India
ದೆಹಲಿ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಪ್ರಮಾಣ ವಚವ ಸ್ವೀಕಾರ

Delhi Chief Minister: ರಾಷ್ಟ್ರ ರಾಜಧಾನಿಯ ರಾಮಲೀಲಾ ಮೈದಾನದಲ್ಲಿ ಗುರುವಾರ ನಡೆದ ಬೃಹತ್ ಸಮಾರಂಭದಲ್ಲಿ ರೇಖಾ ಗುಪ್ತಾ ದೆಹಲಿಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮುಖ್ಯಮಂತ್ರಿಗಳು ಮತ್ತು ಬಿಜೆಪಿ ಉನ್ನತ ನಾಯಕರು ಭಾಗವಹಿಸಿದ್ದರು.
ಶೀಲಾ ದೀಕ್ಷಿತ್, ಸುಷ್ಮಾ ಸ್ವರಾಜ್ ಮತ್ತು ಅತಿಶಿ ನಂತರ ದೆಹಲಿಯ ನಾಲ್ಕನೇ ಮಹಿಳಾ ಮುಖ್ಯಮಂತ್ರಿ ರೇಖಾ ಗುಪ್ತಾ ದೆಹಲಿ ಗದ್ದುಗೆ ಏರಿದ್ದಾರೆ.
ವಿಧಾನಸಭಾ ಚುನಾವಣೆಯ ಫಲಿತಾಂಶದ 11 ದಿನಗಳ ಬಳಿಕ ಇದೇ ಫೆ.19 ಸಂಜೆ ನಡೆಯುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಆಗಿ ರೇಖಾ ಗುಪ್ತಾ ಹೆಸರು ಘೋಷಿಸಿತು.
ರೇಖಾ ಗುಪ್ತಾ ವ್ಯಾಪಕ ಸಾರ್ವಜನಿಕ ಸೇವಾ ಅನುಭವ ಹೊಂದಿದ್ದು, ಈ ಹಿಂದೆ ಕೌನ್ಸಿಲರ್ ಕೂಡ ಆಗಿದ್ದರು. ರೇಖಾ ಅವರು ಶಾಲಿಮಾರ್ ಬಾಗ್‌ನಲ್ಲಿ ಎಎಪಿಯ ವಂದನಾ ಕುಮಾರಿಯನ್ನು ಸೋಲಿಸಿದ್ದರು.