Crime
ಖಾನಾಪೂರ : ಲಂಚ ಸ್ವೀಕರಿಸುವಾಗ ʻಲೋಕಾಯುಕ್ತʼ ಬಲೆಗೆ ಬಿದ್ದ ಸರ್ವೇಯರ್

ಬೆಳಗಾವಿ: ಲಂಚ ಸ್ವೀಕರಿಸುವಾಗ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಸರ್ವೇಯರ್ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಘಟನೆ ಖಾನಾಪುರದಲ್ಲಿ ನಡೆದಿದೆ.
ಖಾನಾಪೂರ ತಾಲೂಕಿನ ಕುಟಿನೋನಗರದ ವ್ಯಾಪ್ತಿಯ ಮಮಸಾಪುರ ಗ್ರಾಮದ ಸದಾಶಿವ ಕಾಂಬಳೆ ಎನ್ನುವರ ಹತ್ತಿರ ಪಿ.ಟಿ.ಶೀಟ್ ಮಾಡಿಕೊಡಲು ಸರ್ವೇಯರ್ ವಿನೋದ್ ಸಂಬನ್ನಿ ಎಂಬುವವರು ನಾಲ್ಕುವರೆ ಸಾವಿರ ಲಂಚ ಕೊಡುವಂತೆ ಕೇಳಿದ್ದರು ಎನ್ನಲಾಗಿದೆ.
ಇದರ ಬಗ್ಗೆ ಸದಾಶಿವ ಕಾಂಬಳೆ ಅವರು ಬೆಳಗಾವಿ ಲೋಕಾಯುಕ್ತ ಕಚೇರಿಯಲ್ಲಿ ದೂರು ನೀಡಿದ್ದರು, ದೂರು ದಾಖಲಾಗುತ್ತಿದಂತೆ ಲೋಕಾಯುಕ್ತ ಎಸ್ಪಿ ಹನುಮಂತರಾಯ ಅವರ ಮಾರ್ಗದರ್ಶನದಲ್ಲಿ ಡಿಎಸ್ಪಿ ಭರತ ರೆಡ್ಡಿ ಅವರ ನೇತೃತ್ವದಲ್ಲಿ ತಂಡ ಖಾನಾಪೂರ ಸರ್ವೇಯರ್ ವಿನೋದ್ ಸಂಬನ್ನಿ ಅವರನ್ನು ಕಾರ್ಯಾಚರಣೆ ನಡೆಸಿ ರೇಡ್ ಹ್ಯಾಂಡ್ ಆಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ದಾಳಿಯಲ್ಲಿ ಲೋಕಾಯುಕ್ತ ಅಧಿಕಾರಿಗಳಾದ ಸಂಗಮೇಶ ಹೊಸಮನಿ, ರವಿಕುಮಾರ್ ಧರ್ಮಚ್ಚಿ ಲೋಕಾಯುಕ್ತ ಪೊಲೀಸರು ಉಪಸ್ಥಿತರಿದ್ದರು.


