Crime
ಮಟಕಾ ಅಡ್ಡೆಯ ಮೇಲೆ ಬೆಳಗಾವಿ ನಗರ ಪೊಲೀಸರು ರಾತೋರಾತ್ರಿ ದಾಳಿ 10 ಜನರನ್ನು ಬಂಧಿಸಿ 1 ಲಕ್ಷ 70 ಸಾವಿರ ಹಣವನ್ನು ವಶಕ್ಕೆ

ಬೆಳಗಾವಿ: ಮಟಕಾ ಅಡ್ಡೆಯ ಮೇಲೆ ಬೆಳಗಾವಿ ನಗರ ಪೊಲೀಸರು ರಾತೋರಾತ್ರಿ ದಾಳಿ ನಡೆಸಿದ್ದಾರೆ. ಸಿಸಿಬಿ ಹಾಗೂ ಪೊಲೀಸರು ಮಟ್ಕಾ ಅಡ್ಡೆಯ ಮೇಲೆ ದಿಢೀರ್ ದಾಳಿ ನಡೆಸಿ ಲಕ್ಷಾಂತದ ರೂಪಾಯಿ ಜೊತೆಗೆ 10 ಜನರನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿ ಆಧಾರದ ಮೇಲೆ ಹಿಂಡಲಗಾ ಬಳಿ ತೋಟದ ಮನೆಯೊಂದರಲ್ಲೊ ಐದು ಟೇಲ್ ಹಾಕಿ ಬಿಂದಾಸ್ ಆಗಿ ಖದೀಮರು ದಂಧೆ ನಡೆಸುತ್ತಿದ್ದರು.
ಇದಕ್ಕೆ ಮುಂಬೈ ಮಟ್ಕಾ ಎಂದು ಬೋರ್ಡ್ ಸಹ ಹಾಕಲಾಗಿತ್ತು. ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ತಡರಾತ್ರಿ ಪೊಲೀಸರು ಫೀಲ್ಡಿಗಿಳಿದು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.ಸಿಸಿಬಿ ಹಾಗೂ ಸೆನ್ ಪೊಲೀಸರು ಒಟ್ಟು 10 ಜನರನ್ನು ಬಂಧಿಸಿ 1 ಲಕ್ಷ 70 ಸಾವಿರ ಹಣವನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದಷ್ಟೆ ಅಲ್ಲದೆ ನಗರದಾದ್ಯಂತ ಹಲವಾರು ಕಡೆಗಳಲ್ಲಿ ನಡೆದಿವೆ ಎನ್ನಲಾಗಿರುವ ಜೂಜು ಅಡ್ಡೆಗಳು, ಮಟಕಾ, ಹಾಗೂ ಡ್ರಗ್ಸ್ ಸಪ್ಲೈ ಕುರಿತು ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾಹಿತಿ ಪಡೆದುಕೊಂಡಿದ್ದಾರೆ..


