Crime
ಮೂಕ ಹೆಣ್ಣುಮಗಳನ್ನು ಅತ್ಯಾಚಾರ ಮಾಡಿ ಕೊಂದ ಕ್ರೂರಿಗಳನ್ನ ನೇಣಿಗೆರಿಸಿ. ವರದಿ ಕೆ ಕೊಟ್ರೇಶ ಆಚಾರಿ

ವಿಜಯನಗರ: ಮೂಕ ಹೆಣ್ಣುಮಗಳನ್ನು ಅತ್ಯಾಚಾರ ಮಾಡಿ ಕೊಂದ ಕ್ರೂರಿಗಳನ್ನ ನೇಣಿಗೆರಿಸಿ 😡
ಬಿಡದಿಯಲ್ಲಿ ಖುಷಿ ಎಂಬ ಈ ಹೆಣ್ಣುಮಗಳನ್ನು ಬಹಳ ಕ್ರೂರವಾಗಿ ನಾಲ್ಕರಿಂದ ಹೆಚ್ಚು ಜನ ಸೇರಿ ಅತ್ಯಾಚಾರ ಮಾಡಿ ಬೆನ್ನು ಮೂಳೆ ಮುರಿದು, ಕತ್ತು ತಿರುಚಿ ಬಹಳ ಹಿಂಸೆ ಕೊಟ್ಟು ಕೊಲೆ ಮಾಡಿ ರೈಲ್ವೆ ಟ್ರ್ಯಾಕ್ ಬಳಿ ಬಿಸಾಡಿದ್ದಾರೆ..
ಪಾಪ ಈ ಹುಡುಗಿಗೆ ಮಾತು ಬರಲ್ವಂತೆ, ಕಿವಿ ಕೂಡ ಕೇಳಿಸೋದಿಲ್ವಂತೆ.. ಬಡವರ ಮನೆಯ ಅಕ್ಕಿಪಿಕ್ಕಿ ಜನಾಂಗದ ಹುಡುಗಿಯಂತೆ.. ಈ ಹೆಣ್ಣುಮಗಳ ಅತ್ಯಾಚಾರದ ಬಗ್ಗೆ ಮಾಧ್ಯಮಗಳು ದೊಡ್ಡ ಸುದ್ದಿ ಮಾಡಬೇಕು..
ಈ ದೇಶದಲ್ಲಿ ಬಡವರಪರ ಯಾರು ಇಲ್ಲ..!!
ಇಂತಹ ಕಿತ್ತೋಗಿರೋ ವ್ಯವಸ್ಥೆಯಲ್ಲಿ ನಮ್ಮ ಮನೆಯ ಮಕ್ಕಳು ಕೂಡ ಮುಂದೆ ಬದುಕಬೇಕಿದೆ..
ದಯವಿಟ್ಟು ಎಲ್ಲರೂ ಗಟ್ಟಿಧ್ವನಿಯಿಂದ ಸರ್ಕಾರವನ್ನು ಪ್ರಶ್ನಿಸಿ ಈ ಹೆಣ್ಣುಮಗಳ ಕುಟುಂಬಕ್ಕೆ ನ್ಯಾಯ ಕೊಡಿಸಬೇಕಿದೆ..


