗಳು, ಸಂಬಂಧಪಟ್ಟ ಅಧಿನಿಯಮಗಳು ಮತ್ತು ಅದರಡಿ ರಚಿಸಿದ ನಿಯಮಗಳಲ್ಲಿ ಅನುಕ್ರಮವಾಗಿ ಅವುಗಳಿಗೆ ನೀಡಲಾದ ಅವೇ ಅರ್ಥಗಳನ್ನು ಹೊಂದಿರತಕ್ಕದ್ದು.

3. ಮೈಕ್ರೋ ಫೈನಾನ್ಸ್ ಸಂಸ್ಥೆ ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆ ಅಥವಾ ಲೇವಾದೇವಿದಾರರ ನೋಂದಣಿ.- (1) ಈ ಅಧ್ಯಾದೇಶದ ಪ್ರಾರಂಭದ ದಿನಾಂಕದಂದು ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆ ಅಥವಾ ಲೇವಾದೇವಿದಾರರು, ಈ ಅಧ್ಯಾದೇಶದ ಪ್ರಾರಂಭದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ, ಅವುಗಳು ಕಾರ್ಯನಿರ್ವಹಿಸುತ್ತಿರುವ ಅಥವಾ ಕಾರ್ಯನಿರ್ವಹಿಸಲು ಉದ್ದೇಶಿಸಿರುವ ಗ್ರಾಮಗಳು ಅಥವಾ ಪಟ್ಟಣಗಳು, ವಿಧಿಸಿರುವ ಅಥವಾ ವಿಧಿಸಲು ಉದ್ದೇಶಿಸಿರುವ ಬಡ್ಡಿಯ ದರ, ಯುಕ್ತ ಜಾಗರೂಕ ನಿರ್ವಹಣಾ ವ್ಯವಸ್ಥೆ ಮತ್ತು ವಸೂಲಾತಿಯನ್ನು ಜಾರಿಗೊಳಿಸುವ ವ್ಯವಸ್ಥೆ ಹಾಗೂ ಸಾಲ ನೀಡಿಕೆ.

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button